Karnataka Times
Trending Stories, Viral News, Gossips & Everything in Kannada

Loan: ಇಂತಹ ಬ್ಯಾಂಕುಗಳಲ್ಲಿ ಸಾಲ ತಗೆದ ರೈತರು ಬಡ್ಡಿ ಕಟ್ಟುವುದು ಬೇಡ! ಬೆಳ್ಳಂಬೆಳಗ್ಗೆ ಸಿಹಿಸುದ್ದಿ

advertisement

ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಹಿಂಗಾರು ಮುಂಗಾರು ಬಾರದೆ ಅಕಾಲಿಕ ಸಮಯದಲ್ಲಿ ಮಳೆ ಬಂದ ಕಾರಣ ರೈತರು ಬೆಳೆದ ಬೆಳೆಯ ನಾಶ ಆಗಿದ್ದು ರೈತರು ಕಂಗಾಲಾಗಿದ್ದಾರೆ. ಮತ್ತು ಜಲಕ್ಷಾಮ ಎದುರಾಗಿರುವ ಕಾರಣ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಅವರಿಗೆ ನೆರವನ್ನು ನೀಡುವ ಸಲುವಾಗಿ ಸರ್ಕಾರವು, ರೈತ ಸಾಲ (Loan) ದ ಮೇಲೆ ಇರುವಂತಹ ಬಡ್ಡಿಯನ್ನು ತೆರವುಗೊಳಿಸಲು ಮುಂದಾಗಿದೆ. ಬ್ಯಾಂಕುಗಳಿಂದ ಮತ್ತು ಲೋನ್ ಪಡೆಯುವುದರ ಮೂಲಕ ರೈತರು ಕೃಷಿಗೆಂದು ತೆಗೆದುಕೊಂಡಂತಹ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರವು ತೆರವುಗೊಳಿಸುವ ಯೋಜನೆಯನ್ನು ತೆಗೆದುಕೊಂಡ ಬಂದಿದೆ.

ಸಾಲ (Loan) ತೆಗೆದ ರೈತರಿಗೆ ಖುಷಿ ವಿಚಾರ:

ಇನ್ನು ಸರ್ಕಾರವೂ ಹೊರಡಿಸಿರುವ ಆದೇಶದಂತೆ ಡಿಸೆಂಬರ್ 12 2023ರ ಅವಧಿಗೆ ತಕ್ಕಂತೆ ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಕೃಷಿ ಸಹಕಾರ ಸಂಘ ಸಂಸ್ಥೆಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಪ್ರಾಥಮಿಕ ಸಹಕಾರಿ ಕೃಷಿ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು ಇವುಗಳಿಂದ ರೈತರು ಕೃಷಿ ಚಟುವಟಿಕೆಗೆ ಎಂದು ಸಾಲ (Loan)ವನ್ನು ತೆಗೆದುಕೊಂಡಿದ್ದಾರೆ. ಇನ್ನು ಈ ರೀತಿಯಾಗಿ ರೈತರು ಪಡೆದಿರುವಂತಹ ಮಾಧ್ಯಮಾವಧಿ ದೀರ್ಘಾವಧಿ ಮತ್ತು ಮಧ್ಯಂತರ ಸಾಲಗಳ ಮೇಲೆ ಇರುವಂತಹ ಬಡ್ಡಿಯನ್ನು ಮನ್ನಾ ಮಾಡುವಂತೆ ಸರ್ಕಾರವು ಆದೇಶವನ್ನು ನೀಡಿದೆ.

Image Source: Tata Capital

advertisement

ಸಾಲದ ಮೇಲಿನ ಬಡ್ಡಿ ಮನ್ನಾ?

ಇನ್ನು ಸರ್ಕಾರದ ಆದೇಶ ಕ್ರಮ ಸಂಖ್ಯೆ (1) ರಂತೆ ರೈತರು ತಾವು ಬ್ಯಾಂಕ್ ಮತ್ತು ಇತರ ಸಂಘ ಸಂಸ್ಥೆಗಳಿಂದ ತೆಗೆದುಕೊಂಡಿರುವಂತಹ ಸಾಲದ ಅಸಲನು ಪಾವತಿ ಮಾಡಿದರೆ ಅಂಥವರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ಶರತ್ತಿನ ಮಂಜೂರಾತಿಯೊಂದಿಗೆ ಮೊಬಲಗನ್ನು ನೀಡುವಂತೆ ಸಹಕಾರಿ ಸಂಘಗಳಿಗೆ ಸರ್ಕಾರವು ಪತ್ರವನ್ನು ರವಾನಿಸಿದೆ. ಅದರ ಗಡುವು 29-02-2024 ಆಗಿತ್ತು.

ಇನ್ನು ಸರ್ಕಾರದ ಆದೇಶ ಕ್ರಮ ಸಂಖ್ಯೆ (2) ನೋಡುವುದಾದರೆ ಸರ್ಕಾರವು ಸುಸ್ತಿಯಾಗಿರುವ ಸಾಲದ ಮೇಲೆ ಸಹಕಾರಿ ಸಂಘ ನಿಬಂಧಕರ ಪ್ರಸ್ತಾವನೆಯ ಸದರಿ ಯೋಜನೆಯಲ್ಲಿ 29-02-2024ರ ಸಹಕಾರ ಸಂಘಗಳು ನೀಡಿರುವಂತಹ ಮಾಹಿತಿಯ ಅನ್ವಯ 29,450 ರಷ್ಟು ರೈತರು ತಮ್ಮ ಸಾಲವನ್ನು ಮರುಪಾವತಿ ಮಾಡಿದ್ದು, ಅವರು ಪಡೆದಿರುವಂತಹ ಸಾಲದ ಮೇಲಿನ ಬಡ್ಡಿಯನ್ನು ತೆರೆವುಗೊಳಿಸಲಾಗಿದೆ. ಅಂದರೆ ಸುಮಾರು 214.50 ಕೋಟಿ ಗಳಷ್ಟು ಬಡ್ಡಿಯನ್ನು ಸರ್ಕಾರವು ತೆರೆವುಗಳಿಸಿದ್ದು ರೈತರು ಪಾವತಿ ಮಾಡಿರುವಂತಹ ಹಣದ ಮೊತ್ತ 281.88ಕೋಟಿ ಅಷ್ಟಿದೆ.

Image Source: NewsClick

ಇನ್ನು ರಾಜ್ಯದಲ್ಲಿ ಸದ್ಯಕ್ಕೆ ಇರುವಂತಹ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ನಿಬಂಧಕರು ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಇನ್ನು ಸರ್ಕಾರವು ಆ ಮನವಿಯನ್ನು ಪರಿಶೀಲಿಸಿ ನೀಡಿರುವ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ:ಸಿಒ 291 ಸಿಎಲ್‌ಎಸ್ 2023, ದಿನಾಂಕ:20-01-2024 ರ ಆದೇಶದಲ್ಲಿ ತಿಳಿಸಲಾಗಿರುವ ಮಾಹಿತಿಯಂತೆ, ಅಸಲನ್ನು ಪಾವತಿ ಮಾಡಿದರೆ ಬಡ್ಡಿಮನ್ನ ಎಂಬ ಯೋಜನೆಗೆ ನೀಡಿದಂತಹ ಸಮಯದ ಗಡುವನ್ನು 29-02-2024 ರಿಂದ 31-03-2024 ವರೆಗೆ ವಿಸ್ತರಣೆ ಮಾಡುವಂತೆ ಆದೇಶ ನೀಡಲಾಗಿದೆ.

advertisement

Leave A Reply

Your email address will not be published.