Karnataka Times
Trending Stories, Viral News, Gossips & Everything in Kannada

SIP: ತಿಂಗಳಿಗೆ 25,000ರೂ. ಠೇವಣಿ ಇಟ್ಟರೆ ಹಿಂಪಡೆಯಬಹುದು 20 ಲಕ್ಷ ರೂಪಾಯಿ, ಇಲ್ಲಿದೆ ಸರಳ ಉಪಾಯ

advertisement

ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕೂಡ ನಮ್ಮ ಬಳಿ ಹಣ ಇರಬೇಕು, ಆದರೆ ಅದು ಹೇಗೆ ಸಾಧ್ಯ ಅಂತ ಯೋಚನೆ ಮಾಡುತ್ತಿದ್ದೀರಾ? ಅದಕ್ಕೂ ಒಂದು ಮಾರ್ಗವಿದೆ. ಭವಿಷ್ಯದಲ್ಲಿ ನಿಮ್ಮ ಬಳಿ ಹಣ ಇಲ್ಲದೇ ಇರುವ ಪರಿಸ್ಥಿತಿ ಎದುರಾಗದಂತೆ ನೀವು ಇಂದಿನಿಂದಲೇ ಈ ಕೆಲಸ ಆರಂಭಿಸಬೇಕು. ಅದಕ್ಕಾಗಿಯೇ ನೀವು SIP ಹೂಡಿಕೆ ಆಯ್ದುಕೊಳ್ಳುವುದು ಒಳ್ಳೆಯದು. ಸ್ಟಾಕ್ ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಬಯಸದೆ ಇರುವವರು ಈ ಹೂಡಿಕೆಯನ್ನು ಆಯ್ದುಕೊಳ್ಳಬಹುದು ಇದರಲ್ಲಿ ಸಾಕಷ್ಟು ಬೆನಿಫಿಟ್ ಗಳು ಇದ್ದು ನೀವು ಕಡಿಮೆ ಮೊತ್ತದಲ್ಲಿಯೂ ಕೂಡ ಹೆಚ್ಚು ಆದಾಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

SIP ಯಲ್ಲಿ 25,000 ಹೂಡಿಕೆ ಮಾಡಿ ಸಾಕು:

 

 

advertisement

SIP ಯಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ನೀವು 25,000ರೂ. ಪ್ರತಿ ತಿಂಗಳು ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. ಆಗ ಒಂದು ವರ್ಷಕ್ಕೆ 3 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ನೀವು ಸುಮಾರು ಐದು ವರ್ಷಗಳವರೆಗೆ ಮಾಸಿಕ ಹೂಡಿಕೆ ಮಾಡಬೇಕು. ಅಂದರೆ ಐದು ವರ್ಷಗಳ ಅವಧಿಗೆ ನಿಮ್ಮ SIP Account ಯಲ್ಲಿ 15 ಲಕ್ಷ ರೂಪಾಯಿ ಸಂಗ್ರಹವಾಗುತ್ತದೆ. ಉತ್ತಮ ವಿಷಯ ಅಂದ್ರೆ ಇದರಲ್ಲಿ ನೀವು 12% ನಷ್ಟು ವಾರ್ಷಿಕ ಲಾಭ ಪಡೆಯಬಹುದು. ಬಡ್ಡಿಯನ್ನು ಕಾಂಪೌಂಡ್ ಮಾಡುವ ಪ್ರಯೋಜನ ಕೂಡ ಇರುತ್ತದೆ ಅಂದರೆ ಬಡ್ಡಿಯ ಮೇಲೆ ನೀವು ಮತ್ತೆ ಬಡ್ಡಿಯನ್ನು ಗಳಿಸಬಹುದು.

SIP ಯಲ್ಲಿ ಹೂಡಿಕೆ ಮಾಡಿದರೆ ಒಟ್ಟಿಗೆ ನೀವು ಪಡೆಯುವ ಬಡ್ಡಿಯ ಮೊತ್ತ 5,62,159 ರೂಪಾಯಿಗಳು. ಹೂಡಿಕೆ ಮೊತ್ತ ಹಾಗೂ ಬಡ್ಡಿ ಎರಡನ್ನು ಒಟ್ಟಿಗೆ ನೀವು ಮುಕ್ತಾಯದ ಸಮಯದಲ್ಲಿ ಪಡೆಯುವುದಾದರೆ ಒಟ್ಟು ನಿಮಗೆ ಸಿಗುವ ಮೊತ್ತ 20,62,159 ರೂಪಾಯಿಗಳು. ಈ ಲೆಕ್ಕಾಚಾರ ನೀವು ತಿಂಗಳಿಗೆ ರೂ.25,000 ಹೂಡಿಕೆ ಮಾಡಿದಾಗ ಇನ್ನು ಇದಕ್ಕಿಂತ ಹೆಚ್ಚಿಗೆ ಹೂಡಿಕೆ ಮಾಡಿದರೆ ಮತ್ತು ಹೆಚ್ಚಿನ ಉತ್ತಮ ಲಾಭವನ್ನು ಪಡೆಯಬಹುದು.

SIP Account ಮೆಚ್ಯೂರ್ ಆದ ನಂತರವೂ ಕೂಡ ನೀವು ಆ ಹಣವನ್ನು ಅದೇ ಖಾತೆಯಲ್ಲಿ ಮೂರು ವರ್ಷ ಅಥವಾ ಐದು ವರ್ಷಗಳ ಅವಧಿಗೆ ಮುಂದುವರಿಸಲು ಕೂಡ ಸಾಧ್ಯವಾಗುತ್ತದೆ. ಆಗ ಅದಕ್ಕೂ ಕೂಡ ಹೆಚ್ಚುವರಿ ಬಡ್ಡಿ ಲಾಭ ನಿಮಗೆ ಸಿಗುತ್ತದೆ.

ಎಸ್ಐಪಿ ಲಾಭ ಗಳಿಸುವುದಕ್ಕಾಗಿ ನೀವು ದೀರ್ಘಕಾಲದ ಹೂಡಿಕೆಯನ್ನು ಮಾಡಬೇಕು. ನಿಮ್ಮ ನಿಮ್ಮ ಎಸ್ಐಪಿ ಹೂಡಿಕೆ ಸ್ಟಾಕ್ ಮಾರ್ಕೆಟ್ ಏರಿಳಿತದಿಂದ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿಡಿ. ಅಂದರೆ ನಿಮ್ಮ ಆದಾಯ ಮಾರುಕಟ್ಟೆ ಅಪಾಯವನ್ನು ಹೊಂದಿರುತ್ತದೆ. ಆದ್ದರಿಂದ SIP ಹೂಡಿಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಹಿರಿಯ ನಾಗರಿಕರಿಗೆ SIP ರಿಸ್ಕ್ ಅಷ್ಟು ಸೂಕ್ತವಲ್ಲ. ಆದಾಗ್ಯೂ ನೀವು ಹೊಡಿಕೆ ಮಾಡಲು ಬಯಸಿದರೆ, ಹೂಡಿಕೆ ಮಾಡುವುದಕ್ಕೂ ಮೊದಲು ಆರ್ಥಿಕ ಸಲಹೆಗಾರರನ್ನ ಸಂಪರ್ಕಿಸುವುದು ಒಳ್ಳೆಯದು.

advertisement

Leave A Reply

Your email address will not be published.