Karnataka Times
Trending Stories, Viral News, Gossips & Everything in Kannada

e-Shram Card: ಇ ಶ್ರಮ್ ಕಾರ್ಡ್ ಇರುವ ಕಾರ್ಮಿಕರಿಗೆ ಬಂಪರ್ ಸುದ್ದಿ ಘೋಷಿಸಿದ ಸರ್ಕಾರ!

advertisement

ಕಾರ್ಮಿಕರ ಹಿತರಕ್ಷಣೆಯ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅನೇಕ ವಿಧವಾಗಿ ಕಾರ್ಮಿಕ ಜನಹಿತ ಯೋಜನೆ ಪರಿಚಯಿಸಿದ್ದು ಅವುಗಳಲ್ಲಿ ಒಂದಾದ ಇ ಶ್ರಮ್ ಕಾರ್ಡ್ (e-Shram Card) ಯೋಜನೆ ಅಗ್ರ ಸ್ಥಾನವನ್ನು ಪಡೆದಿದೆ. ಹಾಗಿದ್ದರೂ ಈ ಯೋಜನೆ ಬಗ್ಗೆ ಅನೇಕರಿಗೆ ಇದುವರೆಗೆ ಕ್ಲಪ್ತ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಬಹುದು. ಈ ಯೋಜನೆಗೆ ಈಗ ಹೊಸ ವಿಚಾರ ಒಂದು ಸೇರ್ಪಡೆ ಆಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

What is e-shram Card?

 

 

ಇ ಶ್ರಮ್ ಕಾರ್ಡ್ (e-Shram Card) ಎನ್ನುವುದು ಕಾರ್ಮಿಕರಿಗಾಗಿ ಹುಟ್ಟಿಕೊಂಡ ಒಂದು ಯೋಜನೆಯಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಮಾಹಿತಿ ಸಂಗ್ರಹಿಸುವ ಸಲುವಾಗಿ ಈ ಒಂದು ಯೋಜನೆ ತುಂಬಾ ಚಿರಪರಿಚಿತವಾಗಿದೆ. ಈ ಒಂದು ಯೋಜನೆ ಮೂಲಕ ಕಾರ್ಮಿಕರು ಸರಕಾರದಿಂದ ಲಭ್ಯ ವಾಗುವ ಅನೇಕ ಪ್ರಯೋಜನದ ಫಲಾನುಭವಿಗಳಾಗಬಹುದು. ವಲಸೆ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು, ಮನೆ ಕೆಲಸದವರು, ಕೂಲಿಯವರು ಸೇರಿದಂತೆ ಅನೇಕ ಸಣ್ಣ ಪುಟ್ಟ ಕೆಲಸ ಮಾಡಿ ದಿನ ಕಳೆಯುವ ಶ್ರಮಿಕ ವರ್ಗಕ್ಕೆ ಈ ಯೋಜನೆ ಅನುಕೂಲ ಆಗಲಿದೆ.

ವಯಸ್ಸಿನ ಮಿತಿ ಇತ್ತು:

advertisement

ಇಶ್ರಮ್ ನೋಂದಣಿ ಪೋರ್ಟಲ್ ಅನ್ನು ಆರಂಭ ಮಾಡಿದ್ದು ಇದರಲ್ಲಿ ಕಾರ್ಮಿಕರು ಹೆಸರು ಇತರ ಮಾಹಿತಿ ನೋಂದಾಯಿಸಬಹುದು. ಹಾಗೇ ನೋಂದಣಿ ಮಾಡಿಕೊಂಡವರಿಗೆ ವಿಶಿಷ್ಟ ಗುರುತಿನ ಲಾರ್ಡ್ ನೀಡಲಾಗುವುದು ಅದರ ಹೆಸರಿ ಇ ಶ್ರಮ್ ಕಾರ್ಡ್ ಎಂದು ಇರಲಿದೆ. ಈ ಹಿಂದೆ ಇದಕ್ಕೆ ವಯಸ್ಸಿನ ಮಿತಿ ಇದ್ದು 16 ರಿಂದ 59 ವರ್ಷದ ವರೆಗಿನ ಕೂಲಿ ಕಾರ್ಮಿಕರು, ಶ್ರಮಿಕರು ಈ ಕಾರ್ಡ್ ಮಾಡಿಸಬಹುದಿತ್ತು ಈಗ ಈ ಮಿತಿಯನ್ನು ವಿಸ್ತರಿಸಲಾಗಿದೆ.

ಕಾರ್ಮಿಕರಿಗೆ ಬಂಪರ್ ಸುದ್ದಿ:

ಈಗ ಕಾರ್ಮಿಕರಿಗೆ ಇ ಶ್ರಮ್ ಕಾರ್ಡ್ (e-Shram Card) ನಡಿಯಲ್ಲಿ ಇರುವ ವಯಸ್ಸಿನ ಮಿತಿ ವಿಸ್ತರಿಸಿದ್ದ ವಿಚಾರ ಬಂಪರ್ ಸುದ್ದಿ ಸಿಕ್ಕಂತಾಗಿದೆ. ಕಾರ್ಮಿಕರ ವಯಸ್ಸಿನ ಮಿತಿಯನ್ನು 59 ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಿದ್ದಾರೆ. ಈ ಬಗ್ಗೆ ಸ್ವತಃ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಜನ ಸಾಮಾನ್ಯರಿಗೆ ಈ ಕ್ರಮದಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.

ಏನಂದ್ರು ಸಚಿವರು?

ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾರ್ಡ್ (Minister Santosh Lord) ಅವರು ಇತ್ತೀಚೆಗೆ ಮಾಧ್ಯಮದ ಮುಂದೆ ಇ ಶ್ರಮ್ ಕಾರ್ಡ್ ಫಲಾನುಭವಿಗಳ ವಯಸ್ಸಿನ ಅರ್ಹತಾ ಮಿತಿ ವಿಸ್ತರಿಸಿದ್ದ ಬಗ್ಗೆ ಮಾತನಾಡಿದ್ದಾರೆ ಬಳಿಕ ಆಟೋ ಚಾಲಕರು, ಗ್ಯಾರೇಜ್ ಮಾಲಕರು, ಟೈರ್ ಅಂಗಡಿ, ಸೈಕಲ್ ಅಂಗಡಿ, ಮೆಕ್ಯಾನಿಕ್ ಇತರ 40 ಲಕ್ಷ ದಷ್ಟು ಅಸಂಘಟಿತ ಕಾರ್ಮಿಕರನ್ನು ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿ ಮುಂದಿನ ದಿನದಲ್ಲಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

advertisement

Leave A Reply

Your email address will not be published.