Karnataka Times
Trending Stories, Viral News, Gossips & Everything in Kannada

Yuva Nidhi Scheme: ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಪ್ರತಿ ತಿಂಗಳು ಈ ಕೆಲಸ ಮಾಡುವುದು ಕಡ್ಡಾಯ!

advertisement

ಕರ್ನಾಟಕ ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು ಹಲವಷ್ಟು ಜನರು ಈ ಯೋಜನೆಗಳ ಸದುಪಯೋಗ ಕೂಡ ಮಾಡುತ್ತಿದ್ದಾರೆ.ಈ ಯುವನಿಧಿ ಯೋಜನೆಯ ಮೂಲಕ 2022-23 ಸಾಲಿನಲ್ಲಿ ಪದವಿ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೇ ಇದ್ದಲ್ಲಿ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ (Diploma) ಮುಗಿಸಿದವರಿಗೆ ತಿಂಗಳಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಿದೆ.

ಹೀಗೆ ಮಾಡಬೇಕು:

 

 

ಯುವ ನಿಧಿ ಯೋಜನೆಗೆ (Yuva Nidhi Scheme) ಅರ್ಜಿ ಸಲ್ಲಿಸಿ ಹಣ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ಹೋಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡುವುದು ಕಡ್ಡಾಯ ವಾಗಿದೆ.‌ ಅದೇ ರೀತಿ ಕೆಲಸ ಸಿಕ್ಕಿದ್ದಲ್ಲಿ ಈ ಬಗ್ಗೆಯು ಸರಿಯಾದ ಮಾಹಿತಿ ನೀಡಬೇಕು.

ದಾಖಲೆಗಳು ಸರಿಯಾಗಿರಬೇಕು:

advertisement

ಅರ್ಜಿ ಸಲ್ಲಿಕೆ ಮಾಡಿದವರ ದಾಖಲೆಗಳು ಸರಿಯಾಗಿ ಇದ್ದರೆ ಕೆಲಸ ಇಲ್ಲದೆ ಆರು ತಿಂಗಳು ಆದ ಅಭ್ಯರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಯುವ ನಿಧಿಗೆ ನೋಂದಣಿ ಪ್ರಕ್ರಿಯೆ ಡಿಸೆಂಬರ್‌ 26 ರಿಂದ ಶುರುವಾಗಿದ್ದು ಅರ್ಜಿ ಸಲ್ಲಿಕೆಗೆ ಇನ್ನು ಅವಕಾಶ ಇದೆ. ಅರ್ಜಿ ಸಲ್ಲಿಸ ಬಯಸುವವರು https://sevasindhuservices.karnataka.gov.in/ ಈ ಲಿಂಕ್‌ ಬಳಸಿ ಅರ್ಜಿ ಸಲ್ಲಿಸಬಹುದು.

ಇವರು ಅರ್ಹರಲ್ಲ:

ಸ್ವಯಂ ಉದ್ಯೋಗ ಮಾಡುವವರು ಅಥವಾ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಇವರು ಅರ್ಹರಲ್ಲ. ಇನ್ನೂ ಉನ್ನತ ಶಿಕ್ಷಣವನ್ನು ಪಡೆಯುವರು‌ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.

ಈ ದಾಖಲೆ ಬೇಕು:

ಅರ್ಜಿ ಸಲ್ಲಿಕೆ ಮಾಡಲು ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾರ್ಕ್ಸ್‌ ಕಾರ್ಡ್, ಪದವಿ ಅಂಕಪಟ್ಟಿ ಡಿಪ್ಲೋಮಾ ಪ್ರಮಾಣಪತ್ರ. ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಇತ್ಯಾದಿ ದಾಖಲೆ ಹೊಂದಿರಬೇಕು.

advertisement

Leave A Reply

Your email address will not be published.