Karnataka Times
Trending Stories, Viral News, Gossips & Everything in Kannada

HSRP Number Plate: ಮೇ ತಿಂಗಳ ನಂತರವೂ HSRP ನಂಬರ್ ಪ್ಲೇಟ್ ಹಾಕಿಲ್ಲ ಎಂದರೆ ಏನಾಗುತ್ತೆ ಇಲ್ಲಿದೆ ಹೊಸ ಅಪ್ಡೇಟ್! RTO ಘೋಷಣೆ

advertisement

HSRP Number Plate ಪ್ರತಿಯೊಂದು ಗಾಡಿಗೂ ಹಾಕಿಸಿಕೊಳ್ಳಬೇಕು. ಇನ್ನು ಮುಂದೆ ನೀವು ರಸ್ತೆಯಲ್ಲಿ ವಾಹನ ಚಲಾವಣೆ ಮಾಡುವುದಿದ್ದರೆ ನಿಮ್ಮ ವಾಹನಕ್ಕೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಇರುವುದು ಕಡ್ಡಾಯ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಅಷ್ಟೇ ಅಲ್ದೆ ಹಿಂದಿನ ಗಡುವು ವಿಸ್ತರಣೆ ಮಾಡಿ ಮತ್ತೆ ಮೂರು ತಿಂಗಳ ಅವಕಾಶ ಕೊಟ್ಟಿದೆ. ಇಷ್ಟಾಗಿ ನೀವು ನಿಮ್ಮದೇ ಉಡಾಫೆಯಲ್ಲಿ HSRP ಪಡೆದುಕೊಳ್ಳಲು ಇದುವರೆಗೆ ಅರ್ಜಿಯನ್ನು ಕೂಡ ಸಲ್ಲಿಸಿಲ್ಲ ಎಂದಾದರೆ ಪ್ರತಿದಿನ ಗಾಡಿ ಓಡಿಸುವಾಗ ದಂಡ ತೆರುವುದಕ್ಕೆ ಹಣ ರೆಡಿ ಮಾಡಿ ಇಟ್ಕೊಳ್ಳಿ!

HSRP Number Plate ಅಳವಡಿಕೆ ಕಡ್ಡಾಯ:

 

Image Source: Paytm

 

2019ಕ್ಕಿಂತ ಹಳೆಯ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನಗಳಲ್ಲಿ HSRP ಇರುವುದಿಲ್ಲ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಅನ್ನು ಪ್ರತಿಯೊಂದು ಗಾಡಿಗೆ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಒಂದು ವೇಳೆ ಮುಂದಿನ ಗಡುವು ಅಂದರೆ ಮೇ ತಿಂಗಳ ಒಳಗೆ ನೀವು ಈ ಕೆಲಸ ಮಾಡಿಕೊಳ್ಳದೆ ಇದ್ದರೆ ಭಾರಿ ಪ್ರಮಾಣದ ದಂಡ ಇರಬೇಕಾಗಬಹುದು. ಅಥವಾ ನಿಮ್ಮ ಗಾಡಿ ಸೀಜ್ ಆಗಬಹುದು.

HSRP Number Plate ಯಾಕೆ ಅಳವಡಿಸಬೇಕು?

advertisement

ನಿಮ್ಮ ವಾಹನವನ್ನು ಯಾರಾದ್ರೂ ಕಳ್ಳತನ ಮಾಡಿದ್ರೆ, ಅಥವಾ ಅಂತಹ ವಾಹನಗಳನ್ನು ಬಳಕೆ ಮಾಡ್ಕೊಂಡು ಮಾಡಬಾರದ ಕೆಲಸಗಳನ್ನ ಮಾಡಿದ್ರೆ, ಕೆಟ್ಟ ಚಟುವಟಿಕೆಗಳಿಗೆ ವಾಹನ ಬಳಸಿಕೊಂಡ್ರೆ ಇವೆಲ್ಲವನ್ನ ಕಂಡುಹಿಡಿಯುವುದು ಸುಲಭ. ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆಯನ್ನು ಗುರುತಿಸುವುದು ಸುಲಭ. ಎಚ್ಎಸ್ಆರ್‌ಪಿ ಅಳವಡಿಕೆಯಿಂದ ಕೇವಲ ನಿಮ್ಮ ಭದ್ರತೆ ಮಾತ್ರವಲ್ಲ ದೇಶದ ಸುಭದ್ರತೆ ಕೂಡ ಇಲ್ಲಿ ಸೇರಿಕೊಂಡಿದೆ. ಹಾಗಾಗಿ HSRP ಯಾಕೆ ಅಳವಡಿಸಿಕೊಳ್ಳಬೇಕು ಎನ್ನುವ ಉಡಾಫೆ ಮಾಡದೆ ಇನ್ನು ಮೂರು ತಿಂಗಳ ಒಳಗೆ ಅಂದರೆ ಮೇ ತಿಂಗಳೊಳಗೆ ನಿಮ್ಮ ಗಾಡಿಗೆ ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳಿ.

HSRP ಅಳವಡಿಸಿಕೊಳ್ಳದೆ ಇದ್ರೆ ಬೀಳುತ್ತೆ ದಂಡ:

 

Image Source: YouTube

 

ಫೆಬ್ರುವರಿ 17 ಕೊನೆಯ ದಿನಾಂಕ ಆಗಿತ್ತು ಆದರೆ ಮತ್ತೆ ಗಡುವು ವಿಸ್ತರಣೆ ಮಾಡಲಾಗಿದ್ದು, ಮೇ ತಿಂಗಳವರೆಗೆ ಅವಕಾಶ ನೀಡಲಾಗಿದೆ. ಅಷ್ಟರಲ್ಲಿ ನೀವು ಹೆಚ್ ಎಸ್ ಆರ್ ಪಿ ಅಳವಡಿಕೆ ಮಾಡಿಕೊಳ್ಳದೆ ಇದ್ರೆ ಆಗ ಪ್ರತಿದಿನ ಸಾವಿರ ರೂಪಾಯಿಗಳಿಂದ 2000ಗಳ ವರೆಗೆ ದಂಡ ತೆರಬೇಕಾಗಬಹುದು. ಪೊಲೀಸರ ಕಣ್ಣು ತಪ್ಪಿಸಿ ನೀವು ಒಂದು ದಿನವೂ ಕೂಡ HSRP ಇಲ್ಲದೆ ಪ್ರಯಾಣ ಮಾಡುವಂತಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಮಿಸ್ ಮಾಡದೆ ನಿಮ್ಮ ಗಾಡಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.

HSRP ಪಡೆದುಕೊಳ್ಳುವುದು ಹೇಗೆ?

ಇದಕ್ಕಾಗಿಯೇ ಸರ್ಕಾರ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಿದೆ. ಆದರೆ ಅದೇ ವೆಬ್ಸೈಟ್ ಹೋಲುವ ಸಾಕಷ್ಟು ನಕಲಿ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಗಳು ಹುಟ್ಟಿಕೊಂಡಿದ್ದು ನಿಮ್ಮನ್ನು ಯಾಮಾರಿಸಿ ಹಣ ಕೀಳಬಹುದು ಜಾಗೃತೆಯಿಂದ ಇರಿ. https://transport.karnataka.gov.in/ ಅಥವಾ https://www.siam.in/ ಈ ಎರಡು ವೆಬ್ಸೈಟ್ ಗಳಲ್ಲಿ ನೀವು ಯಾವುದನ್ನಾದರೂ ಒಂದನ್ನು ಆಯ್ಕೆ ಮಾಡಿಕೊಂಡು Book HSRP ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಿ HSRP ಬುಕ್ ಮಾಡಿಕೊಳ್ಳಬಹುದು. ಇದು ಆನ್ಲೈನ್ ಪ್ರಕ್ರಿಯೆಯಾಗಿದ್ದು ನೀವು ಆನ್ಲೈನ್ ನಲ್ಲಿ ಪೇಮೆಂಟ್ ಮಾಡಬೇಕಾಗುತ್ತದೆ. 850 ರಿಂದ ಸಾವಿರ ರೂಪಾಯಿಗಳ ಒಳಗಿನ ಹಣವನ್ನು ನೀವು ಪಾವತಿ ಮಾಡಬೇಕು. ನಿಮಗೆ ಹತ್ತಿರದ ಡೀಲರ್ ಇರುವ ಅಡ್ರೆಸ್ ಆಯ್ದುಕೊಳ್ಳಿ ಹಾಗೂ ನಿಗದಿತ ದಿನಾಂಕದ ಒಳಗೆ ನಿಮ್ಮ ಮನೆಗೆ ಹೆಚ್ ಎಸ್ ಆರ್ ಪಿ ಬಂದು ತಲುಪುತ್ತದೆ.

advertisement

Leave A Reply

Your email address will not be published.