Karnataka Times
Trending Stories, Viral News, Gossips & Everything in Kannada

RBI: ATM ನಿಂದ ಹಾನಿಯಾದ ನೋಟು ಬಂದರೆ ಹೆದರಬೇಡಿ, ಈ ರೀತಿ ಅನುಸರಿಸಿ ಹೊಸ ನೋಟು ಪಡೆಯಿರಿ.

advertisement

ಇಂದು ಡಿಜಿಟಲ್ ಪಾವತಿ ಹೆಚ್ಚಾಗಿದೆ. ಜನರು ಸಣ್ಣ ಮೊತ್ತ ಬಳಕೆಗೂ ಗೂಗಲ್ ಪೇ (Google Pay), ಪೋನ್ ಪೇ (Phone Pe) ಇತ್ಯಾದಿಯನ್ನೇ ಬಳಕೆ ಮಾಡುತ್ತಾರೆ. ಅದೇ ರೀತಿ ತಕ್ಷಣಕ್ಕೆ ಹಣ ಬೇಕು ಅಂದಾಗ ATM ಬಳಕೆ ಮಾಡುತ್ತಾರೆ. ಈ ಹಣದ ವರ್ಗಾವಣೆಗೆ ಗ್ರಾಹಕರಿಗೆ ಕ್ಯಾಷಿಯರ್‌ಗಳು, ಬ್ಯಾಂಕ್ ಸಿಬಂದಿಗಳು ಅಗತ್ಯವಿಲ್ಲ. ಜನರಿಗೆ ಬೇಕಾದ ಸಮಯದಲ್ಲಿ ಹಣ ಡೆಬಿಟ್ ಮಾಡಬಹುದಾಗಿದೆ. ಗ್ರಾಹಕರು ಆಗಿಂದಾಗ್ಗೆ ತಮ್ಮ ATM Pin ಹಾಕುವ ಮೂಲಕ ನಿಮ್ಮ ಖಾತೆಯಲ್ಲಿರುವ ಹಣ ಪಡೆಯಬಹುದಾಗಿದೆ.

RBI ಈ ಅವಕಾಶ ನೀಡಿದೆ:

ಕೆಲವೊಮ್ಮೆ ATM ಗಳಿಂದ ಹಣ ಪಡೆಯುವಾಗ ಹಾನಿಗೊಳಗಾದ ಅಥವಾ ಹರಿದ ನೋಟುಗಳನ್ನು (Damaged Notes)  ATM Machines ನೀಡುತ್ತವೆ. ಇದೀಗ ಈ ವಿಚಾರವಾಗಿ ‌ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಾನಿಗೊಳಗಾದ ನೋಟುಗಳನ್ನು ಬದಲಾಯಿಸಲು ಅವಕಾಶ ನೀಡಿದೆ.

 

 

ಹೀಗೆ ಮಾಡಬಹುದು:

advertisement

RBI ನಿಯಮದ ಪ್ರಕಾರ, ನೀವು ATM ನಿಂದ ಹರಿದ ಅಥವಾ ಹಾನಿಯಾದ ನೋಟುಗಳನ್ನು (Torn or Damaged Notes) ಪಡೆದಿದ್ದರೆ, ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್‌ಗೆ ತೆರಳಿ ನೋಟು‌ ಬದಲಾವಣೆ ಮಾಡಬಹುದಾಗಿದೆ. ಹೀಗಾಗಿ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಮುಖ್ಯ‌ ಅವಕಾಶ ವನ್ನು ನೀಡಿದೆ.

ಆಪ್ಲಿಕೇಷನ್ ನೀಡಬೇಕು:

ಎಟಿಎಂನಿಂದ ಹರಿದ ನೋಟುಗಳನ್ನು ಪಡೆದಿದ್ದರೆ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಅಲ್ಲಿ ನೀಡುವಂತಹ ಆಪ್ಲಿಕೇಷನ್ ನಲ್ಲಿ ಹಣವನ್ನು ಹಿಂತೆಗೆದುಕೊಂಡ ದಿನಾಂಕ, ಮತ್ತು ಎಟಿಎಂ ಹೆಸರು (ATM Name), ಸ್ಥಳ ಇತ್ಯಾದಿ ವಿವರಗಳನ್ನು ನೀಡಬೇಕು. ಈ ಅಪ್ಲಿಕೇಶನ್ ಜೊತೆಗೆ ನೀವು ಎಟಿಎಂ ರಸೀದಿ (ATM Receipt), ನಿಮ್ಮ ಮೊಬೈಲ್‌ ಸಂಖ್ಯೆ (Mobile Number) ಮಾಹಿತಿ ಇತ್ಯಾದಿ ನೀಡಬೇಕು. ಒಂದು ವೇಳೆ ಈ ನೋಟುಗಳನ್ನು ಬದಲಾಯಿಸಲು ಬ್ಯಾಂಕ್ ನಿರಾಕರಿಸಿದರೆ, ಆ ಬ್ಯಾಂಕ್ ಮೇಲೆ 10,000 ದಂಡ ವಿಧಿಸಬಹುದು.

ಶುಲ್ಕ ಪಾವತಿ:

ನೀವು ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಇನ್ನು ಮುಂದೆ ಹೆಚ್ಚಿನ ವಹಿವಾಟು ವನ್ನು ನಡೆಸಿದರೆ, ಪ್ರತಿ ವಹಿವಾಟಿಗೆ 20 ರೂ. ವರೆಗೆ ಗ್ರಾಹಕರು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನೀವು ಎಟಿಎಂನಿಂದ ಹಣವನ್ನು ಪಡೆದ ತಕ್ಷಣವೇ ಬ್ಯಾಂಕ್ ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಿ ಡೆಬಿಟ್ ಆದ ಮೊತ್ತದ ಬಗ್ಗೆ ಮಾಹಿತಿ ನೀಡುತ್ತದೆ.

advertisement

Leave A Reply

Your email address will not be published.