Karnataka Times
Trending Stories, Viral News, Gossips & Everything in Kannada

LPG Gas: LPG ಗ್ಯಾಸ್ ಸಬ್ಸಿಡಿ ಹಣ ಬಂದಿದೆಯಾ ಎಂದು ಮನೆಯಲ್ಲಿ ಕುಳಿತು ತಮ್ಮ ಮೊಬೈಲ್‌ನಿಂದ ಹೀಗೆ ಚೆಕ್ ಮಾಡಿಕೊಳ್ಳಿ!

advertisement

ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ (BPL Card)  ಹೊಂದಿರುವ ಮಹಿಳೆಯರಿಗೆ LPG ಗ್ಯಾಸ್ ಸಂಪರ್ಕಗಳನ್ನು ಒದಗಿಸುವ ಯೋಜನೆ PMUY ಉದ್ದೇಶವಾಗಿದೆ.ಈ ಯೋಜನೆಯಡಿ ಮೊದಲು ಗ್ಯಾಸ್ ಸಂಪರ್ಕ ಪಡೆಯುವ ವರ್ಗಕ್ಕೆ ಉಚಿತ ಸಂಪರ್ಕ, ಉಚಿತ ಗ್ಯಾಸ್ ಸ್ಟೌವ್ ವಿತರಣೆ ಮಾಡಲಾಗುತ್ತದೆ. ಬಳಿಕ ಪ್ರತಿ ಸಿಲಿಂಡರ್‌ಗೆ ಸಬ್ಸಿಡಿಯಲ್ಲಿ ಹಣ ನೀಡಲಾಗುತ್ತದೆ.ಆದರೆ, ಮುಂದಿನ ತಿಂಗಳು ಈ ಸಬ್ಸಿಡಿ ಮೊತ್ತ ಹೆಚ್ಚಾಗುವ ಸಾಧ್ಯತೆ ಸಹ ಇದೆ. ಉಜ್ವಲ ಯೋಜನೆ ಸೌಲಭ್ಯ ಬಗ್ಗೆ ಹೆಚ್ಚುವರಿ ಪರಿಹಾರದ ಕುರಿತು ಮುಂದಿನ ತಿಂಗಳು ಕೇಂದ್ರವು ನಿರ್ಧಾರ ತೆಗೆದುಕೊಳ್ಳಬಹುದು.

ಸಬ್ಸಿಡಿ ಹಣ ಬಿಡುಗಡೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಗೃಹಬಳಕೆಯ ಅನಿಲ ಸಂಪರ್ಕವನ್ನು ಹೆಚ್ಚಿನ‌ ಜನರು ಇದೀಗ ಬಳಸಿಕೊಳ್ಳುತ್ತಿದ್ದಾರೆ. ಈ ಗ್ಯಾಸ್ ಖರೀದಿಗೆ ರೂ 237 ಸಬ್ಸಿಡಿ ನೀಡಲಾಗುತ್ತದೆ. ಇದು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಕೆಲವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದಿದ್ರೆ ಇನ್ನು ಕೆಲವರು ಅವರ ಮೊಬೈಲ್ ಸಂಖ್ಯೆ ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡದ ಕಾರಣ ಗ್ಯಾಸ್ ಸಬ್ಸಿಡಿಯನ್ನು ಪರಿಶೀಲನೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮಗೆ ಈ ಹಣ ಬಂದಿದೆಯಾ ಎಂದು ತಿಳಿದು ಕೊಳ್ಳಲು ಹೀಗೆ ಮಾಡಿ.

advertisement

ಮೊಬೈಲ್ ಸಂಖ್ಯೆಯ ಮೂಲಕ ಗ್ಯಾಸ್ ಸಬ್ಸಿಡಿಯನ್ನು ಪರಿಶೀಲನೆ ಮಾಡಿ

ನಿಮಗೆ‌ ಗ್ಯಾಸ್ ಸಬ್ಸಿಡಿ ಹಣ ಬಂದಿದೆಯಾ ಎಂದು ತಿಳಿದುಕೊಳ್ಳಲು mylpg.in ಲಿಂಕ್ ಗೆ ತೆರಳಿ. ಇಲ್ಲಿ ಕ್ಲಿಕ್ ಟು ಯು ಗಿವ್ ಅಪ್ ಎಲ್‌ಪಿಜಿ ಸಬ್ಸಿಡಿ ಆನ್‌ಲೈನ್ ಎಂಬ ಆಯ್ಕೆ ಕಾಣುತ್ತದೆ. ತದ ನಂತರ ನಿಮ್ಮ‌ ಗ್ಯಾಸ್ ಆಯ್ಕೆಯನ್ನು ಆಯ್ದುಕೊಳ್ಳಿ. ಅದರಲ್ಲಿ ಎಲ್ ಪಿಜಿ ಗ್ಯಾಸ್, ಎಚ್‌ಪಿ ಗ್ಯಾಸ್, ಇಂಡೇನ್ ಎಂಬ ಮೂರು ಆಯ್ಕೆಗಳು ಇರಲಿದೆ. ನಂತರ ನಿಮ್ಮ ಲಾಗಿನ್ ಐಡಿ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ತುಂಬಿ. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ IFSC ಕೋಡ್ ಮತ್ತು LPG ID ಗ್ಯಾಸ್ ಸಂಪರ್ಕದೊಂದಿಗೆ ನೋಂದಾಯಿಸಲಾದ ಕ್ಯಾಪ್ಚಾವನ್ನು ಫಿಲ್ ಮಾಡಬೇಕು.ಹೀಗೆ ಮಾಡುವುದರಿಂದ ಪರಿಶೀಲನೆ ಮಾಡಬಹುದು.

ಗ್ಯಾಸ್ ಸಬ್ಸಿಡಿ ಪರಿಶೀಲನೆ ಹೀಗೂ ಮಾಡಬಹುದು

ನೀವು mylpg.in ಲಿಂಕ್‌ಗೆ ಭೇಟಿ ನೀಡಿದ ನಂತರ, ಪಾವತಿಗಳನ್ನು ತಿಳಿಯಿರಿ ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ. ನಂತರದಲ್ಲಿ ಬ್ಯಾಂಕ್ ಖಾತೆ ಸಂಖ್ಯೆಯ ಹೆಸರನ್ನು ಭರ್ತಿ ಮಾಡಿ. ನಂತರದಲ್ಲಿ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಇದನ್ನು ಭರ್ತಿ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಮತ್ತು ಅದು ಯಾವಾಗ ಜಮೆಯಾಗಿದೆ ಎಂಬ ಮಾಹಿತಿ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ಒಟ್ಟಿನಲ್ಲಿ ‌ಗ್ಯಾಸ್ ಸಬ್ಸಿಡಿ ಮೊತ್ತವು ಬಡವರ್ಗದ ಜನತೆಗೆ ಬಹಳ ಸಹಾಯಕವಾಗಿದ್ದು ಮಧ್ಯಮ ವರ್ಗದ ಕುಟುಂಬಕ್ಕೂ ಗ್ಯಾಸ್ ಖರೀದಿ ಮಾಡುವಂತಾಗಿದೆ.

advertisement

Leave A Reply

Your email address will not be published.