Karnataka Times
Trending Stories, Viral News, Gossips & Everything in Kannada

Aadhaar Card: ನಿಮ್ಮ ಆಧಾರ್ ಕಾರ್ಡ್ ಅನ್ನು ಅನುಮತಿಯಿಲ್ಲದೆ ಯಾರಾದರೂ ಬಳಸುತ್ತಿದ್ದರೆ ಹೀಗೆ ಪರಿಶೀಲನೆ ಮಾಡಿ!

advertisement

ಇಂದು ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯ. ಸರಕಾರದ ಯಾವುದೇ ಸೌಲಭ್ಯ ಪಡೆಯುದಾದ್ರೂ ಆಧಾರ್ ಕಾರ್ಡ್ ಮುಖ್ಯವಾಗಿ ಬೇಕು.ಪ್ರಸ್ತುತ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್ ಪಡೆಯಲು, ರೇಷನ್ ‌ಕಾರ್ಡ್ (Ration Card), ಪ್ಯಾನ್ ಕಾರ್ಡ್ (PAN Card) ಎಲ್ಲದಕ್ಕೂ ಈ ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಆದರೆ ಈ ಆಧಾರ್ ನಿಂದಾಗಿ ಕಾರ್ಡ್ ದುರುಪಯೋಗ ಆಗುತ್ತಿರುವ ಸುದ್ದಿ ಹೆಚ್ಚಾಗುತ್ತಿದೆ. ಹಾಗಾಗಿ ಪ್ರಮುಖ ದಾಖಲೆಯಾಗಿರುವ ಆಧಾರ್ ಅನ್ನು ಬೇರೆಯವರು ಬಳಸುತ್ತಿದ್ದರೆ ಅಥವಾ ದುರುಪಯೋಗ ಮಾಡುತ್ತಿದ್ದರೆ ಅದನ್ನು ಸುಲಭ ವಾಗಿ ಪರಿಶೀಲನೆ ‌ಮಾಡಬಹುದಾಗಿದೆ.

ಆನ್‌ಲೈನ್ ಸ್ಕ್ಯಾಮ್‌ ಹೆಚ್ಚಳ:

 

 

ಇಂದು ಅನ್ ಲೈನ್ ಸ್ಕ್ಯಾಮ್ ಬಹಳಷ್ಟು ಹೆಚ್ಚಳವಾಗಿದೆ. ಆಧಾರ್ ಕಾರ್ಡ್ ಮೂಲಕ ಖಾಸಗಿ ಡೇಟಾ ಹ್ಯಾಕ್ ಮಾಡಿ ಕಾರ್ಡ್ ‌ಅನ್ನು ದುರುಪಯೋಗ ಮಾಡುತ್ತಿದ್ದಾರೆ. ಇತರ ದಾಖಲೆಗಳ ಡೇಟಾವನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದ್ದರೆ, ಬ್ಯಾಂಕ್ ಖಾತೆ (Bank Account), ಪ್ಯಾನ್ ಕಾರ್ಡ್ (PAN Card) ಇತ್ಯಾದಿ ಬಳಸಿ ಹಣವನ್ನು ಪಡೆದುಕೊಳ್ಳುವ ಖದೀಮರು ಹೆಚ್ಚಾಗಿದ್ದಾರೆ. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದ ಆರು ತಿಂಗಳಲ್ಲಿ ಎಲ್ಲಿ ಬಳಸಲಾಗಿದೆ ಇತ್ಯಾದಿ ವಿವರಗಳನ್ನು ಪರಿಶೀಲಿಸಲು ಸರ್ಕಾರವು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಆಧಾರ್ ಅನ್ನು ಯಾರಾದರೂ ದುರುಪಯೋಗ ಮಾಡಿದ್ದರಾ ಎಂಬುದನ್ನು ನೀವು ಪರಿಶೀಲನೆ ಕೂಡ ಮಾಡಬಹುದು.

advertisement

ಹೀಗೆ ತಿಳಿದುಕೊಳ್ಳಿ:

ಮೊದಲಿಗೆ ಆಧಾರ್ ನ ಅಧಿಕೃತ ‌ ವೆಬ್‌ಸೈಟ್ https://www.uidai.gov.in/ ಇಲ್ಲಿ ಆಧಾರ್ ದೃಢೀಕರಣ ಇತಿಹಾಹ ಎಂದು ಇರಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ತದನಂತರ ನಿಮ್ಮ 12-ಅಂಕಿಯ ಆಧಾರ್ ನಂಬರ್ ಅನ್ನು ಬಳಸಿ, ಅದರ ಕೆಳಗಿರುವ 4-ಅಂಕಿಯ ಕ್ಯಾಪ್ಚಾ ಕೋಡ್ ಅನ್ನು ನೀವು ಲಾಗ್ ಇನ್ ಮಾಡಿ. ನಿಮ್ಮ ವಿನಂತಿಯನ್ನು OTP ಯೊಂದಿಗೆ ಪರಿಶೀಲಿಸಿ.ನಿಮ್ಮ ಆಧಾರ್ ಗೆ ಲಿಂಕ್ ಮಾಡಿದ ಮೊಬೈಲ್ ಅನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಜನರೇಟ್ ಬಟನ್ ಕ್ಲಿಕ್ ಮಾಡಿ. ಅಷ್ಟರಲ್ಲಿ ನಿಮಗೆ OTP ಯೊಂದಿಗೆ ಪರಿಶೀಲಿಸಲು ವಿನಂತಿಯನ್ನು ಕಳುಹಿಸಲಾಗುತ್ತದೆ. ಅದರಲ್ಲಿ ನಿಮ್ಮ ಆಧಾರ್ ಎಲ್ಲಿ ಬಳಸಲಾಗಿದೆ ಎಂದು ಆಧಾರ್ ಬಳಕೆಯ ಇತಿಹಾಸವನ್ನು ಪರಿಶೀಲನೆ ಮಾಡಬಹುದಾಗಿದೆ.

ನಿಮ್ಮ ಆಧಾರ್ ಕಾರ್ಡ್ ಸುರಕ್ಷಿತವಾಗಿಟ್ಟು ಕೊಳ್ಳಿ:

ನಿಮ್ಮ ಆಧಾರ್ ವಿವರಗಳನ್ನು ಸುರಕ್ಷಿತ ರೀತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಆಧಾರ್ (Aadhaar Card) ಬಳಕೆ ತಿಳಿಯಲು‌ ಸಾಧ್ಯವಾಗದೇ ಇದ್ದರೆ‌ ಟೋಲ್-ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ಇಲ್ಲವೆ  [email protected] ಗೆ ಇಮೇಲ್ ಮಾಡುವ ಮೂಲಕ ನೀವು UIDAI ಇಲಾಖೆ ಮೂಲಕ ತಿಳಿದುಕೊಳ್ಳಬಹುದು. ಹಾಗಾಗಿ ಆಧಾರ್ ದುರುಪಯೋಗ ಆಗದಂತೆ‌ ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿರಿಸಲು, ನೀವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.

advertisement

Leave A Reply

Your email address will not be published.