Karnataka Times
Trending Stories, Viral News, Gossips & Everything in Kannada

Weather Update: 9 ರಾಜ್ಯಗಳ 14 ಸಿಟಿಗಳಲ್ಲಿ ತಾಪಮಾನ 40 ಡಿಗ್ರಿ ರಿಚ್ ಆಗಲಿದೆ; ಈ ಅಪಾಯದಲ್ಲಿ ನಿಮ್ಮ ನಗರವು ಇದ್ಯ ತಿಳ್ಕೊಳ್ಳಿ!

advertisement

ಬೇಸಿಗೆಗಾಲ ಬಂತು ಅಂದ್ರೆ ಎಲ್ರಿಗೂ ಒಂದು ರೀತಿ ಟೆನ್ಶನ್. ಯಾವಾಗ ತಾಪಮಾನ ಏರಳಿತ ಆಗುತ್ತೆ ಗೊತ್ತಿಲ್ಲ, ಚಳಿಗಾಲ ಕೊನೆಗೊಂಡು ಬೇಸಿಗೆ ಕಾಲ ಆರಂಭವಾಗಿದೆ ಅಂದ್ರೆ ವಸಂತಕಾಲ ಆರಂಭವಾಗಿದೆ ಅಂತ ಅರ್ಥ. ಆದರೆ ಈ ಬಾರಿ ಬೇಸಿಗೆ ತಾಪಮಾನ ವಸಂತ ಕಾಲದ ಅನುಭವವನ್ನು ನೀಡುತ್ತಿಲ್ಲ. ದಿನದಿಂದ ದಿನಕ್ಕೆ ತಾಪಮಾನ (Weather) ಹೆಚ್ಚುತ್ತಲೆ ಇದೆ. ಅದರಲ್ಲೂ ದೇಶದ 9 ರಾಜ್ಯಗಳಲ್ಲಿ ತಾಪಮಾನ 40° ದಾಟುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದಿಂದ ಮಾಹಿತಿ ಹೊರಬಿದ್ದಿದೆ.

ಕಳೆದ ವಾರಂತ್ಯದಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ ಈ ಬಾರಿ ಬಿಸಿಲು ತಾಪಮಾನ 40 ಡಿಗ್ರಿ ತಲುಪಬಹುದು ಎಂದು ತಿಳಿಸಲಾಗಿದೆ. ಮಾರ್ಚ್ ಡೇಟಾವನ್ನು ವಿಶ್ಲೇಷಿಸಿರುವ ಸಂಶೋಧಕರು ಇತ್ತೀಚಿನ ದಶಕಗಳಲ್ಲಿ ಮಾರ್ಚ್ ತಿಂಗಳಿನಷ್ಟು ತಾಪಮಾನ ಬೇರೆ ಯಾವುದೇ ತಿಂಗಳಿನಲ್ಲಿಯೂ ಕಂಡುಬಂದಿಲ್ಲ ಎಂದು ವರದಿ ಸಲ್ಲಿಸಿದ್ದಾರೆ. ಜನವರಿ ಮತ್ತು ಫೆಬ್ರವರಿ ಚಳಿಗಾಲದ ನಂತರ ಮಾರ್ಚ್ ತಿಂಗಳಲ್ಲಿ ತಾಪಮಾನ ಇದ್ದಕ್ಕಿದ್ದಂತೆ ಜಾಸ್ತಿ ಆಗಿದೆ.

40 ಡಿಗ್ರಿ ತಾಪಮಾನ 9 ರಾಜ್ಯಗಳಿಗೆ ಹೆಚ್ಚಳ:

 

Image Source: WION

 

ಹವಾಮಾನ ತಜ್ಞರ ಪ್ರಕಾರ ಫೆಬ್ರುವರಿ ತಿಂಗಳಿನಲ್ಲಿ ದೇಶದಲ್ಲಿ ಕೇವಲ ಮೂರು ರಾಜ್ಯಗಳನ್ನು ಮಾತ್ರ ತಾಪಮಾನ ಅತಿ ಹೆಚ್ಚು ದಾಖಲಾಗಬಹುದು ಎಂದು ತಿಳಿಸಿದ್ದರು. ಕಾರಣ 1970ರ ದಶಕದಲ್ಲಿ ಮಹಾರಾಷ್ಟ್ರ ಬಿಹಾರ ಹಾಗೂ ಛತ್ತೀಸ್ಗಢ ಈ ಮೂರು ರಾಜ್ಯಗಳಲ್ಲಿ ಮಾತ್ರ ಹೋಳಿ ಸಮಯದಲ್ಲಿ ತಾಪಮಾನ 40 ಡಿಗ್ರಿ ದಾಖಲಾಗಿತ್ತು. ಆದರೆ ಈಗ ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ ಪ್ರದೇಶ್, ಮಧ್ಯಪ್ರದೇಶ, ಒಡಿಸ್ಸಾ ರಾಜ್ಯಗಳಲ್ಲಿಯೂ ಕೂಡ 40 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗುವ ಸಂಭವ ಇದೆ ಎಂದು ಹವಾಮಾನ ಕೇಂದ್ರ ತಜ್ಞ ಡಾ. ಎಂಡ್ರ್ಯೂ ತಿಳಿಸಿದ್ದಾರೆ.

advertisement

ಐದು ದಶಕಗಳಲ್ಲಿ ದಾಖಲೆಯ ತಾಪಮಾನ ಏರಿಕೆ:

 

Image Source: India Narrative

 

ಜನವರಿ 1, 1970 ರಿಂದ ಡಿಸೆಂಬರ್ 31, 2023ರವರೆಗಿನ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಕಳೆದ ಐದು ದಶಕಗಳಲ್ಲಿ ಇಷ್ಟು ಹೆಚ್ಚಿನ ತಾಪಮಾನ ಹೋಳಿ ಸಮಯದಲ್ಲಿ ದಾಖಲಾಗಿದ್ದು ಇದೇ ಮೊದಲು ಎಂದು ಊಹಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಗಮನಾರ್ಹವಾಗಿ ತಾಪಮಾನ ಹೆಚ್ಚಳವಾಗಿದೆ. ಬಿಸಿಲಿನ ಬೇಗೆಯಿಂದ ಸುಡುತ್ತಿರುವ ಕೆಲವು ಸೂಕ್ಷ್ಮ ನಗರಗಳನ್ನು ಗುರುತಿಸಲಾಗಿದ್ದು ಆ ನಗರಗಳಲ್ಲಿ 41 ಡಿಗ್ರಿ ತಾಪಮಾನ ಕಂಡು ಬಂದಿದೆ.

51 ನಗರಗಳು ಮಾರ್ಚ್ ಅಂತ್ಯದ ವೇಳೆಗೆ 40 ಡಿಗ್ರಿ ತಾಪಮಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಇವುಗಳ ಜೊತೆಗೆ ಇನ್ನೂ 10 ನಗರಗಳಲ್ಲಿ ತಾಪಮಾನ ಹೆಚ್ಚಾಗುವ ಬಗ್ಗೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ಅಪಾಯದಲ್ಲಿ ಇರುವ ನಗರಗಳು ಇಂತಿವೆ.

  • ಛತ್ತೀಸ್ಗಡದ ಬಿಲ್ವಾಸ್ ಪುರ, ಬಿಲಾಯಿ, ರಾಯಿಪುರ
  • ಮಹಾರಾಷ್ಟ್ರದ ನಾಗಪುರ
  • ರಾಜಸ್ಥಾನದ ಕೋಟ, ಜೋಧಪುರ
  • ಮಧ್ಯಪ್ರದೇಶದ ಭೋಪಾಲ್ ಇಂದೋರ್.
  • ಉತ್ತರ ಪ್ರದೇಶದ ವಾರಣಾಸಿ, ಗ್ವಾಲಿಯರ್, ಪ್ರಯಾಗ್ರಾಜ್
  • ಗುಜರಾತ್ ನ ಬರೋಡ

advertisement

Leave A Reply

Your email address will not be published.