Karnataka Times
Trending Stories, Viral News, Gossips & Everything in Kannada

Aadhaar-Pahani Link: ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಜೋಡಣೆ ಮಾಡುವ ಸುಲಭ ಪ್ರಕ್ರಿಯೆ ಇಲ್ಲಿದೆ!

advertisement

ಇವತ್ತಿನ ದಿನಮಾನದಲ್ಲಿ ನಾವು ಕುಳಿತಲ್ಲಿಯೇ ಆನ್ಲೈನ್ ಮೂಲಕ ನಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಜೊತೆಗೆ ನಾವು ಇಂದು ಯಾವುದೇ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ (Aadhaar Card) ಪ್ರಮುಖವಾಗಿ ಬೇಕಾಗುತ್ತದೆ ರೈತರಿಗೂ ಕೂಡ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ತಮ್ಮ ಜಮೀನಿನ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವುದು ಅವಶ್ಯವಾಗಿದೆ. ಇಂದು ನಿಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ (Aadhaar Number) ಯನ್ನು ಹೇಗೆ ಜೋಡಣೆ ಮಾಡುವುದು ಎಂಬುದನ್ನು ನಾವಿವತ್ತು ತಿಳಿದುಕೊಳ್ಳೋಣ.

ಕಂದಾಯ ಸಚಿವರು ಹೇಳಿದ್ದೇನು?

 

 

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬರಗಾಲ ಘೋಷಣೆ ಮಾಡಿ NDRF ಮಾರ್ಗಸೂಚಿಯಂತೆ ಪರಿಹಾತ ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದೂವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಸಂಕಷ್ದದಲ್ಲಿದ ರೈತರಿಗೆ ನೆರವಿಗೆ ಧಾವಿಸಲು NDRF ಅನುದಾನ ನಿರೀಕ್ಷಿಸಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಾದ್ಯಂತ ಒಟ್ಟಾರೆ 35 ಲಕ್ಷ ರೈತರಿಗೆ 650 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದೂವರೆಗೆ 24 ಲಕ್ಷ ಜನರಿಗೆ 519 ಕೋಟಿ ರೂ. ಪಾವತಿಯಾಗಿದೆ. 2-3 ದಿನದಲ್ಲಿ ರಾಜ್ಯದ ಉಳಿದ 11-12 ಲಕ್ಷ ಜನರಿಗೆ ಹಣ ಜಮೆ ಮಾಡಲಾಗುತ್ತದೆ ಎಂದರು.

advertisement

DBT ಹಣ ಪಾವತಿ ಸಂದರ್ಭದಲ್ಲಿ ಎದುರಿಸಲಾಗುತ್ತಿದ್ದು, ಅಧಾರ್ (Aadhaar), ಬ್ಯಾಂಕ್ ಲಿಂಕ್ ಅಪಡೇಟ್ ಕಾರ್ಯ ಶೇ.60 ರಿಂದ 80ಕ್ಕೆ ಹೆಚ್ಚಿಸಿದರಿಂದ ಶೇ.80ರಷ್ಟು ಜನರಿಗೆ ಪರಿಹಾರ ಸಿಕ್ಕಿದೆ. ನಮ್ಮ‌ ಗುರಿಯಂತೆ ಇನ್ನು ಕನಿಷ್ಠ ಶೇ.5ರಷ್ಟು ಅಪಡೇಟ್ ಕಾರ್ಯ ಮಾಡಬೇಕಿದೆ. ಮುಂದಿನ ಕಂತು ಪಾವತಿಯೊಳಗೆ ಈ ಸಮಸ್ಯೆ ಬಗೆಹರಿಸಬೇಕು. ಇದನ್ನು ಮಿಷನ್ ಮೋಡ್ ನಲ್ಲಿ ಮಾಡಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ಪಹಣಿಗೆ ಆಧಾರ್ ಲಿಂಕ್, ಎಲ್ಲವು ದಾಖಲೀಕರಣ:

ಕೇಂದ್ರ ಸರ್ಕಾರವು ಆರ್.ಟಿ.ಸಿ.ಗೆ ಆಧಾರ್ ಲಿಂಕ್ ಮಾಡಲು ನಿರ್ದೇಶನ ನೀಡಿದ್ದು, ಮುಂದಿನ‌ ದಿನದಲ್ಲಿ ಇದರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಜೊತೆಗೆ ಕಂದಾಯ, ಸರ್ವೆ, ಸಬ್ ರಿಜಿಸ್ಟಾರ್ ಕಚೇರಿಯ ಎಲ್ಲಾ ದಾಖಲೆಗಳು ಫೆಬ್ರವರಿ‌ 1 ರಿಂದ ಮುಂದಿನ‌ ಒಂದೂವರೆ ವರ್ಷದಲ್ಲಿ ದಾಖಲೀಕರಣ ಮಾಡಲಾಗುತ್ತಿದೆ. ಇದರಿಂದ ವಂಚನೆ ತಡೆಯುವುದಲ್ಲದೆ ದಾಖಲೆ ಹುಡುಕುವ ತಾಪತ್ರಯ ತಪ್ಪಲಿದೆ. ಇದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಸರ್ವೇಯರ್ ನೇಮಕಾತಿಗೂ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.

ಪಹಣಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

  • ನಿಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದರಿಂದ ಸರ್ಕಾರದಿಂದ ಬರುವಂಥ ಸೌಲಭ್ಯಗಳು ನೇರವಾಗಿ ನಿಮಗೆ ಎಸ್ಎಂಎಸ್ ಮೂಲಕ ತಲುಪುತ್ತವೆ. ಬಹಳಷ್ಟು ಸೌಲಭ್ಯಗಳ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ ಹಾಗಾಗಿ ಸರ್ವೆ ನಂಬರ್ ಗಳಿಗೆ ಆಧಾರ್ ಸಂಖ್ಯೆಯನ್ನು ಹೇಗೆ ಜೋಡಣೆ ಮಾಡುವುದು ಎಂಬುದನ್ನು ನೋಡುವುದಾದರೆ, ಮೊದಲಿಗೆ ನೀವು https://www.landrecords.karnataka.gov.in/service4/CitizenRegistrationLogin.aspx ಈ ಲಿಂಕನ್ನು ತೆರೆಯಬೇಕಾಗುತ್ತದೆ ಅಲ್ಲಿ ಭೂಮಿ ಆನ್ಲೈನ್ ರಿಜಿಸ್ಟ್ರೇಷನ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ರಿಜಿಸ್ಟರ್ ಮಾಡಬಹುದಾಗಿದೆ.
  • ನಂತರ ನಿಮ್ಮ ಸರ್ವೇ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದಕ್ಕೆ ಏನೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ನೋಡುವುದಾದರೆ ಮೊದಲಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಆಧಾರ್ ನಂಬರ್ ಅನ್ನು ನಮೂದಿಸಿದ ನಂತರ ಆಟೋಮೆಟಿಕ್ ಆಗಿ ಸಿಟಿಜನ್ ಹೆಸರು ಬರುತ್ತದೆ. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಜನರೇಟ್ ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿ ವೇರಿಫೈ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಅದು ಮುಂದಿನ ಸ್ಕ್ರೀನ್ ಗೆ ಹೋಗುತ್ತದೆ.
  • ಅಲ್ಲಿ ನಿಮ್ಮ ಹೆಸರು ಇರುತ್ತದೆ ನಂತರ ನಿಮ್ಮ ತಂದೆಯ ಹೆಸರು ನಿಮ್ಮ ಆಧಾರ್ ಕಾರ್ಡ್ ಅಥವಾ ಪಹಣಿ (Aadhaar-Pahani) ಯಲ್ಲಿ ಇರುವಂತೆ ನಿಮ್ಮ ತಂದೆಯ ಹೆಸರನ್ನು ನಮೂದಿಸಬೇಕು ನಂತರ ನಿಮ್ಮ ವಿಳಾಸವನ್ನು ನಮೂದಿಸಬೇಕು ನಂತರ ಸೆಲೆಕ್ಟ್ ಡಾಕ್ಯೂಮೆಂಟ್ ಅನ್ನುನ್ನುವುದು ಕಾಣುತ್ತದೆ ಅಲ್ಲಿ ಚುನಾವಣಾ ಗುರುತಿನ ಚೀಟಿ (Identity Card) ಪಾನ್ ಕಾರ್ಡ್(PAN Card)  ಪಾಸ್ಪೋರ್ಟ್ ಡ್ರೈವಿಂಗ್ ಲೈಸೆನ್ಸ್ (Driving Licence) ಪಡಿತರ ಚೀಟಿ (Ration Card) ಮತ್ತು ಆಧಾರ್ ಚೀಟಿ ಎನ್ನುವ ಆಯ್ಕೆಗಳು ಕಾಣಿಸಿಕೊಳ್ಳುತ್ತದೆ ಅದರಲ್ಲಿ ಯಾವುದಾದರೂ ಒಂದನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ ನೀವು ದಾಖಲೆಯನ್ನು ಅಪ್ಲೋಡ್ ಮಾಡಿದ ನಂತರ ಅಲ್ಲಿ ಅಪ್ಲೋಡ್ ಸಕ್ಸಸ್ಫುಲ್ ಎನ್ನುವುದು ಕಾಣಬೇಕು ಅದರ ನಂತರ ಓಕೆ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಎಪಿಕ್ ನಂಬರ್ ಕೇಳುತ್ತದೆ ಎಪಿಕ್ ನಂಬರ್ ಎಂದರೆ ನಿಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಬೇಕು ನಂತರ ಪಿನ್ ಕೋಡ್ ಅನ್ನು ನಮೂದಿಸಬೇಕು ಅದಾದ ನಂತರ ನಿಮ್ಮ ಬಳಿ ಬೇರೆ ಮೊಬೈಲ್ ಸಂಖ್ಯೆ ಇದ್ದರೆ ಅದರ ಸಂಖ್ಯೆಯನ್ನು ನಮೂದಿಸಬೇಕು
  • ತದನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀವು ನಿಮ್ಮ ಭೂಮಿ ಎಲ್ಲಿ ಇದೆಯೋ ಆ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಇವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೇ ನಂಬರ್ ಅನ್ನು ಅಲ್ಲಿ ನಮೂದಿಸಿದ ತಕ್ಷಣ ಅಲ್ಲಿ ನಿಮ್ಮ ಜಮೀನಿನ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ ನಂತರ ಕೆಳಗಡೆ ಕಾಣಿಸುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು ನಂತರ ಆಡ್ ಎಂಬುದನ್ನು ಕ್ಲಿಕ್ ಮಾಡಬೇಕು ಇಷ್ಟು ಮಾಡಿದ ನಂತರ ನಿಮ್ಮ ಆಧಾರ್ ಸಂಖ್ಯೆ ನಿಮ್ಮ ಸರ್ವೆ ನಂಬರ್ ಜೊತೆ ಜೋಡಣೆ ಆಗಿರುತ್ತದೆ.
  • ನಂತರ ಅಲ್ಲಿ ಸೇವ್ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಗೆ ನಿಮ್ಮ ಸರ್ವೆ ನಂಬರ್ ಗೆ ಆಧಾರ್ ಕಾರ್ಡನ್ನು ಜೋಡಿಸುವ ಪ್ರಕ್ರಿಯೆ ಮುಗಿಯುತ್ತದೆ.

advertisement

Leave A Reply

Your email address will not be published.