Karnataka Times
Trending Stories, Viral News, Gossips & Everything in Kannada

Ration Card: ಈ ದಾಖಲೆ ಕೊಟ್ಟರೆ ಮಾತ್ರ ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು! ಹೊಸ ರೂಲ್ಸ್

advertisement

ಇನ್ನು ಪಡಿತರ ಚೀಟಿ (Ration Card) ಎಲ್ಲರಿಗೂ ಬೇಕಾದಂತಹ ಒಂದು ಬಹಳ ಮುಖ್ಯವಾದಂತಹ ದಾಖಲೆಯಾಗಿದ್ದು, ಅದರ ಮೂಲಕ ನಾವು ಹಲವಾರು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಸರ್ಕಾರದ ವತಿಯಿಂದ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರ ಆದಾಯದ ಮೇಲೆ ಅವರು ಎಪಿಎಲ್ ಅಥವಾ ಬಿಪಿಎಲ್ ಎಂಬ ಎರಡು ರೀತಿಯಾದಂತಹ ಪಡಿತರ ಚೀಟಿಯನ್ನು ವಿತರಣೆ ಮಾಡಿರುತ್ತಾರೆ. ಇದು ಎಲ್ಲರಲ್ಲಿಯೂ ಕೂಡ ಇರಬೇಕಾದ ದಾಖಲೆ ಆಗಿದೆ.

ಹೊಸ ಪಡಿತರ ಚೀಟಿ (Ration Card) ಪಡೆಯಲು ಅಗತ್ಯ ದಾಖಲೆಗಳು ಯಾವುವು? 

ಪಡಿತರ ಚೀಟಿಯು ನಮಗೆ ಸರ್ಕಾರದಿಂದ ನೇರವಾಗಿ ಆಹಾರ ಸಾಮಗ್ರಿಗಳನ್ನು ಒದಗಿಸುವಂತಹ ವಿಧಾನವಾಗಿದ್ದು ಇದರ ಮೂಲಕ ಹಲವು ಬಡ ಕುಟುಂಬದವರ ಜೀವನ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಇನ್ನು ಪಡಿತರ ಚೀಟಿಯಿಂದ ನಮಗೆ ಆರೋಗ್ಯದಲ್ಲಿಯೂ ಕೂಡ ರಿಯಾಯಿತಿ ಸಿಕ್ಕುತ್ತದೆ ಮತ್ತು ಹಲವು ಯೋಜನೆಗಳಿಗೆ ಪಡಿತರ ಚೀಟಿಯ ಮುಖ್ಯವಾದಂತಹ ಆಧಾರ ದಾಖಲೆಯಾಗಿದೆ. ಇನ್ನು ಇತ್ತೀಚಿಗೆ ಮದುವೆಯಾದ ಹೊಸ ದಂಪತಿಗಳು ಹೊಸ ಪಡಿತರ ಚೀಟಿ ಪಡೆಯಲು ಮತ್ತು ಪಡಿತರ ಚೀಟಿಯ ತಿದ್ದುಪಡಿ ಮಾಡಿಕೊಳ್ಳಬೇಕು ಎಂದಿರುವವರು ತಿದ್ದುಪಡಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

advertisement

Image Source: The Indian Express

ಇನ್ನು ಏಪ್ರಿಲ್ 1 ರಿಂದ ಈ ಅರ್ಜಿಯನ್ನು ದಾಖಲಿಸಬಹುದಾಗಿದ್ದು ahara.kar.gov.in ಎಂಬ ವೆಬ್ ಸೈಟ್ ನಲ್ಲಿ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಪಡಿತರ ಚೀಟಿಯನ್ನು ಪಡೆಯಲು ಹೊಸ ಬದಲಾವಣೆಯ ದಾಖಲೆಗಳನ್ನು ಸರ್ಕಾರ ಕೇಳಿದ್ದು, ಯಾವೆಲ್ಲ ದಾಖಲೆಗಳು ಬೇಕಾಗಿದೆ ಎಂದು ತಿಳಿದುಕೊಳ್ಳುವ ಅಗತ್ಯವಿದೆ.

ಇನ್ನು ಸರ್ಕಾರವು ನೀಡಿರುವ ಸೂಚನೆಯಂತೆ ಪಡಿತರ ಚೀಟಿಯನ್ನು ಹೊಂದಲು ಮೊದಲಿಗೆ ಕರ್ನಾಟಕ ರಾಜ್ಯದ ನಿವಾಸಿಯೇ ಆಗಿರಬೇಕು. ಇದರ ಜೊತೆಗೆ ಬೇರೆ ದಾಖಲೆಗಳು ಕೂಡ ಅವಶ್ಯಕವಾಗಿದೆ ಅವುಗಳೆಂದರೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಯಸ್ಸಿನ ಪ್ರಮಾಣ ಪತ್ರ, ಇತ್ತೀಚಿಗೆ ತೆಗೆಸಿಕೊಂಡಿರುವ ಪಾಸ್ಪೋರ್ಟ್ ಸೈಜ್ ಫೋಟೋ, ಸ್ವಯಂ ಘೋಷಿತ ಪ್ರಮಾಣ ಪತ್ರ ಮತ್ತು ಮೊಬೈಲ್ ನಂಬರ್ ಈ ಎಲ್ಲಾ ದಾಖಲೆಗಳು ಪಡಿತರ ಚೀಟಿಯನ್ನು ಪಡೆಯಲು ಕಡ್ಡಾಯವಾದಂತಹ ದಾಖಲೆಗಳಾಗಿದ್ದು, ಇದರ ಮೂಲಕ ಜನಸಾಮಾನ್ಯರು ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

advertisement

Leave A Reply

Your email address will not be published.