Karnataka Times
Trending Stories, Viral News, Gossips & Everything in Kannada

CIBIL Score: ಸಿಬಿಲ್ ಸ್ಕೋರ್ ಕಡಿಮೆಯಾಗಿ ಸಾಲವೇ ಸಿಗದವರಿಗೆ ಭರ್ಜರಿ ಸಿಹಿಸುದ್ದಿ! ಕೂಡಲೇ ಈ ಕೆಲಸ ಮಾಡಿ

advertisement

ಜೀವನದಲ್ಲಿ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಲೋನ್ (Loan) ಪಡೆದುಕೊಳ್ಳುವ ಯೋಜನೆಯನ್ನು ಮಾಡುತ್ತಾರೆ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಲೋನ್ ಪಡೆದುಕೊಳ್ಳುವುದಕ್ಕೆ ಬ್ಯಾಂಕಿನವರು ಮೊದಲನೇದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡುತ್ತಾರೆ. ಕ್ರೆಡಿಟ್ ಸ್ಕೋರ್ (Credit Score) ಲೋ ಆಗಿದ್ರೆ ಖಂಡಿತವಾಗಿ ಲೋನ್ ಸಿಗುವುದು ಸಾಕಷ್ಟು ಬಾರಿ ಅಸಾಧ್ಯವಾಗಿ ಬಿಡುತ್ತೆ. ಇವತ್ತಿನ ಲೇಖನಿಯಲ್ಲಿ ನಿಮ್ಮ  CIBIL Score ಲೋ ಆಗಿದ್ದರೆ ಅದಕ್ಕೆ ಬೂಸ್ಟ್ ನೀಡುವುದು ಹೇಗೆ ಅನ್ನೋದನ್ನ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರತಿ ಬಾರಿ ಸಾಲ (Loan) ಪಡೆದುಕೊಳ್ಳುವಂತಹ ಸಂದರ್ಭದಲ್ಲಿ ಬ್ಯಾಂಕಿನವರು ಪ್ರಥಮವಾಗಿ ನೋಡುವುದು ನಿಮ್ಮ ಕ್ರೆಡಿಟ್ ಸ್ಕೋರ್. ಸಾಲ ಪಡೆದುಕೊಳ್ಳಲು ನೀವು ಅರ್ಹರು ಇಲ್ಲವೋ ಎನ್ನುವುದಕ್ಕೆ ಕ್ರೆಡಿಟ್ ಸ್ಕೋರ್ ಮಾಪನವಾಗಿದೆ. ಹೀಗಾಗಿಯೇ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹಾಗಿದ್ರೆ ಬನ್ನಿ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದರೆ ಅದನ್ನು ಹೆಚ್ಚು ಗೊಳಿಸುವುದು ಹೇಗೆ ಅನ್ನೋದನ್ನ ಸರಿಯಾಗಿ ತಿಳಿದುಕೊಳ್ಳೋಣ.

advertisement

Image Source: Buddy Loan

 

  1. ನೀವು ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ಮೂಲಕ ಪಡೆದುಕೊಂಡಿರುವಂತಹ ಲೋನ್ ಅನ್ನು ಸರಿಯಾದ ಸಮಯಕ್ಕೆ ಕಟ್ಟುವುದನ್ನು ಮತ್ತೆ ಪ್ರಾರಂಭಿಸಿ. ಇದರಿಂದಾಗಿ ಕೇವಲ ನಿಮ್ಮ ಕ್ರೆಡಿಟ್ ಸಾಲಗಳು ತೀರೋದು ಮಾತ್ರವಲ್ಲದೆ ಪಾತಾಳಕ್ಕೆ ಬಿದ್ದಿರುವಂತಹ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಮೇಲಕ್ಕೆ ಏಳೋದ್ರಲ್ಲಿ ಕೂಡ ಯಾವುದೇ ಅನುಮಾನವಿಲ್ಲ. ಹೀಗಾಗಿ ಮತ್ತೆ ಸರಿಯಾದ ಸಮಯಕ್ಕೆ ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡಿರುವಂತಹ ಸಾಲಗಳನ್ನು ಸರಿಯಾದ ಸಮಯಕ್ಕೆ ಕಟ್ಟುವುದನ್ನು ಪ್ರಾರಂಭಿಸಿ.
  2. ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ನೀವು ಸರಿಯಾದ ರೀತಿಯಲ್ಲಿ ಮೈನ್ಟೈನ್ ಮಾಡಬೇಕಾಗಿರುತ್ತದೆ ಎಂಬುದನ್ನು ನೀವು ಮೊದಲಿಗೆ ತಿಳಿದುಕೊಳ್ಳಬೇಕಾಗಿದೆ. ಒಂದು ವೇಳೆ ನೀವು ಇದನ್ನು ಸರಿಯಾದ ರೀತಿಯಲ್ಲಿ ಬ್ಯಾಲೆನ್ಸ್ ಮಾಡದೆ ಹೋದಲ್ಲಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಕಡಿಮೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನೀವು ತಪ್ಪದೆ ಈ ಮೇಲೆ ಹೇಳಿರುವಂತಹ ಕ್ರಮಗಳನ್ನು ಪಾಲಿಸಬೇಕಾಗಿರುತ್ತದೆ.
  3. ಒಂದು ವೇಳೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬೂಸ್ಟ್ ಮಾಡಬೇಕು ಎನ್ನುವ ಬಗ್ಗೆ ಯೋಚನೆಯನ್ನು ಹೊಂದಿದ್ದರೆ ತಪ್ಪದೆ ಯಾವುದೇ ರೀತಿಯ ಬಿಲ್ ಅನ್ನು ಕಟ್ಟೊದಿದ್ರೆ ಅವುಗಳನ್ನ ಬಾಕಿ ಇಟ್ಟುಕೊಳ್ಳಬೇಡಿ. ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಬಾಕಿ ಇಟ್ಟುಕೊಳ್ಳುವುದರ ಮೂಲಕ ನೀವು ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದಕ್ಕೆ ಕಾರಣರಾಗಬಹುದು. ಯಾವುದೇ ರೀತಿಯ ಬಿಲ್ ಪೆಂಡಿಂಗ್ ಅನ್ನು ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಕಡಿಮೆಯಾಗುವುದಕ್ಕೆ ಕಾರಣವಾಗಲಿದೆ ಹಾಗೂ ನಿಮಗೆ ಬೇರೆ ಬ್ಯಾಂಕುಗಳಿಂದ ಲೋನ್ ಸಿಗುವುದು ಕೂಡ ಅಪರೂಪ ವಾಗಲಿದೆ.
  4. ಒಂದು ವೇಳೆ ನಿಮ್ಮ ಸ್ನೇಹಿತರ ಬಳಗದಲ್ಲಿ ಯಾರಾದರೂ ಲೋನ್ ಪಡೆದುಕೊಂಡು, ಆ ಲೋನ್ ಗೆ ನಿಮ್ಮನ್ನು ಗ್ಯಾರೆಂಟಾಗಿ ಆಯ್ಕೆ ಮಾಡಿದ್ದಲ್ಲಿ ಇದರಿಂದಲೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಹೌದು ಒಂದು ವೇಳೆ ಅವರು ಸರಿಯಾದ ರೀತಿಯಲ್ಲಿ ಸಾಲವನ್ನು ಕಟ್ಟದೆ ಹೋದಲ್ಲಿ ಅದರ ದುಷ್ಪರಿಣಾಮ ಎನ್ನುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಬೀಳುತ್ತದೆ. ಹೀಗಾಗಿ ಈ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ಮುಂದೊಂದು ದಿನ ಬ್ಯಾಂಕಿನವರು ನಿಮಗೆ ಲೋನ್ ಬೇಕಾದಾಗ ನೀಡದೆ ಇರುವಂತಹ ಸಾಧ್ಯತೆಗಳು ಕೂಡ ಇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
  5. ಪ್ರಮುಖವಾಗಿ ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವ ಸಂದರ್ಭದಲ್ಲಿ ನೀವು ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುತ್ತದೆ. ಹೌದು ಗೆಳೆಯರೇ ಪ್ರಮುಖವಾಗಿ ನೀವು ಕ್ರೆಡಿಟ್ ಕಾರ್ಡ್ ಅನ್ನು ಬಳಸುವಾಗ ಅದಕ್ಕೊಂದು ಲಿಮಿಟ್ ಇಟ್ಕೊಳ್ಳಿ. ಲಿಮಿಟ್ ಇಲ್ಲದೆ ಖರ್ಚು ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಅದರ ದುಷ್ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ.

advertisement

Leave A Reply

Your email address will not be published.