Karnataka Times
Trending Stories, Viral News, Gossips & Everything in Kannada

Ranbir Kapoor: ಅನಿಮಲ್ ನಟ ರಣಬೀರ್ ಕಪೂರ್ ಅವರ ತಿಂಗಳ ಆದಾಯ ಎಷ್ಟು ಗೊತ್ತೆ? ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?

advertisement

ಇಂದು ಎಲ್ಲಿ ನೋಡಿದ್ರೂ ಅನಿಮಲ್ ಸಿನಿಮಾದ ಮಾತುಕತೆ ಜೋರಾಗಿದೆ. ಅಷ್ಟರ ಮಟ್ಟಿಗೆ ಸಿನಿಮಾ ಸೌಂಡ್ ಮಾಡಿದೆ. ಈಗಾಗಲೇ ಈ ಚಿತ್ರ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ರಣಬೀರ್ (Ranbir Kapoor) ಮತ್ತು ರಶ್ಮೀಕಾ (Rashmika Mandanna) ಜೋಡಿಗೆ ಅಭಿಮಾನಿಗಳು ಪುಲ್ ಮಾರ್ಕ್ ನೀಡಿದ್ದಾರೆ. ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ ಅನಿಮಲ್ ಚಿತ್ರ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ್ದು ದಾಖಲೆಯನ್ನು ಸೃಷ್ಟಿ ಮಾಡಿದೆ.‌ ರಣಬೀರ್ ಕಪೂರ್ (Ranbir Kapoor) ಕರಿಯರ್‌ನಲ್ಲಿ ಇದುವರೆಗೂ ಯಾವ ಸಿನಿಮಾವೂ ಮಾಡಿರದಂತಹ ದಾಖಲೆಯನ್ನು ಅನಿಮಲ್ ಚಿತ್ರ ಸೃಷ್ಟಿ ಮಾಡಿದ್ದು ವರ್ಷದ ಕೊನೆಯಲ್ಲಿ ಭರ್ಜರಿ ಧಮಕಾ ನೀಡಿದೆ. ಬಿಡುಗಡೆಯಾದ ಕೆಲವೇ ದಿನಕ್ಕೆ ಕಲೆಕ್ಷನ್‌ ವಿಚಾರದಲ್ಲಿ ಹೆಚ್ಚು ಹೆಸರು ಮಾಡಿದೆ ಎನ್ನಬಹುದು.

ರಣಬೀರ್ ಅಭಿಮಾನಿಗಳು ಹೆಚ್ಚಳ:

ಸಾವರಿಯಾ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಹೀರೋ ಆಗಿ ಬಹಳಷ್ಟು ಸದ್ದು ಮಾಡಿದವರು ರಣಬೀರ್ ಕಪೂರ್, ಬಹಳಷ್ಟು ಅಭಿಮಾನಿಗಳನ್ನು ಗಿಟ್ಟಿಸಿ ಕೊಂಡಿರುವ ಇವರು ಅನೇಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಮೋಸ್ಟ್ ಪೇಮ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಸಂಜು ಸಿನಿಮಾದಲ್ಲಿ ನಟಿಸಿದ ರಣಬೀರ್ ಕಪೂರ್ (Ranbir Kapoor) ಅವರಿಗೆ ಬಹು ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದ್ದು ಈಗ ಅನಿಮಲ್ ಮೂಲಕ ಸದ್ದು ಮಾಡುತ್ತಿದ್ದಾರೆ.

 

 

ಹೆಚ್ಚಿನ‌ ಆದಾಯ ಗಳಿಕೆ:

advertisement

ಇದೀಗ ರಣಬೀರ್ ಕೈಯಲ್ಲಿ ಅನೇಕ ಸಿನಿಮಾಗಳಿದ್ದು ಅನೇಕ ಉದ್ಯಮಗಳ ಮೇಲೂ ಅವರು ಉತ್ತಮ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಶ್ರೀಮಂತ ನಟನೆಂದು ಕೂಡ ಇವರನ್ನು ಪರಿಗಣಿಸಬಹುದು‌. ಇಂಡಿಯನ್ ಸೂಪರ್ ಲೀಗ್ (Indian Super League) ತಂಡ ಮುಂಬೈ (Mumbai) ಸಿಟಿ ಎಫ್‌ಸಿ ಮಾಲೀಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌. ಅದೇ ರೀತಿ ಸೂಪರ್ ಲೀಗ್ ತಂಡದಲ್ಲಿ ಇವರು 35% ಪಾಲನ್ನು ಸಹ ಪಡೆದಿದ್ದಾರೆ. ಸುಮಾರು 20 ಲಕ್ಷ ಮೌಲ್ಯದ 37,200 ಷೇರುಗಳನ್ನು ಖರೀದಿ ಮಾಡಿದ್ದು ರಣಬೀರ್ ಕಪೂರ್ ಪುಣೆಯ ಟ್ರಂಪ್ ಟವರ್ಸ್‌ನಲ್ಲಿ 13 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಅಪಾರ್ಟ್‌ಮೆಂಟ್ ಅನ್ನು ಸಹ ಹೊಂದಿದ್ದಾರೆ. ಅಷ್ಟೆ ಅಲ್ಲದೆ ಪ್ರೊಡಕ್ಷನ್ ಹೌಸ್ ಕೂಡ ಆರಂಭ ಮಾಡಿದ್ದಾರೆ.

ಜಾಹೀರಾತಿನಲ್ಲಿ ನಟನೆ:

ಇನ್ನೂ ರಣಬೀರ್ ಕಪೂರ್ ಅನೇಕ ಜನಪ್ರಿಯ ಬ್ರ್ಯಾಂಡ್‌ಗಳಾದ ಲೇಸ್ (Lays), ಏಷ್ಯನ್ ಪೇಂಟ್ಸ್ (Asian Paints), ಲೆನೊವೊ (Lenovo), ಪ್ಯಾನಾಸೋನಿಕ್ (Panasonic) ಇನ್ನಿತರ ಬ್ರ್ಯಾಂಡ್ ಅನ್ನು ಪ್ರತಿನಿಧಿಸಿ ವಿವಿಧ ಜಾಹೀರಾತು ಗಳಲ್ಲಿ ನಟನೆ ಮಾಡುತ್ತಾರೆ. ಈ ಮೂಲಕ ಇವರ ಪೇಮ್ ಮತ್ತಷ್ಟು ಹೆಚ್ಚಾಗಿದೆ.

ನಿವ್ವಳ ಮೌಲ್ಯ ಎಷ್ಟು?

ವಾರ್ಷಿಕವಾಗಿ ಸುಮಾರು 30 ಕೋಟಿ ರೂಪಾಯಿಗಳನ್ನು ಗಳಿಸುವ ರಣಬೀರ್ ಕಪೂರ್, ಪ್ರತಿ ಚಿತ್ರಕ್ಕೆ ಸುಮಾರು 50 ಕೋಟಿ ಆದಾಯ ಪಡೆಯುತ್ತಾರೆ. ಇವರ ನಿವ್ವಳ ಮೌಲ್ಯ 345 ಕೋಟಿ ರೂಪಾಯಿ ಎಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ, ಒಟ್ಟಿನಲ್ಲಿ ಅನಿಮಲ್ ಸಿನಿಮಾ (Animal Movie) ದ ಸಕ್ಸಸ್ ಅಂತು ಜೋರಾಗಿಯೇ ನಡೆಯುತ್ತಿದೆ.

advertisement

Leave A Reply

Your email address will not be published.