Karnataka Times
Trending Stories, Viral News, Gossips & Everything in Kannada

Loan: ಶೀಘ್ರದಲ್ಲೇ ಸಾಲ ಬೇಕಿದ್ದವರಿಗೆ ಸಿಗಲಿದೆ ಗುಡ್ ನ್ಯೂಸ್! ಯಾವ ಸಿಬಿಲ್ ಕೂಡ ಬೇಡ

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಸಾಲ ಅನ್ನೋದು ಅತೀ ಅವಶ್ಯಕ ವಾಗುತ್ತದೆ. ಮನೆ, ವಾಹನ, ಚಿನ್ನ ಖರೀದಿ ಇತ್ಯಾದಿ ಯಾವುದೇ ಕಾರ್ಯ ಪೂರ್ಣವಾಗಬೇಕಾದ್ರೂ ಹೆಚ್ಚಿನ ಜನರು ಸಾಲಕ್ಕೆ ಅವಲಂಬಿತರಾಗುತ್ತಾರೆ‌. ಸಾಲ ಬೇಕು ಅಂದಾಗ ಬ್ಯಾಂಕ್ ಗಳು ಸೂಕ್ತವಾಗಿ ‌ಪರಿಶೀಲನೆ ಮಾಡಿ ಸಾಲ (Loan) ನೀಡುತ್ತವೆ‌‌. ಆರ್ಥಿಕ ಆದಾಯ, ವ್ಯಕ್ತಿಯ ಉದ್ಯೋಗ, ಸಿಬಿಲ್ ಸ್ಕೋರ್ (CIBIL Score) ಇತ್ಯಾದಿಯನ್ನು ಪರಿಗಣಿಸಿ ಆಯ್ಕೆಗೆ ಅನುಗುಣವಾಗಿ ಬ್ಯಾಂಕುಗಳು ಸಾಲ ನೀಡುತ್ತದೆ.‌ ಆದ್ರೆ ಬಡ ವರ್ಗದ ಜನತೆಗೆ ಈ ಬ್ಯಾಂಕ್ ಸಾಲಗಳು ಸಿಗುವುದು ಕಷ್ಟವೇ, ಅದರಲ್ಲೂ ಕೃಷಿಕರಿಗೆ ಇಂದು ಸಾಲ ಪಡೆಯುದು ಕಷ್ಟಕರ, ಅದಕ್ಕೆ ಬೇಕಾದ ದಾಖಲೆಗಳು ರೈತರಲ್ಲಿ ಇರುವುದಿಲ್ಲ. ಇದೀಗ ಸಾಲ ಪಡೆಯಲು ಸಿಬಿಲ್ ಸ್ಕೋರ್ (CIBIL Score) ಇಲ್ಲವೆಂದು ಅರ್ಜಿ ತಿರಸ್ಕಾರ ಮಾಡಬಾರದು ಎಂಬ ಸೂಚನೆಯೊಂದನ್ನು ಅಧಿಕಾರಿ ಯೊಬ್ಬರು ನೀಡಿದ್ದಾರೆ.

ಹೆಚ್ಚಿನ ಒತ್ತು ನೀಡಬೇಕು:

ಕೃಷಿ, ಶಿಕ್ಷಣ, ವಸತಿ ಸಾಲಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಆರ್ಥಿಕವಾಗಿ ಆದ್ಯತಾ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಅದರಲ್ಲೂ, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಹೆಚ್ಚಿನ‌ ಉತ್ತೇಜನ ಸಿಗುವಂತಾಗಬೇಕು. ಶಿಕ್ಷಣ, ಮತ್ತು ವಸತಿ ಕ್ಷೇತ್ರದಲ್ಲಿಯು ಅಭಿವೃದ್ಧಿ ಯಾಗಬೇಕು ಎಂದು ಜಿ.ಪಂ ಸಿ ಇ ಓ ಸ್ನೇಹಲ್ ಸುಧಾಕರ ಲೋಖಂಡೆ ಬ್ಯಾಂಕುಗಳಿಗೆ ಸೂಚನೆ ನೀಡಿದರು.

 

Image Source: AgFarmIndia

 

advertisement

ಅರ್ಜಿ ತಿರಸ್ಕಾರ ಮಾಡಬಾರದು:

ಇಂದು ಸಿಬಿಲ್ ಸ್ಕೋರ್ (CIBIL Score) ಇಲ್ಲವೆಂದು‌ ಸಾಲ (Loan) ಸೌಲಭ್ಯ ಪಡೆಯಲು ಅರ್ಜಿ ತಿರಸ್ಕಾರ ಆದ ಉದಾಹರಣೆಗಳು ಹೆಚ್ಚು ಕೇಳಿಬಂದಿದೆ. ಹಾಗಾಗಿ ಕೃಷಿ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಿಗೆ ಅವಶ್ಯಕತೆ ಇರುವ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಂಕುಗಳು ಸಾಲ ನೀಡಬೇಕು. ಸಿಬಿಲ್ ಸ್ಕೋರ್ (CIBIL Score) ಇಲ್ಲವೆಂದು ಅರ್ಜಿ ತಿರಸ್ಕಾರ ಆಗಬಾರದು ಎಂದರು. ಅದೇ ರೀತಿ ಎಲ್ಲ ಬ್ಯಾಂಕುಗಳು ತಮ್ಮಲ್ಲಿರುವ ಎಲ್ಲ ಉಳಿತಾಯ ಖಾತೆಗಳನ್ನು ಡಿಜಿಟಲ್ ಮೋಡ್‍ಗೆ ಜಾರಿ ಗೊಳಿಸಬೇಕು. ಇಲ್ಲಿಯವರೆಗೆ ಶೇ.89 ಖಾತೆಗಳು ಡಿಜಿಟಲೈಸ್ ಆಗಿದ್ದು ಶೇ.100 ರಷ್ಟು ಈ ಪ್ರಗತಿ ಆಗಬೇಕು ಎಂದರು.

ಕೃಷಿಗೆ ಉತ್ತೇಜನ:

ಈಗಾಗಲೇ ರೈತರನ್ನು ಕೃಷಿಯ‌ಲ್ಲಿ ಉತ್ತೇಜನ ಮಾಡುವಲ್ಲಿ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ರೈತರಿಗೆ ಇಂದು ಕೃಷಿ ಕಾರ್ಯ ಚಟುವಟಿಕೆಗಳನ್ನು ಮಾಡಲು, ಬೇಸಾಯ ಮಾಡಲು ಬಿತ್ತನೆ ಬೀಜ, ಔಷಧಗಳು, ಇತ್ಯಾದಿ ನಿರ್ವಹಣಿಗೆ ಬ್ಯಾಂಕ್‌ ವತಿಯಿಂದ ಶೂನ್ಯ ಬಡ್ಡಿ ದರದ ಸಾಲವನ್ನು ನೀಡಲಾಗುತ್ತದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ (Loan) ನೀಡುವ ಯೋಜನೆಯನ್ನು ಕೂಡ ಸರಕಾರ ಆರಂಭ ಮಾಡಿದೆ. ಹಾಗಾಗಿ ಬ್ಯಾಂಕ್ ಗಳು ಕೂಡ ಈ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕು ಎನ್ನುವ ಸೂಚನೆಯನ್ನು ನೀಡಿದ್ದಾರೆ.

advertisement

Leave A Reply

Your email address will not be published.