Karnataka Times
Trending Stories, Viral News, Gossips & Everything in Kannada

Pension Schemes: ನಿಮ್ಮ ನಿವೃತ್ತಿ ಜೀವನ ಸುಲಭವಾಗಬೇಕೇ? ಇಲ್ಲಿ ಹೂಡಿಕೆ ಮಾಡುವ ಮೂಲಕ‌ ಲಾಭ ಗಳಿಸಿ.

advertisement

ಇಂದು ಹೂಡಿಕೆ ಅನ್ನೋದು ಮುಂದಿನ ಬದುಕಿಗೆ ಸುಲಭ ಮಾರ್ಗ ವನ್ನು ಕಲ್ಪಿಸಿ ಕೊಡುತ್ತದೆ. ದುಡಿದ ಸ್ವಲ್ಪ ಭಾಗವಾದರೂ ನಾವು ಹಣ ವನ್ನು ಹೂಡಿಕೆ (Investment) ಮಾಡಲೇ ಬೇಕಾಗುತ್ತದೆ. ಕಷ್ಟ ಕಾಲದಲ್ಲಿ ಸಹಾಯ ಮಾಡುವುದೇ ನಮ್ಮ ಹೂಡಿಕೆಯ ಹಣ. ಹಾಗಾಗಿ ದುಡಿದ ಸ್ವಲ್ಪ ಭಾಗವಾದರೂ ಹಣ ಹೂಡಿಕೆ ಮಾಡಿದ್ರೆ ಮಾತ್ರ ಮುಂದಿನ ಬದುಕಿಗೆ ಸುಲಭವಾಗುತ್ತದೆ. ಅದರಲ್ಲೂ ನಿಮ್ಮ ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಮಾಡಲು ಈಗ ಹಲವಾರು ಅವಕಾಶಗಳು ಇದ್ದು ನೀವು ಕನಿಷ್ಠ ಮೊತ್ತವಾದರೂ ಹೂಡಿಕೆ ಮಾಡಲು ಅವಕಾಶ ಇದೆ. ಇದರಿಂದ ನಿಮ್ಮ ನಿವೃತ್ತ ಜೀವನವನ್ನು ಸುಖಮಯ ವಾಗಿಸಲು ಸಾಧ್ಯ ವಾಗುತ್ತದೆ, ಹಾಗಿದ್ರೆ ಯಾವೆಲ್ಲ ಯೋಜನೆ ಇದೆ ಎಂಬುದನ್ನು ಈ‌ ಲೇಖನ‌ ಮೂಲಕ ತಿಳಿಯಿರಿ.

National Pension System:

 

 

ಈ ಯೋಜನೆ ಮೂಲಕ ಹೂಡಿಕೆ ಮಾಡಲು ಉತ್ತಮ ಅವಕಾಶ ಇದ್ದು ಇದರ ಮೂಲಕ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರು ಸೇರಿದಂತೆ ಕಾರ್ಮಿಕ ವರ್ಗಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ‌ ಈ ಯೋಜನೆ ಜಾರಿಗೆ ತರಲಾಗಿದೆ. 60 ವರ್ಷದ ನಂತರ, ಹೂಡಿಕೆದಾರರು ಈ ಯೋಜನೆಯ 60 ಪ್ರತಿಶತವನ್ನು ಹಿಂಪಡೆಯಬಹುದು.18 ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಈ National Pension System ಯೋಜನೆಯಡಿ ಹೂಡಿಕೆ ಮಾಡಬಹುದು. ಅಷ್ಟೆ ಅಲ್ಲದೆ ರಾಷ್ಟ್ರೀಯ ಪಿಂಚಣಿ ಯೋಜನೆಯ (Pension Scheme) ಮೂಲಕ ಎರಡು ಖಾತೆಗಳನ್ನು ತೆರೆಯಬಹುದಾಗಿದ್ದು ಟೈರ್-1 ಮೂಲಕ ಕನಿಷ್ಠ 500 ರೂ ಟೈರ್‌ 2 ಅಡಿಯಲ್ಲಿ 1000 ರೂ. ಹೂಡಿಕೆ ಮಾಡಿ ನಿವೃತ್ತಿ ಸಂದರ್ಭದಲ್ಲಿ ಈ ಹೂಡಿಕೆ ಉಪಯೋಗಕ್ಕೆ ಬರುತ್ತದೆ.

advertisement

Mutual Funds:

 

 

ಅದೇ ರೀತಿ ಮ್ಯುಚುವಲ್ ಫಂಡ್ (Mutual Fund) ಮೂಲಕವು ಹೂಡಿಕೆ ಮಾಡಿ ಲಾಭ ಗಳಿಸಬಹುದಾಗಿದೆ. ಈಗ ಲಭ್ಯವಿರುವ ಎಲ್ಲ ಹೂಡಿಕೆಯಲ್ಲಿ ಮ್ಯೂಚುವಲ್ ಫಂಡ್‌ಗಳು ಉತ್ತಮ ಮತ್ತು ಹೆಚ್ಚು ಆದಾಯ ನೀಡುವ ಹೂಡಿಕೆ ಯಾಗಿದೆ. ಖಾಸಗಿ ಹೂಡಿಕೆ ಯೋಜನೆ (Private Investment Scheme) ಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಜನಪ್ರಿಯ ಯೋಜನೆಗಳಾಗಿದ್ದು ನಿಮ್ಮ ಹಣಕಾಸಿನ ಆಧಾರದ ಮೂಲಕ ಹೂಡಿಕೆ ಮಾಡಬಹುದಾಗಿದೆ. ಮ್ಯೂಚುವಲ್‌ ಫಂಡ್‌ಗಳು ನಿವೃತ್ತ ಜೀವನಕ್ಕೆ ಬಹಳ ಉತ್ತಮ ಆಯ್ಕೆ ಎನ್ನಬಹುದು.

Insurance Schemes:

ಅನೇಕ ಪಿಂಚಣಿ ಯೋಜನೆಗಳು (Pension Schemes) ಜೀವ ವಿಮಾ ರಕ್ಷಣೆ ಮತ್ತು ಹೂಡಿಕೆಯ ಆಯ್ಕೆಗಳನ್ನು ನೀಡಿವೆ. ಜೀವ ವಿಮಾ ಪಾಲಿಸಿ (Life Insurance Policy) ಮೂಲಕ ನಿಗದಿ ಮಾಡಲಾದ ‌ ಮೊತ್ತವನ್ನು ನಿವೃತ್ತ ಜೀವನದ ಬಳಕೆಗೆ ಆರೋಗ್ಯ ರಕ್ಷಣೆಗೆ, ಕಷ್ಟದ ಸಮಯಕ್ಕೆ ಹೀಗೆ ಹಲವಾರು ವಿಧಗಳಲ್ಲಿ ಬಳಸಿ‌ಕೊಳ್ಳ ಬಹುದಾಗಿದೆ. ನೀವು ನಿಗದಿತ ಕಂತುಗಳ ಮೂಲಕ ಪ್ರೀಮಿಯಂ ಹಣ ವನ್ನು ಕಟ್ಟುವ ಮೂಲಕ ಒಪ್ಪಂದದೊಂದಿಗೆ ವಿಮಾ ಕಂಪನಿಯಿಂದ ಪಾಲಿಸಿ ಮಾಡಿಸಿಕೊಳ್ಳಬಹುದು.

advertisement

Leave A Reply

Your email address will not be published.