Karnataka Times
Trending Stories, Viral News, Gossips & Everything in Kannada

LIC Jeevan Tarun Policy: ಮಕ್ಕಳ ಶಿಕ್ಷಣದ ಖರ್ಚು ವೆಚ್ಚ ಭರಿಸಲು ಎಲ್ಐಸಿಯ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿ!

advertisement

ದೇಶದಲ್ಲಿ ವಾಸಿಸುವ ಪ್ರತಿಯೊಂದು ಆದಾಯದ ಗುಂಪಿಗೆ ತಕ್ಕ ಹಾಗೆ ಎಲ್ಐಸಿ (LIC) ಪಾಲಿಸಿಗಳು ಲಭ್ಯ ಇವೆ. ತಂದೆ, ತಾಯಿ ಮಕ್ಕಳ ಶಿಕ್ಷಣದ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಸಹಜ. ಇದಕ್ಕಾಗಿ ಪಾಲಕರು ಪ್ರಯತ್ನಪಟ್ಟು ಹಣ ಕೂಡಿಡಲು ಹೂಡಿಕೆ ಮಾಡುತ್ತಾರೆ. ಹಾಗೆ ನೀವು ಅಪಾಯ ಮುಕ್ತ ಹೂಡಿಕೆ ಮಾಡಬೇಕು ಹಾಗೂ ಅದಕ್ಕೆ ಸೂಕ್ತ ಆದಾಯ ಸಿಗಬೇಕು ಎಂದು ಯೋಚಿಸಿದರೆ, ಎಲ್ಐಸಿ ಯೋಜನೆಯಲ್ಲಿ ಹೂಡಿಕೆ ಮಾಡಿ ಅತ್ಯುತ್ತಮ ಲಾಭಗಳಿಸಿ.

LIC Jeevan Tarun Policy:

 

 

ಮಕ್ಕಳ ಭವಿಷ್ಯವನ್ನು ಸೆಕ್ಯೂರ್ಡ್ ಮಾಡಲು ನೀವು ಬಯಸಿದರೆ ಉತ್ತಮ ಆದಾಯವನ್ನು ಕೊಡುವಂತಹ ಹೂಡಿಕೆ ಯೋಜನೆಯಲ್ಲಿಯೇ ಹೂಡಿಕೆ ಮಾಡಬೇಕು. ಹೀಗೆ ನೀವು ಉಳಿತಾಯ ಮಾಡಲು ಬಯಸಿದರೆ ಜೀವನ ತರುಣ ಪಾಲಿಸಿ ಅತ್ಯಂತ ಸೂಕ್ತವಾಗಿರುವ ಯೋಜನೆ ಆಗಿದೆ. ಯೋಜನೆಯ ಮೂಲಕ ನೀವು ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಬಹುದು.

advertisement

ಎಲ್ಐಸಿಯು ಜೀವನ ತರುಣ್ ಯೋಜನೆ (LIC Jeevan Tarun Policy) ಯಲ್ಲಿ 90 ದಿನಗಳಿಂದ 12 ವರ್ಷಗಳ ವರೆಗಿನ ಪಾಲಿಸಿಯನ್ನು ಮಕ್ಕಳಿಗಾಗಿ ಮಾಡಿಸಬಹುದು. ಈ ಪಾಲಿಸಿ 25 ವರ್ಷಗಳಲ್ಲಿ ಮೆಚೂರ್ ಆಗುತ್ತದೆ.

ಮಕ್ಕಳ ಶಿಕ್ಷಣಕ್ಕಾಗಿ ಇರುವ ಯೋಜನೆ:

ಮಕ್ಕಳ ಶಿಕ್ಷಣವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಐಸಿ ಈ ಯೋಜನೆಯ ಆರಂಭಿಸಿದೆ. ಎಲ್ಐಸಿ (LIC) ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಮಕ್ಕಳ ಭವಿಷ್ಯಕ್ಕಾಗಿ ಅದರಲ್ಲೂ ಶಿಕ್ಷಣಕ್ಕಾಗಿ ಹಣ ಉಳಿತಾಯ ಮಾಡುವುದು ಮಾತ್ರವಲ್ಲದೆ ನಿಮ್ಮ ಮಕ್ಕಳಿಗಾಗಿ ವಿಮಾ ಸೌಲಭ್ಯವನ್ನು ಕೂಡ ಪಡೆಯಬಹುದು. ಮಗು ಹುಟ್ಟಿದಾಗಿನಿಂದ 12 ವರ್ಷಗಳವರೆಗೆ ನಿಮ್ಮ ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಬಹುದು.

ಮಕ್ಕಳು ಬೆಳೆದು ದೊಡ್ಡವರಾದ ನಂತರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದು ಅಥವಾ ದೇಶದಲ್ಲಿಯೇ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಕಾಲೇಜ್ ಆಯ್ಕೆ ಮಾಡಿಕೊಳ್ಳುವುದು ಸಹಜ. ಆದ್ರೆ ಹೀಗೆ ಉತ್ತಮ ಶಿಕ್ಷಣ ಬೇಕು ಎಂದಾದರೆ ಅದರ ವೆಚ್ಚವೂ ಕೂಡ ಜಾಸ್ತಿ. ಇದಕ್ಕಾಗಿಯೇ ಪಾಲಕರು ಮಗುವಿನ ಹುಟ್ಟಿನ ಆರಂಭದಿಂದಲೂ ಕೂಡ ಎಲ್ಐಸಿ ಜೀವನ ತರುಣ್ ಯೋಜನೆಯಂತಹ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ ಶಿಕ್ಷಣ ಸುಲಭವಾಗಿ ಈ ಹಣದಿಂದಲೇ ನಡೆಸಬಹುದು.

ನೀವು ನಿಮ್ಮ ಮಗು ಹುಟ್ಟಿದಾಗಿನಿಂದ ಎಲ್ಐಸಿ ತರುಣ್ ಪಾಲಿಸಿ ಆರಂಭಿಸಿದರೆ 25 ವರ್ಷಕ್ಕೆ ಅದು ಪಕ್ವವಾಗುತ್ತದೆ ಹಾಗೂ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಸಮಯದಲ್ಲಿ ಈ ಯೋಜನೆಯ ಹಣ ನಿಮ್ಮ ಕೈ ಸೇರುತ್ತದೆ. ಎಲ್ಐಸಿ ತರುಣ್ ಪಾಲಿಸಿ (LIC Jeevan Tarun Policy) ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಎಲ್ಐಸಿ ಏಜೆಂಟ್ ರನ್ನು ಸಂಪರ್ಕಿಸಬಹುದು.

advertisement

Leave A Reply

Your email address will not be published.