Karnataka Times
Trending Stories, Viral News, Gossips & Everything in Kannada

Horoscope Today: ಡಿಸೆಂಬರ್ 8 ರಂದು ಯಾವೆಲ್ಲಾ ರಾಶಿಗಳಿಗೆ ಲಾಭ ಸಿಗಲಿದೆ ಗೊತ್ತಾ?

advertisement

ಬೆಳಗ್ಗೆ ಎದ್ದ ತಕ್ಷಣ ಈ ದಿನ ಚೆನ್ನಾಗಿರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ದಿನ ಚೆನ್ನಾಗಿರಬೇಕಾದರೆ ಅದಕ್ಕೆ ರಾಶಿ ಫಲಗಳು ಕಾರಣವಾಗುತ್ತವೆ. 2023 ಡಿಸೆಂಬರ್ 8 ರ ಹನ್ನೆರಡು ರಾಶಿಗಳ ರಾಶಿ ಫಲಗಳು (Horoscope Today) ಹೇಗಿವೆ? ಎನ್ನುವುದರ ಕಂಪ್ಲೀಟ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ:

ಈ ದಿನ ನೀವು ವ್ಯಾಪಾರ ಕ್ಷೇತ್ರದಲ್ಲಿ ಅಧಿಕ ಲಾಭವನ್ನು ಕಾಣುವಿರಿ. ಹಣದ ಮೂಲಗಳು ಅಧಿಕವಾಗಲಿದ್ದು, ಧನಾಗಮವಾಗಲಿದೆ. ಅತಿಯಾದ ಕೋಪ ಒಳ್ಳೆಯದಲ್ಲ, ಆದಷ್ಟು ತಾಳ್ಮೆ ವಹಿಸಿದರೆ ಉತ್ತಮ.

ವೃಷಭ ರಾಶಿ: 

ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯಿದ್ದು, ಹೀಗಾಗಿ ಹಣವನ್ನು ಜಾಗರೂಕರಾಗಿ ವಿನಿಯೋಗಿಸಿ. ನೀವು ಅಪಮಾನಗಳಿಗೆ ಗುರಿಯಾಗುವ ಸಾಧ್ಯತೆಯಿದೆ. ನಷ್ಟದ ಕಾರಣದಿಂದ ಸಾಲಕ್ಕೆ ಸಿಲುಕುವಿರಿ, ಹೀಗಾಗಿ ಎಚ್ಚರವಿರಲಿ.

ಮಿಥುನ ರಾಶಿ:

ಆರ್ಥಿಕ ಸಮಸ್ಯೆಯೂ ನಿಮ್ಮನ್ನು ಸಾಲದ ಸುಳಿಗೆ ದೂಡಲಿದೆ. ಸಹೋದ್ಯೋಗಿಗಳಿಂದ ಹಣವನ್ನು ಪಡೆಯುವಾಗ ಸ್ವಲ್ಪ ಎಚ್ಚರವಿರಲಿ. ಆರೋಗ್ಯವು ಕೈ ಕೊಡಬಹುದು. ಜೀವನದಲ್ಲಿ ಏನೇ ಎದುರಾದರೂ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಿ.

ಕಟಕ ರಾಶಿ:

ಇಂದು ನೀವು ಉದ್ಯೋಗನಿಮಿತ್ತ ದೂರ ಪ್ರಯಾಣವನ್ನು ಕೈಗೊಳ್ಳುವಿರಿ. ಮಕ್ಕಳಿಂದ ನಷ್ಟವಾಗುವ ಸಾಧ್ಯತೆಯಿದೆ. ನೆರೆಹೊರೆಯವರ ಜೊತೆಗಿನ ವಾದವು ಸಂಬಂಧವನ್ನು ಹಾಳು ಮಾಡಬಹುದು. ನೀವು ನಿದ್ರಾಭಂಗವನ್ನು ಅನುಭವಿಸುವಿರಿ.

ಸಿಂಹ ರಾಶಿ:

ಇಂದು ನೀವು ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಕೂಡ ಅದರಲ್ಲಿ ಜಯ ದೊರೆಯುತ್ತದೆ. ಧನಾಗಮನ ಮತ್ತು ಲಾಭದಂತಹ ಸುದ್ದಿಯನ್ನು ಕೇಳುವಿರಿ. ಹಣಕಾಸಿನ ಖರ್ಚಿನ ವಿಚಾರದಲ್ಲಿ ಸ್ವಲ್ಪ ಇತಿಮಿತಿಯಿರಲಿ.

ಕನ್ಯಾ ರಾಶಿ:

advertisement

ದಂಪತಿಗಳ ನಡುವಿನ ವಾದ ವಿವಾದಗಳು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು. ಇಂದು ನೀವು ಸಂಗಾತಿಯ ಜೊತೆಗೆ ಮಾತಿಗಿಳಿಯುವಾಗ ಯೋಚಿಸಿ ಮಾತನಾಡುವುದು ಒಳಿತು. ಉದ್ಯೋಗ ಒತ್ತಡಗಳು ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸುತ್ತವೆ.

ತುಲಾ ರಾಶಿ:

ಸಂಗಾತಿಯಿಂದ ಧನಾಗಮನವಾಗುತ್ತವೆ. ಈ ದಿನ ನೀವು ತಂದೆಯೊಡನೆ ಕವಾದಕ್ಕೆ ಇಳಿದು ಕಿರಿಕಿರಿ ಅನುಭವವನ್ನು ಅನುಭವಿಸುವಿರಿ. ಅನಿರೀಕ್ಷಿತ ಘಟನೆಯಿಂದ ಹಣಕಾಸಿನ ವಿಚಾರದಲ್ಲಿ ನಷ್ಟವಾಗಲಿದೆ.

ವೃಶ್ಚಿಕ ರಾಶಿ:

ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳು ಇಂದು ಪೂರ್ಣವಾಗಲಿದೆ. ಪ್ರಯಾಣದಿಂದ ಅನುಕೂಲವಾಗಲಿದ್ದು, ಅಧಿಕ ಲಾಭವಾಗುವ ದಿನವಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸಗಳು ಕೆಲಸ ಕಾರ್ಯಗಳಿಗೆ ಭಂಗ ತರಲಿದೆ.

ಧನುಸ್ಸು ರಾಶಿ:

ಇಂದು ನೀವು ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡವನ್ನು ಅನುಭವಿಸಲಿದ್ದೀರಿ. ಬೇರೆ ವ್ಯಕ್ತಿಯ ಮೇಲೆ ಸಂಶಯ ಪಡುವುದರಿಂದ ನಿಮ್ಮ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಲಿದೆ.

ಮಕರ ರಾಶಿ:

ಪಿತ್ರಾರ್ಜಿತ ಆಸ್ತಿಗೆ ಸಂಬಂಧ ಪಟ್ಟಂತೆ ಕೇಸ್ ಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ಮಿತ್ರರಿಂದ ಆರ್ಥಿಕ ಸಹಾಯವನ್ನು ಪಡೆಯುವಿರಿ. ದಾಂಪತ್ಯದಲ್ಲಿ ಕಲಹಗಳು ಎದುರಾಗಬಹುದು.

ಕುಂಭ ರಾಶಿ:

ಆಕಸ್ಮಿಕ ಧನಾಗಮನವಾಗಲಿದ್ದು, ಶತ್ರುಗಳಿಂದ ತೊಂದರೆಯನ್ನು ಅನುಭವಿಸುವಿರಿ. ಆದರೆ ಕುಟುಂಬದಲ್ಲಿ ಇಂದು ಸುಖ, ಶಾಂತಿ, ನೆಮ್ಮದಿಯ ವಾತಾವರಣವು ನಿರ್ಮಾಣವಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ದಿನ ಇಂದು ನಿಮ್ಮದಾಗಲಿದೆ.

ಮೀನ ರಾಶಿ:

ಬಹುಕಾಲದಿಂದ ಇರುವ ಆರ್ಥಿಕ ಸಂಕಷ್ಟಗಳು ಇಂದು ಬಗೆಹರಿಯುವುದು. ಆರೋಗ್ಯ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು. ಬೇರೆಯವರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ತಾಳ್ಮೆ ವಹಿಸಿ.

advertisement

Leave A Reply

Your email address will not be published.