Karnataka Times
Trending Stories, Viral News, Gossips & Everything in Kannada

Student Scholarship: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದವರಿಗೆ ಸಿಎಂ ಕಡೆಯಿಂದ ಸಿಹಿಸುದ್ದಿ

advertisement

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲು ಸರಕಾರ ತೀರ್ಮಾನ ಕೈಗೊಂಡಿದೆ. ನೋಂದಾಯಿತ ಕಾರ್ಮಿಕರ ಮಕ್ಕಳಲ್ಲಿ ಇಬ್ಬರಿಗೆ ವಾರ್ಷಿಕವಾಗಿ ನೀಡಲಾಗುವ ವಿದ್ಯಾರ್ಥಿ ವೇತನವನ್ನು (Student Scholarship) ಇದೀಗ ಮತ್ತೊಮ್ಮೆ ಪರಿಷ್ಕರಣೆ ಮಾಡುವಂತೆ ಅಧಿಸೂಚನೆ ಹೊರಡಿಸಲಾಗಿದೆ.

ಕಾರ್ಮಿಕರ ಮಕ್ಕಳು ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೆ ಮಾತ್ರವೇ ಈ ಒಂದು ಯೋಜನೆಗೆ ಅರ್ಹರಾಗಿದ್ದು SSP ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಕಾರ್ಮಿಕ ಇಲಾಖೆಗೆ ಅರ್ಜಿ ಭರ್ತಿ ಮಾಡಿ ನೀಡಬಹುದು.

 

Image Source: SSP

 

advertisement

ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?

  • ವಾರ್ಷಿಕವಾಗಿ 1ನೇ ತರಗತಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ವಾರ್ಷಿಕ 1,800 ರೂಪಾಯಿ ಸಿಗಲಿದೆ.
  • 6ನೇ ತರಗತಿಯಿಂದ 8ನೇ ತರಗತಿವರೆಗೆ ವಾರ್ಷಿಕ 2,400ರೂಪಾಯಿ ಸಿಗಲಿದೆ.
  • 9ನೇ ತರಗತಿಯಿಂದ 10ನೇ ತರಗತಿ ವರೆಗೆ ಕಾರ್ಮಿಕರ ಮಕ್ಕಳಿಗೆ ವಾರ್ಷಿಕ 3,000 ರೂಪಾಯಿ.
  • ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 4,600 ರೂಪಾಯಿ ಸಿಗಲಿದೆ.
  • ಮೂರು ವರ್ಷದ ಪದವಿಗೆ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.
  • IIT ಇತರ ಭಾರತ ಸರಕಾರದ ಮಾನ್ಯತಾ ಕೋರ್ಸ್ ಕಲಿಯುವವರಿಗೆ ವಾರ್ಷಿಕ 11,000 ಸ್ಕಾಲರ್ ಶಿಪ್ ಸಿಗಲಿದೆ.
  • BSE, ನರ್ಸಿಂಗ್, ಪ್ಯಾರಮೆಡಿಕಲ್ ನವರಿಗೆ ವಾರ್ಷಿಕ 10,000 ಸಿಗಲಿದೆ.
  • LLB, LLM ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.
  • ಎಂ ಟೆಕ್ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.
  • ಮೂರು ವರ್ಷದ PHD ಗೆ 11,000 ರೂಪಾಯಿ ಸಿಗಲಿದೆ.
  • BE, B Tec ಇತರ ತಾಂತ್ರಿಕ ಶಿಕ್ಷಣ ಪಡೆಯುವ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕೆ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.
  • ಎರಡು ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡಲು 10,000 ರೂಪಾಯಿ ವಿದ್ಯಾರ್ಥಿ ವೇತನ.
  • ಬಿಎಡ್ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 6000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.
  • ವೈದ್ಯಕೀಯ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 11,000ರೂಪಾಯಿ ಸಿಗಲಿದೆ.
  • ಪಾಲಿಟೆಕ್ನಿಕ್ , ಡಿಪ್ಲೊಮಾ ಮತ್ತು ITI ವಿದ್ಯಾರ್ಥಿಗಳಿಗೆ 4,600 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.

ಅರ್ಹತೆ ಏನು?

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕಿದ್ದು 2023-24ನೇ ಸಾಲಿನಲ್ಲಿಯು ಅರ್ಜಿ ಆಹ್ವಾನಿಸಲಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರವೇ ಈ ಅವಕಾಶ ಇರಲಿದ್ದು ಕಟ್ಟಡ ಕಾರ್ಮಿಕರ ನೋಂದಣಿಯೂ ಪ್ರಸ್ತುತ ಚಾಲ್ತಿಯಲ್ಲಿ ಇರಬೇಕು. 2023ರರ ಮೇ 31ರ ಒಳಗಾಗಿ ಕಟ್ಟಡ ಕಾರ್ಮಿಕರ ಲೇಬರ್ ಕಾರ್ಡ್ (Labour Card) ಗೆ ನೋಂದಣಿ ಮಾಡಿಸಿದ್ದರೆ ಮಾತ್ರವೇ ಅಂಥವರ ಮಕ್ಕಳಿಗೆ ಮಾತ್ರ ಈ ಅವಕಾಶ ಸಿಗಲಿದೆ.

advertisement

Leave A Reply

Your email address will not be published.