Karnataka Times
Trending Stories, Viral News, Gossips & Everything in Kannada

Royal Enfield Shotgun 650: ರಾಯಲ್ ಎನ್‌ಫೀಲ್ಡ್ ಹೊಸ ಶಾಟ್‌ಗನ್ 650 ಬೈಕ್ ನ ಬೆಲೆ ಬಹಿರಂಗ! ಇಷ್ಟು ಕಮ್ಮಿನಾ

advertisement

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ತನ್ನ ಲುಕ್ ಹಾಗೂ ಕಾರ್ಯ ವೈಖರಿಯಿಂದ ಹಲವರ ಮನಗೆದ್ದಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ (Royal Enfield Shotgun 650) ನ ಮೊದಲ ಲುಕ್ ಅನ್ನು2023 ರಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕಿನ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ.3.59 ಲಕ್ಷವಿರಲಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 (Royal Enfield Shotgun 650) ಬೈಕ್ ಇದು ಅದೇ ಸ್ಟೀಲ್ ಟ್ಯೂಬುಲರ್ ಸ್ಟೀಲ್ ಫ್ರೇಮ್ ಅನ್ನು ಆಧರಿಸಿದೆ, ಸೂಪರ್ ಮೀಟಿಯರ್ 650 ಬೈಕ್ ಕೂಡ ಇದನ್ನೇ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ನಾಲ್ಕು ಆಕರ್ಷಕ ಬಣ್ಣಗಳ ಆಯ್ಕೆ ಹೊಂದಿದ್ದು ಸ್ಟೆನ್ಸಿಲ್ ವೈಟ್, ಪ್ಲಾಸ್ಮಾ ಬ್ಲೂ, ಗ್ರೀನ್ ಡ್ರಿಲ್ ಮತ್ತು ಶೀಟ್‌ಮೆಟಲ್ ಗ್ರೇ. ಈ ಕಸ್ಟಮ್-ಪ್ರೇರಿತ ಮೋಟಾರ್‌ಸೈಕಲ್ ಅನ್ನು ರಾಯಲ್ ಎನ್‌ಫೀಲ್ಡ್‌ನ 650-ಟ್ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು RE ಸೂಪರ್ ಮೆಟಿಯರ್ 650 ಮತ್ತು RE ಕಾಂಟಿನೆಂಟಲ್ GT 650 (Royal Enfield Continental GT 650) ನಡುವೆ ಕಾಣಸಿಗುತ್ತದೆ.

Image Source: HT Auto

US ಮತ್ತು ಕೆನಡಾದಲ್ಲಿ ಶಾಟ್‌ಗನ್ 650 (Royal Enfield Shotgun 650)ಬೆಲೆ:

ಬಹು ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಹೆಚ್ಚಿನ OEM ಗಳಂತೆ, ರಾಯಲ್ ಎನ್‌ಫೀಲ್ಡ್ (Royal Enfield) ವಿವಿಧ ಮಾರುಕಟ್ಟೆಗಳಿಗೆ ಬೆಲೆ ಮತ್ತು ಲಭ್ಯತೆಯ ವಿಭಿನ್ನವಾಗಿರುತ್ತದೆ. ಜನವರಿ 2024 ರಲ್ಲಿ,  ಶಾಟ್‌ಗನ್ 650 ಯ ಮಾರುಕಟ್ಟೆಗಳಲ್ಲಿ ಸೂಪರ್ ಮೀಟಿಯರ್ 650 ಗಿಂತ ಸ್ವಲ್ಪ ಕಡಿಮೆ ಬೆಲೆಯನ್ನು ಹೊಂದಿದೆ ಎಂದು ನಾವು ಗಮನಿಸಿದ್ದೇವೆ. ಯುಎಸ್‌ನಲ್ಲಿ, ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 $6,899 ಕ್ಕೆ ಪ್ರಾರಂಭವಾಗುತ್ತದೆ. ಹಾಗೆ ಕೆನಡಾದಲ್ಲಿ $9,199 ಕ್ಕೆ ಲಭ್ಯವಿರುತ್ತದೆ. ಸೂಪರ್ ಮೀಟಿಯರ್ 650 US ನಲ್ಲಿ $6,999 ಮತ್ತು ಕೆನಡಾದಲ್ಲಿ $9,599 ಕ್ಕೆ ಪ್ರಾರಂಭವಾಗುತ್ತದೆ. ಎರಡೂ ಮಾರುಕಟ್ಟೆಗಳಲ್ಲಿ ಶಾಟ್‌ಗನ್ 650 ಬೆಲೆಯ ಜಾಸ್ತಿಯಿದೆ. ಭಾರತದಲ್ಲೂ ಸಹ ಮಾರ್ಚ್ ತಿಂಗಳಲ್ಲಿ ಈ ಬೈಕ್ ಬಿಡುಗಡೆಯಾಗಲಿದ್ದು 3.59 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಎನ್ನಲಾಗುತ್ತಿದೆ.

Image Source: BikeWale

advertisement

ಕಾಂಟಿನೆಂಟಲ್ GT 650 ಮತ್ತು INT 650

ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕಿನಲ್ಲಿ ಅದೇ 648cc, ಪ್ಯಾರಲಲ್ ಟ್ವಿನ್, 4-ಸ್ಟ್ರೋಕ್, ಎಸ್‌ಒಹೆಚ್‌ಸಿ, ಏರ್-ಆಯಿಲ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7250rpm ನಲ್ಲಿ 46.4bhp ಮತ್ತು 5,650rpm ನಲ್ಲಿ 52.3Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಬ್ರೇಂಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 320mm ಫ್ರಂಟ್ ಡಿಸ್ಕ್ ಮತ್ತು 300mm ಹಿಂಭಾಗದ ಡಿಸ್ಕ್ ಅನ್ನು ಹೊಂದಿದೆ.

ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿರುತ್ತದೆ. ಇನ್ನು ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಬೈಕ್‌ಗಳ ಮಾರಾಟವೂ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಕಂಪನಿಯ ಬ್ರಾಂಡ್‌ ವ್ಯಾಲ್ಯೂ ಅನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವುದನ್ನು ನಾವು ಕಾಣಬಹುದು.

Image Source: Udayavani

ಹಲವು ವರ್ಷಗಳ ಹಿಂದೆಯಿಂದಲೇ ರಾಯಲ್‌ ಎನ್‌ಫೀಲ್ಡ್‌ ಕಂಪನಿಯನ್ನು ಭಾರತೀಯ ಮೂಲದ ಕಂಪನಿ ತನ್ನ ತೆಕ್ಕೆಗೆ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಪ್ರಸಿದ್ದಿ ಎಲ್ಲಡೆ ಹರಡಿದ್ದು, ವಿದೇಶಿಗರು ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಬಗ್ಗೆ ಮಾತಾಡಿರುವ ಮಾತುಗಳು ಎಲ್ಲರನ್ನೂ ಸೆಳೆಯುತ್ತಿದೆ. ಹೆಚ್ಚುವರಿಯಾಗಿ, ಮೋಟಾರ್‌ಸೈಕಲ್ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಫ್ಲಾಟ್ ಹ್ಯಾಂಡಲ್‌ಬಾರ್, ಮಿಡ್-ಸೆಟ್ ಫುಟ್‌ಪೆಗ್‌ಗಳು ಮತ್ತು ಸಿಂಗಲ್-ಸೀಟ್ ಸೆಟಪ್‌ನೊಂದಿಗೆ ಸಜ್ಜುಗೊಂಡಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ 22 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಬೈಕ್ ಸೂಪರ್ ಮೀಟಿಯರ್‌ನಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಬೈಕ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಒಳಗೊಂಡಿದೆ. ಗ್ರಾಹಕರು ಸಿಂಗಲ್ ಸೀಟರ್ ಅಥವಾ ಪಿಲಿಯನ್ ಸೀಟನ್ನು ಆಯ್ಕೆ ಮಾಡಬಹುದು. ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಬೈಕ್ ಹೊಸ ಟ್ರೆಂಡ್ ಸೆಟ್ಟರ್ ಆಗೋದ್ರಲ್ಲಿ ಅನುಮಾನವಿಲ್ಲ.

advertisement

Leave A Reply

Your email address will not be published.