Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್! ಬೆಳ್ಳಂಬೆಳಗ್ಗೆ ಸರ್ಕಾರದ ಹೊಸ ಘೋಷಣೆ

advertisement

ಈ ಭಾರಿ ಬಹಳಷ್ಟು ಮಂದಿ ರೇಷನ್ ಕಾರ್ಡ್ (Ration Card) ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ‌. ಗ್ಯಾರಂಟಿ ಯೋಜನೆಗಳ ಸೌಲಭ್ಯ ವನ್ನು ಪಡೆದುಕೊಳ್ಳಲು ಸಹ ಆಗುತ್ತಿಲ್ಲ, ರೇಷನ್ ಕಾರ್ಡ್ ಇಲ್ಲದೆ ಸರಕಾರದ ಯಾವುದೇ ಸೌಲಭ್ಯ ಸಿಗ್ತಾ ಇಲ್ಲ ಎನ್ನುವ ಮಾತುಗಳು ಬಹಳಷ್ಟು ಜನರ ಬಾಯಲ್ಲಿ ಕೇಳಿಬಂದಿತ್ತು. ಇದೀಗ ಇಂತವರಿಗೆ ಪರಿಹಾರ ಒದಗಿಸಲು ಹೊಸ ರೇಷನ್ ಕಾರ್ಡ್ (Ration Card) ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡುವ ಕುರಿತಾಗಿ ಸರಕಾರವು ಗುಡ್ ನ್ಯುಸ್ ನೀಡಿದೆ. ಪಡಿತರ ಕಾರ್ಡ್ ಇಲ್ಲದವರು ನಿಗದಿತ ಸಮಯದ ಒಳಗೆ ಅರ್ಜಿ ಸಲ್ಲಿಕೆ ಮಾಡಿ ಕಾರ್ಡ್ ಪಡೆಯಬಹುದು.

ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿ

ಸುಮಾರು 2,95,986 ಅರ್ಜಿಗಳು ಹೊಸ ಪಡಿತರ ಚೀಟಿಗಾಗಿ ಹಿಂದೆಯೇ ಅರ್ಜಿ ಬಂದಿದ್ದು ‌ ಮಾರ್ಚ್ 31ರ ಒಳಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ ವಿತರಣೆ ಮಾಡುವಂತೆ ಆಹಾರ ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪ (KH Muniyappa) ರವರು ತಿಳಿಸಿದ್ದಾರೆ. ಇನ್ನೂ ಹೊಸದಾಗಿ ರೇಷನ್ ಕಾರ್ಡ್ ಗೆ ಏಪ್ರಿಲ್ 1 ರಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು‌ ಅಗತ್ಯ ದಾಖಲೆ ಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

Image Source: News Next Live

ಹೊಸ ರೇಷನ್ ಕಾರ್ಡ್ (Ration Card) ಗೆ ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆ ಬೇಕು

advertisement

  • ಆಧಾರ್ ಕಾರ್ಡ್
  • ಚಾಲನ ಪರವಾನಗಿ
  • ಪೋಟೋ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಮೊಬೈಲ್ ನಂ ಇತ್ಯಾದಿ

ಇವರು ಮಾತ್ರ ಹೊಸ ಕಾರ್ಡ್ ಗೆ ಅರ್ಜಿ ಹಾಕಬಹುದು

ಒಂದು ಮನೆಯಲ್ಲಿ ಎಲ್ಲ ಸದಸ್ಯರಿಗೂ ಒಂದೇ ಪಡಿತರ ಚೀಟಿ ಇರಬೇಕು.ಇನ್ನೂ ಈ ಕಾರ್ಡ್ ಅನ್ನು ಆಯಾ ಮನೆಯ ಆದಾಯದ ಮೇರೆಗೆ ವಿಂಗಡಣೆ ಮಾಡಿ ನೀಡಲಾಗುತ್ತದೆ.

Image Source: DNA India
  • ಈ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬೇಕಿದ್ರೆ ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು.
  • ಇನ್ನು ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
  • ಅಂತ್ಯೋದಯ, ಬಿಪಿಎಲ್, ಎಪಿಎಲ್ ಯಾವುದೇ ಕಾರ್ಡ್ ಆದರೂ ಯಾವುದೇ ಸುಳ್ಳು ಮಾಹಿತಿ ನೀಡಿ ಕಾರ್ಡ್ ಮಾಡಿಸಿಕೊಳ್ಳುವಂತಿಲ್ಲ.
  • ಇನ್ನು ದಿನಾಂಕ ಮುಗಿದ ನಂತರ ತಾತ್ಕಾಲಿಕ ಪಡಿತರ ಚೀಟಿ ಪಡೆದ ನಾಗರಿಕರು ಮತ್ತೆ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.