Karnataka Times
Trending Stories, Viral News, Gossips & Everything in Kannada

E-Shram Card: ಈ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್, ಸಿಗಲಿದೆ 3,000ರೂ. ಪಿಂಚಣಿ!

advertisement

ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಒಂದು ಸೂಪರ್ ಡೂಪರ್ ಯೋಜನೆ ಪರಿಚಯಿಸಲಾಗಿದೆ. ಸಮಾಜದಲ್ಲಿ ಎಲ್ಲರೂ ಕೂಡ ಸಮಾನವಾಗಿ ಜೀವನ ನಡೆಸಬೇಕು. ಅದರಲ್ಲೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಕೂಡ ಸಾಮಾಜಿಕ ಭದ್ರತೆಯನ್ನು ಹೊಂದಬೇಕು. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ (E-Shram Yojana) ಯ ಆರಂಭಿಸಿದೆ.

What is E-Shram Scheme?

 

 

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ, ಭವಿಷ್ಯದ ಭರವಸೆಯು ಇರುವುದಿಲ್ಲ. ಹಾಗಾಗಿ ಅಂತವರಿಗೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಹಾಗೂ ಸರ್ಕಾರದ ಪ್ರತಿಯೊಂದು ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಈ ಶ್ರಮ ಯೋಜನೆಯ ಆರಂಭಿಸಲಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಅಸಂಘಟಿತ ವಲಯದ ಕಾರ್ಮಿಕನು ಕೂಡ ಇ-ಶ್ರಮ ಕಾರ್ಡ್ (E-Shram Card)ಹೊಂದಿರಬೇಕು. ಇದರಿಂದ ಅವರಿಗೆ ಹಾಗೂ ಅವರ ಕುಟುಂಬದವರಿಗೂ ಕೂಡ ಅನುಕೂಲವಾಗಲಿದೆ.

ಕಾರ್ಮಿಕ ವರ್ಗದ ಜನರು ಇ-ಶ್ರಮ ಕಾರ್ಡ್ (E-Shram Card) ಹೊಂದಿದ್ದರೆ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅವುಗಳಲ್ಲಿ ಪಿಂಚಣಿ ಯೋಜನೆ ಕೂಡ ಒಂದು ಹಾಗಾದ್ರೆ ಪಿಂಚಣಿ ಯೋಜನೆ (Pension Scheme) ಗೆ ಹೇಗೆ ಅರ್ಜಿ ಸಲ್ಲಿಸುವುದು ಇದರ ಪ್ರಯೋಜನಗಳೇನು ನೋಡೋಣ.

advertisement

E-Shram Pension Scheme:

ಎಲ್ಲಾ ವಲಯದಲ್ಲಿ ಕೆಲಸ ಮಾಡುವವರೆಗೂ ಕೂಡ ಪಿಂಚಣಿ ಸೌಲಭ್ಯ ಇರುವುದಿಲ್ಲ. ಹಾಗಾಗಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರದಿಂದಲೇ ಪಿಂಚಣಿ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕಾಗಿ 16 ರಿಂದ 59 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಪಿಂಚಣಿ ಕಾರ್ಡ್ ಪಡೆದುಕೊಳ್ಳಲು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ತಮ್ಮ ಮೊಬೈಲ್ ಸಂಖ್ಯೆ, (ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು), ಬ್ಯಾಂಕ್ ಖಾತೆಯ ವಿವರ ಹಾಗೂ ಆಧಾರ್ ಕಾರ್ಡ್ ನೀಡಬೇಕು.

ಇ-ಶ್ರಮ ಯೋಜನೆ (E-Shram Scheme) ಅಡಿಯಲ್ಲಿ ಪ್ರತಿ ತಿಂಗಳು 51 ಗಳಿಂದ 210ಗಳ ವರೆಗೆ ಹೂಡಿಕೆ ಮಾಡಿದರೆ 60 ವರ್ಷದ ನಂತರ ಪ್ರತಿ ತಿಂಗಳು 3000 ಅಥವಾ ವರ್ಷಕ್ಕೆ 36,000 ಗಳನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು. ಇನ್ನು ಯಾವುದೇ ಅಪಘಾತದ ಸಂದರ್ಭದಲ್ಲಿ ಕಾರ್ಮಿಕರು ಭಾಗಶಃ ಅಂಗವಿಕಲರಾದರೆ ಒಂದು ಲಕ್ಷ ರೂಪಾಯಿ, ಹಾಗೂ ಸಾವಿಗೀಡಾ ಆದರೆ ಎರಡು ಲಕ್ಷ ರೂಪಾಯಿಗಳನ್ನು ಅವರ ಕುಟುಂಬದವರಿಗೆ ನೀಡಲಾಗುವುದು.

ಇ-ಶ್ರಮ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಈಗಲೇ ನೋಂದಾಯಿಸಿಕೊಳ್ಳಿ:

  • ಇ-ಶ್ರಮ ಕಾರ್ಡ್ (E-Shram Card) ಪಡೆದುಕೊಳ್ಳಲು ನೀವು ಈ ಶ್ರಮ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು ಅಲ್ಲಿ ಸ್ವಯಂ ನೋಂದಣಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅದಕ್ಕೆ ಒಂದು ಓಟಿಪಿ ಕಳುಹಿಸಲಾಗುತ್ತದೆ. ಅದನ್ನು ಕೂಡ ನಮೂದಿಸಿ ಕೆಳಗಡೆ ಇರುವ ಕ್ಯಾಪ್ಚ ಕೋಡ್ ಅನ್ನು ಸರಿಯಾಗಿ ಹಾಕಿ. ಈಗ ಮುಂದುವರೆಯಿರಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಹೊಸ ಪುಟ ತರೆದುಕೊಳ್ಳುತ್ತದೆ ಹಾಗೂ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. ನಿಮ್ಮ ವಿಳಾಸ ಶೈಕ್ಷಣಿಕ ಅರ್ಹತೆ ಕೌಶಲ್ಯ ಈ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಬಡಿತ ನಿಮ್ಮ ಮಾಹಿತಿ ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿ ಸರಿಯಾಗಿದ್ದರೆ ಸಲ್ಲಿಸು ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
  • ಇಷ್ಟು ಮಾಡಿದ್ರೆ ವೆರಿಫಿಕೇಷನ್ ಗಾಗಿ ನಿಮ್ಮ ಮೊಬೈಲ್ ಗೆ ಮತ್ತೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನ ನೀವು ನಮೂದಿಸಬೇಕು. ನೀವು ಅರ್ಹರಾಗಿದ್ರೆ ನಿಮಗೆ ಈ ಶ್ರಮ ಕಾರ್ಡ್ ಸಿಗುತ್ತದೆ ಇದನ್ನ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.