Karnataka Times
Trending Stories, Viral News, Gossips & Everything in Kannada

Crop Insurance: ಬೆಳೆ ವಿಮೆ ಹಣಕ್ಕಾಗಿ ಕಾಯುತ್ತಿದ್ದವರಿಗೆ ಹೊಸ ಅಪ್ಡೇಟ್!

advertisement

ಇನ್ನು ಈ ಬಾರಿ ಅಕಾಲಿಕ ಮಳೆ ಮತ್ತು ಜಲಕ್ಷಾಮ ಎದುರಾಗಿರುವ ಕಾರಣ ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆ ನಾಶ ಆಗಿದ್ದು, ರೈತರು ಬೆಳೆದಿದ್ದ ಬೆಳೆಗೆ ಸರಿಯಾದ ಇಳುವರಿಯು ಕೂಡ ಸಿಕ್ಕಿಲ್ಲ, ಅದರಿಂದ ಹಲವಾರು ರೈತರು ಕಂಗೆಟ್ಟಿದ್ದರು. ಇನ್ನು ಅವರ ಕೃಷಿಯನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಸಹಾಯ ಮಾಡುವ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಯಿತು. ಇನ್ನು ಈ ನಿಟ್ಟಿನಲ್ಲಿ ಬಂದಂತಹ ಯೋಜನೆಯೇ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Fasal Bima Yojana).

ಇನ್ನು ಈ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ ಸರಿಯಾದ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ನೀಡಿವಂತೆ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ನೋಂದಾಯಿಸಿಕೊಂಡಂತಹ ರೈತರ ಸಂಖ್ಯೆ 25 ಲಕ್ಷ. ಇನ್ನು ಇದಕ್ಕೆ ಸರ್ಕಾರವು ನಿಗದಿತವಾದಂತಹ ಹಣವನ್ನು ಮೀಸಲಿಟ್ಟಿತ್ತು ಮತ್ತು ಅದನ್ನು ಬಿಡುಗಡೆಯು ಕೂಡ ಮಾಡಿತ್ತು. ಅಂದರೆ ಸರ್ಕಾರ ಸುಮಾರು 800 ಕೋಟಿಯಷ್ಟು ಹಣ ಈಗಾಗಲೇ ಬಿಡುಗಡೆ ಮಾಡಿದ್ದು, ಹಲವಾರು ರೈತರ ಖಾತೆಗೆ ಈಗಾಗಲೇ ಆ ಹಣವನ್ನು ಜಮೆ ಮಾಡಲಾಗಿದೆ. ಇನ್ನು ಬಾಕಿ ಇರುವಂತಹ ರೈತರ ಖಾತೆಗೆ ಹಣ ಜಮೆ ಆಗದೆ ಇದೆ.

ಅದನ್ನು ಈ ತಿಂಗಳ 31ರ ಒಳಗಾಗಿ ಮತ್ತೆ 800 ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಈಗ ಮುಂದಾಗಿದೆ. ಅದರಂತೆ ಈಗ ಬಿಡುಗಡೆ ಆಗುವಂತಹ 800 ಕೋಟಿ ಹಣದಲ್ಲಿ ಯಾರ ಖಾತೆಗೆ ಹಣ ಜಮೆ ಆಗದೆ ಇದೆಯೋ ಅವರ ಖಾತೆಗೆ ರೂ 48000 ದಷ್ಟು ಹಣ ಸೇರಲಿದೆ ಎಂದು ಸರ್ಕಾರವು ಅಧಿಕೃತವಾಗಿ ಸೂಚನೆ ನೀಡಿದೆ. ಇನ್ನು ಇದಕ್ಕೆ ಅರ್ಜಿ ಸಲ್ಲಿಸಿರುವಂತಹ ಅರ್ಜಿದಾರರು ಒಮ್ಮೆ ತಮ್ಮ ಖಾತೆಯನ್ನು ಪರಿಶೀಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

 

advertisement

Image Source: ffreedom App Blog

 

ಇನ್ನು 2023ರ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ (Pradhan Mantri Fasal Bima Yojana), ಮುಂಗಾರು ಹಂಗಾಮಿನ ಬೆಳೆ ಕಟಾವು ಕಾರ್ಯಕ್ರಮದ ಅಡಿಯಲ್ಲಿ, ರೈತರಿಗೆ ಬೆಳೆ ವಿಮೆ (Crop Insurance) ಯ ಕುರಿತಾದಂತಹ ವಿವರಗಳನ್ನು ಪರಿಶೀಲಿಸಿ, ವಿಮಾ (Insurance) ಸಂಸ್ಥೆಯ ಮೂಲಕ ಹಣವನ್ನು ಒದಗಿಸಲು ಸರ್ಕಾರವು ಮುಂದಾಗಿತ್ತು. ಇನ್ನು ಅದರಂತೆ ಕೆಲವು ತಾಂತ್ರಿಕ ದೋಷಗಳ ಸಲುವಾಗಿ ಹಣವು ಸರಿಯಾದ ಸಮಯಕ್ಕೆ ರೈತರಿಗೆ ತಲುಪದೇ ಇರುವ ಕಾರಣ ಇದೀಗ ಒಂದು ವಾರದ ಒಳಗಾಗಿ ಎಲ್ಲ ತಾಂತ್ರಿಕ ದೋಷಗಳನ್ನು ನಿವಾರಿಸಿ, ರೈತರಿಗೆ ಅವರ ಹಣವನ್ನು ತಲುಪಿಸುವುದಾಗಿ ಕೃಷಿ ಸಚಿವರು ಹೇಳಿಕೆ ನೀಡಿದ್ದಾರೆ.

 

Image Source: iStock

 

ಇನ್ನು ಈವರೆಗೆ 25% ನಷ್ಟು ರೈತರಿಗೆ ಮಾತ್ರ ಬೆಳೆಯ ವಿಮೆ ಸಿಕ್ಕಿದ್ದು, ಇನ್ನೂ 75% ರೈತರಿಗೆ ಹಣವನ್ನು ತಲುಪಿಸಬೇಕಾಗಿದೆ. ಅಂದರೆ ಈಗಾಗಲೇ 25 ಲಕ್ಷ ನೋಂದಾಯಿತ ಅರ್ಜಿದಾರರ ಪೈಕಿ 8ಲಕ್ಷ ಅರ್ಜಿದಾರರಿಗೆ ಈಗಾಗಲೇ ಹಣವನ್ನು ತಲುಪಿಸಲಾಗಿದ್ದು, ಇನ್ನು ಈ ತಿಂಗಳ ಅಂತ್ಯದ ಒಳಗಾಗಿ 13ಲಕ್ಷ ನೋಂದಾಯಿತ ರೈತರಿಗೆ ಬೆಳೆ ವಿಮೆ (Crop Insurance) ಹಣವನ್ನು ತಲುಪಿಸುವುದಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ (N. Chaluvaraya Swamy) ಅವರು ತಿಳಿಸಿದ್ದಾರೆ. ಅದು ಈ ತಿಂಗಳ ಅಂದರೆ ಮಾರ್ಚ್ 31 2024ರ ಒಳಗಾಗಿ ಎಲ್ಲರ ಖಾತೆಗೆ ಹಣ ಜಮೆ ಮಾಡುವ ಸಲುವಾಗಿ ಸರ್ಕಾರವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.

advertisement

Leave A Reply

Your email address will not be published.