Karnataka Times
Trending Stories, Viral News, Gossips & Everything in Kannada

Vida V1: ಹೀರೋ ಸಂಸ್ಥೆಯ ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಸಿಕ್ತಾ ಇದೆ ಬರೋಬ್ಬರಿ 30 ಸಾವಿರ ರೂಪಾಯಿಗಳ ಆಫರ್.

advertisement

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಹ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಕಾರಣದಿಂದಾಗಿಯೇ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿವೆ. ಜನರಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಅದರಲ್ಲಿ ವಿಶೇಷವಾಗಿ ಈಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಿಕ ಕಂಪನಿ ಆಗಿರುವಂತಹ ಹೀರೋ ಮೋಟೋ ಕಾರ್ಪ್ (Hero Moto Corp) ತನ್ನ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮೇಲೆ ಬರೋಬ್ಬರಿ 30000 ರೂಪಾಯಿಗಳ ಆಫರ್ ಅನ್ನು ನೀಡಲ್ ಹೊರಟಿದೆ. ತಿಳಿದು ಬಂದಿರುವ ಮಾಹಿತಿ ಪ್ರಕಾರ ಕಂಪನಿ ತನ್ನ Vida V1 ನ ಎಲ್ಲಾ ಮಾಡೆಲ್ ಗಳ ಮೇಲೆ ರಿಯಾಯಿತಿ ನೀಡಲು ಹೊರಟಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಕಂಪನಿ Vida V1 Plus Top Spec ಗಿಂತ Vida V1 Pro ಬೆಲೆಯನ್ನು ಮೂವತ್ತು ಸಾವಿರ ಗಳಿಗೆ ಕಡಿಮೆ ಮಾಡಿದೆ. ಒಂದು ವೇಳೆ ನೀವು ಇದನ್ನು ಖರೀದಿ ಮಾಡುವಂತಹ ಯೋಚನೆ ಮಾಡಿದರೆ ಇದರ ಬೆಲೆ ಸರಿ ಸುಮಾರು 1.15 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಕಂಡು ಬರಲಿದೆ. ಆಫರ್ ಕಾರಣದಿಂದಾಗಿ 30000 ಇಳಿಕೆ ಕೂಡ ಕಂಡು ಬರಲಿದೆ.

Vida V1 Battery & Range:

 

Image Source: BikeWale

 

advertisement

Vida V1 Plus Electric Scooter ನಲ್ಲಿ ನೀವು ಬ್ಯಾಟರಿಯ ವಿಚಾರದ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ದೊಡ್ಡ ಮಟ್ಟದ ಅಂದರೆ 3.94kwh ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿಯನ್ನು ನೀವು ಕಾಣಬಹುದಾಗಿದೆ. ಈ ಬ್ಯಾಟರಿಯ ಮೂಲಕ ನೀವು ಒಂದೇ ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 110 ಕಿಲೋಮೀಟರ್ಗಳ ವರೆಗೆ ಕೂಡ ಸಲ್ಲಿಸಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ (Electric Scooter) ವಿಚಾರದಲ್ಲಿ ಈ ರೀತಿಯ ರೇಂಜ್ ನಿಜಕ್ಕೂ ಕೂಡ ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ. V1 Plus ನಲ್ಲಿ 3.44kwh ಸಾಮರ್ಥ್ಯದ ಸ್ವಲ್ಪಮಟ್ಟಿಗೆ ಚಿಕ್ಕ ಬ್ಯಾಟರಿಯನ್ನು ಅಳವಡಿಸಲಾಗಿರುತ್ತದೆ. ಇದರಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 100 ಕಿಲೋಮೀಟರ್ಗಳ ವರೆಗೆ ಮೈಲೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ.

 

Image Source: BikeDekho

 

ಬೇರೆಲ್ಲ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಹೋಲಿಸಿದರೆ ಇದನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಮಾತ್ರವಲ್ಲದೆ ಅದಕ್ಕಿಂತಲೂ ವಿಶೇಷವಾಗಿ 30,000 ರೂಪಾಯಿಗಳ ರಿಯಾಯಿತಿಯ ಜೊತೆಗೆ ಖರೀದಿ ಮಾಡಬಹುದಾಗಿದ್ದು ನಿಮ್ಮ ಮನೆಯ ಸುತ್ತಮುತ್ತ ಸುತ್ತಾಡುವುದಕ್ಕೆ 110 km ಗಳ ವರೆಗೆ ರೇಂಜ್ ಅನ್ನು ಕೂಡ ಇದು ನೀಡುತ್ತದೆ. ಹೀಗೆ ಎಲ್ಲಾ ದೃಷ್ಟಿಯಲ್ಲಿ ಕೂಡ ಇದು ನಿಮಗೆ ಲಾಭವನ್ನು ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಆಗಿದೆ.

advertisement

Leave A Reply

Your email address will not be published.