Karnataka Times
Trending Stories, Viral News, Gossips & Everything in Kannada

Supreme Court: ರೇಷನ್ ಕಾರ್ಡ್ ಇದ್ದವರಿಗೂ ಹಾಗೂ ಇಲ್ಲದಿದ್ದವರಿಗೂ ಗುಡ್ ನ್ಯೂಸ್! ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

advertisement

ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಆಗಾಗ ಹೊಸ ಯೋಜನೆ ನೀತಿ ಜಾರಿಗೆ ತರುತ್ತಲೆ ಇರುತ್ತದೆ. ಕಾರ್ಮಿಕರ ವರ್ಗಕ್ಕೆ ಅನೇಕ ಸೇವಾ ಸೌಲಭ್ಯ ಮಾಡಲಾಗುತ್ತಿದ್ದು, ಕಾರ್ಮಿಕ ವರ್ಗಕ್ಕೆ ಶ್ರಮಿಕ ಕಾರ್ಡ್ ಅನ್ನು ಹೊಂದುವ ಮಹತ್ವ ಕೂಡ ಮನದಟ್ಟು ಮಾಡಲಾಗುತ್ತಾ ಬರಲಾಗಿದೆ. ಈ ಮೂಲಕ ಶ್ರಮಿಕ ವರ್ಗಕ್ಕೆ ಪಡಿತರ ವಿತರಣೆ ಕೂಡಲೇ ಮಾಡುವಂತೆ ಸುಪ್ರೀಂ ಕೋರ್ಟ್ (Supreme Court) ನಿಂದ ಆದೇಶ ಬಂದಿದ್ದು ಸದ್ಯ ಈ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ.

ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕಾರ್ಮಿಕರು ಕೂಡ ಅರ್ಹರಾಗಿದ್ದು ಅವರಿಗೂ ಕೂಡ ಕಡಿಮೆ ಬೆಲೆಯಲ್ಲಿ ಪಡಿತರ ವಿತರಣೆ ಮಾಡಬೇಕು ಎಂಬ ನಿಯಮ ಚಾಲ್ತಿಯಲ್ಲಿ ಇತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿಯೆ ಪಡಿತರ ವಿತರಣೆ ಮಾಡಲಾಗುತ್ತಿದ್ದು ಕಳೆದ ಕೆಲ ತಿಂಗಳಿಂದ ಶ್ರಮಿಕರಿಗೆ, ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆ ಸಿಕ್ಕಿಲ್ಲ‌. ಹಾಗಾಗಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಪಡಿತರ ವಿತರಣೆ ಶೀಘ್ರ ನೀಡಬೇಕು ಎಂಬ ಮನವಿ ಕೇಳಿ ಬರುತ್ತಿದ್ದು, ಸದ್ಯ ಸುಪ್ರೀಂ ಕೋರ್ಟ್ (Supreme Court) ಈ ಬಗ್ಗೆ ಸ್ಪಷ್ಟನೆ ನೀಡುತ್ತಿದೆ.

ಯಾರಿಗೆ ಸಿಗುತ್ತಿದೆ?

Image Source: IEMLabs

 

advertisement

ಸರಕಾರದ ವಿವಿಧ ಯೋಜನೆಯ ಫಲಾನುಭವಿಗಳಾಗಲು ಇ ಶ್ರಮ್ ಕಾರ್ಡ್ (E-Shram Card) ಅನ್ನು ಜಾರಿ ಮಾಡಿದ್ದು, ಇದರ ಅಡಿಯಲ್ಲಿ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಪಡಿತರ ವಿತರಣೆಯನ್ನು ಮಾಡಲಾಗುತ್ತಿದೆ. ಆದರೆ ಯಾರಿಗೆಲ್ಲ ಇ ಶ್ರಮ್ ಕಾರ್ಡ್ (E-Shram Card) ಇಲ್ಲ ಅವರಿಗೆ ಪಡಿತರ ವಿತರಣೆ ಮಾಡಲಾಗುತ್ತಿಲ್ಲ. 8ಕೋಟಿಯಷ್ಟು ಕಾರ್ಮಿಕರ EKYC ಬಾಕಿ ಇದ್ದ ಹಿನ್ನೆಲೆ ಪಡಿತರ ವಿತರಣೆ ಮಾಡಿಲ್ಲ ಎಂದು ತಿಳಿದು ಬಂದಿದೆ.

ಸುಪ್ರೀಂ ಕೋರ್ಟ್ (Supreme Court) ಆದೇಶ:

 

Image Source: IndiaToday

 

ಪಡಿತರ ವಿತರಣೆ ಸಿಗುತ್ತಿಲ್ಲ ಎಂದವರು ಬಹುತೇಕ ವಲಸೆ ಕಾರ್ಮಿಕರೆ ಆಗಿದ್ದು 8ಕೋಟಿ ಜನರಿದ್ದಾರೆ. ಅವರಿಗೆ EKYC ಮಾಡಿಸಿಲ್ಲ ಎಂಬ ಆಧಾರದ ಮೇಲೆ ಪಡಿತರ ಕಾರ್ಡ್ (Ration Card) ವಿತರಣೆ ವಿಳಂಬ ಮಾಡುವುದು ಹಾಗೂ ಪಡಿತರ ವಿತರಣೆ ಅನಗತ್ಯ ವಿಳಂಬ ಮಾಡುವುದು ಸರಿಯಲ್ಲ. ಕೇಂದ್ರದ EKYC ಅನ್ನು ಶೀಘ್ರವೇ ಮಾಡಬೇಕು. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನು ಎರಡು ತಿಂಗಳ ಒಳಗೆ ಪಡಿತರ ಕಾರ್ಡ್ ವಿತರಣೆ ಮಾಡುವಂತೆ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ.

ಈ ಒಂದು ವ್ಯವಸ್ಥೆ ತ್ವರಿತಗೊಳಿಸುವ ಅಗತ್ಯತೆಯನ್ನು ಸರಕಾರಕ್ಕೆ ಮನದಟ್ಟಾಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲ ಅವರು ತಮ್ಮ ತೀರ್ಪನ್ನು ನೀಡಿದ್ದಾರೆ. ಹೀಗಾಗಿ ಶೀಘ್ರವೇ ವಲಸೆ ಮತ್ತು ಇತರ ಕಾರ್ಮಿಕರಿಗೆ ಪಡಿತರ ಕಾರ್ಡ್ (Ration Card) ವಿತರಣೆ ಆಗಲಿದೆ.

advertisement

Leave A Reply

Your email address will not be published.