Karnataka Times
Trending Stories, Viral News, Gossips & Everything in Kannada

E-Shram Card: ಇ ಶ್ರಮ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 2ಲಕ್ಷ ರೂಪಾಯಿ, ಹೀಗೆ ಪಡೆಯಿರಿ!

advertisement

ಸಮಾಜದಲ್ಲಿರುವ ಎಲ್ಲಾ ವರ್ಗಗಳು ಕೂಡ ಸಮಾನವಾಗಿ ಬೆಳೆಯಬೇಕು ಎನ್ನುವ ಕಾರಣಕ್ಕೆ ಸರ್ಕಾರಗಳು ಹಲವಾರು ಬಗೆಯ ಯೋಜನೆಗಳನ್ನು ಆರಂಭಿಸುತ್ತವೆ. ಇದೇ ರೀತಿ ಕಡಿಮೆ ಆದಾಯದ ಗುಂಪು ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ E-Shram ಯೋಜನೆಯನ್ನು ಆರಂಭಿಸಿತ್ತು. ಕೇಂದ್ರ ಸರ್ಕಾರವು 2020ರಲ್ಲಿ ಈ ಯೋಜನೆಯನ್ನು ಆರಂಭಿಸಿದ್ದು ಬಹಳಷ್ಟು ಜನರು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಇಲ್ಲಿಯ ತನಕ 29,41,32,933 ಇ ಶ್ರಮ್ ಕಾರ್ಡ್ ಗಳನ್ನು ನೀಡಲಾಗಿದೆ.

ಇ ಶ್ರಮ್ ಕಾರ್ಡ್ (E-Shram Card) ಹೊಂದಿರುವವರು ಇದರ ನೇರ ಪ್ರಯೋಜನಗಳ ಜೊತೆಗೆ ಇತರ ಪ್ರಯೋಜನಗಳನ್ನು ಕೂಡ ಪಡೆಯುತ್ತಾರೆ. ಹೀಗೆ ಪಡೆಯುವ ಬೇರೆ ಯೋಜನೆಗಳ ಪ್ರಯೋಜನಗಳು ಎಂದರೆ ಪ್ರಧಾನಮಂತ್ರಿ ಶ್ರಮ ಯೋಗಿ ಯೋಜನೆ (PM Shram Yogi Yojana), ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Yojana), ಅಟಲ್ ಪಿಂಚಣಿ ಯೋಜನೆ (Atal Pension Yojana), ಜೀವನ ಜ್ಯೋತಿ ಬಿಮಾ ಯೋಜನೆ (Jeevan Jyoti Bima Yojana), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PM Suraksha Bima Yojana), ರಾಷ್ಟ್ರೀಯ ಭಾರತ್ ಸಾಮಾಜಿಕ ನೆರವು, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PM Kaushal Vikas Yojana) ಮುಂತಾದ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಾರೆ.

16 ರಿಂದ 59 ವರ್ಷ ವಯಸ್ಸಿನ ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ದುಡಿಯುವವರು ಈ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಈ ವಲಯದಲ್ಲಿ ಸೇರುವ ಅಸಂಘಟಿತ ವಲಯ ಎಂದರೆ ಅಂಗಡಿ ಸೇವಕರು, ಮಾರಾಟಗಾರರು, ಸಹಾಯಕರು, ಪೇಪರ್ ಹಾಕುವವರು, ಜೋಮ್ಯಾಟೋ – ಸ್ವಿಗ್ಗಿ – ಅಮೆಜಾನ್ – ಫ್ಲಿಪ್ಕಾರ್ಟ್ ಮುಂತಾದ ಕಂಪನಿಗಳಲ್ಲಿ ಡೆಲಿವರಿ ನೀಡುವವರು, ಆಟೋ ಚಾಲಕರು, ಪಂಕ್ಚರ್ ತೆಗೆಯುವವರು, ಕುರುಬರು, ಹೈನುಗಾರು, ಇಟ್ಟಿಗೆ ಗೂಡುಗಳನ್ನು ಮಾಡುವುದು ಹೀಗೆ ಇಂತಹ ವರ್ಗದ ಜನರು ಇಲ್ಲಿ ನೋಂದಾಯಿಸಿಕೊಳ್ಳಬಹುದು.

advertisement

E-Shram Card Benefits:

 

 

ಇ ಶ್ರಮ್ ಯೋಜನೆ (E-Shram Yojana) ಯಲ್ಲಿ ನೋಂದಾವಣೆ ಮಾಡಿಕೊಂಡವರು ಅಪಘಾತ ವಿಮೆಯನ್ನು ಪಡೆಯುತ್ತಾರೆ. ಅಪಘಾತದಲ್ಲಿ ಇ ಶ್ರಮ್ ಕಾರ್ಡ್ ಹೊಂದಿದ ವ್ಯಕ್ತಿಯ ಮರಣ ಆದಲ್ಲಿ 2 ಲಕ್ಷ ರೂಪಾಯಿಗಳ ವಿಮೆಯನ್ನು ನೀಡಲಾಗುತ್ತದೆ. ಇದಲ್ಲದೆ ಅಪಘಾತದಲ್ಲಿ ಯಾರಾದರೂ ಅಂಗವಿಕಲರಾದಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ನೀವು ಕೂಡ ಈ ವಲಯದ ಕಾರ್ಮಿಕರಾಗಿದ್ದು ಇಲ್ಲಿಯ ತನಕ ಕಾರ್ಡ್ ಅನ್ನು ಪಡೆಯದೆ ಇದ್ದಲ್ಲಿ ನಿಮ್ಮ Aadhaar Card, PAN Card, Mobile Number and Bank Details ಜೊತೆಗೆ ಈಗಲೇ ನೋಂದಾಯಿಸಿಕೊಳ್ಳಿ.

ಆನ್ಲೈನ್ ನಲ್ಲಿ ನೋಂದಾವಣೆ ಮಾಡಲು ಈ ಕೆಳಗಿನ ಹಂತಗಳನ್ನು ಪಾಲಿಸಿ:

• ಇ ಶ್ರಮ್ ಯೋಜನೆಯ ಅಧಿಕೃತ ವೆಬ್ ಸೈಟ್ eshram.gov.in ಗೆ ಭೇಟಿ ನೀಡಿ
• ಮುಖಪುಟದಲ್ಲಿರುವ ರಿಜಿಸ್ಟರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
• ಇಲ್ಲಿ ಕೇಳಲಾಗುವ ಮಾಹಿತಿಗಳನ್ನು ಸರಿಯಾಗಿ ನೀಡಿ
• ನಿಮ್ಮ ಮೊಬೈಲ್ ನಂಬರ್ ಬರುವ ಓ ಟಿ ಪಿ ಯನ್ನು ನಮೂದಿಸಿ
• ಇದಾದ ನಂತರ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಈ ಪ್ರಕ್ರಿಯೆ ಆದ ಕೂಡಲೇ ನಿಮಗೆ ಹತ್ತು ಅಂಕಿಗಳ ಇ ಶ್ರಮ್ ಕಾರ್ಡ್ ಅನ್ನು ನೀಡಲಾಗುತ್ತದೆ

advertisement

Leave A Reply

Your email address will not be published.