Karnataka Times
Trending Stories, Viral News, Gossips & Everything in Kannada

Railway Ticket: ನಿಮ್ಮ ಬಳಿ ರೈಲ್ವೆ ಟಿಕೆಟ್ ಇದ್ರೂ, ನಿಮಗೆ ದಂಡ ಬೀಳಬಹುದು! ಇಂದಿನಿಂದಲೇ ಹೊಸ ರೂಲ್ಸ್

advertisement

ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ನಮ್ಮ ದೇಶ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶ ಎನಿಸಿಕೊಂಡಿದೆ. ಪ್ರತಿದಿನ ಲಕ್ಷಾಂತರ ಜನ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಹೀಗೆ ಪ್ರಯಾಣ ಮಾಡುವಾಗ ಟಿಕೆಟ್ (Railway Ticket) ತೆಗೆದುಕೊಳ್ಳುವುದು ಕಡ್ಡಾಯ ಎನ್ನುವುದು ನಿಮಗೆಲ್ಲ ಗೊತ್ತು. ಆದರೆ ನಿಮ್ಮ ಬಳಿ ಟಿಕೆಟ್ ಇದ್ದಾಗಲೂ ಕೂಡ TTE ಗೆ ದಂಡ ತರಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಎಂಬುದನ್ನು ತಿಳಿದುಕೊಳ್ಳಿ.

ಪ್ಲಾಟ್ಫಾರ್ಮ್ ನಿಯಮ ಬದಲಾವಣೆ!

ನೀವು ರೈಲು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ದಂಡ ಪಾವತಿಸಲೇಬೇಕು. ಆದರೆ ನಿಮಗೆ ಗೊತ್ತಾ ರೈಲು ಟಿಕೆಟ್ (Railway Ticket) ಇದ್ದು ಕೂಡ ನೀವು ಪ್ಲಾಟ್ಫಾರ್ಮ್ ನಲ್ಲಿ ರೈಲಿಗಾಗಿ ಹೆಚ್ಚು ಸಮಯ ಕಾಯುತ್ತಿದ್ದರೆ ಹಾಗೂ ನಿಮ್ಮ ಮೇಲೆ ದಂಡ ವಿಧಿಸಬಹುದು ಎನ್ನುವುದಕ್ಕೂ ಕೂಡ ನಿಯಮ ಇದೆ. ಅದನ್ನ ನೀವು ತಿಳಿದುಕೊಂಡು ಆ ಸಮಯದಲ್ಲಿ ಮಾತ್ರ ಕಾಯಬಹುದು. ಇಲ್ಲವಾದರೆ ಟಿಕೆಟ್ ಇದ್ದಾಗಲೂ ನಿಮ್ಮ ಬಳಿ ಟಿ ಟಿ ಇ (TTE) ದಂಡ ವಸೂಲಿ ಮಾಡಬಹುದು.

Image Source: India Tv News

ಎಷ್ಟು ಸಮಯ ಮಾತ್ರ ಕಾಯಲು ಅವಕಾಶ!

advertisement

ನೀವು ರೈಲು ಪ್ರಯಾಣ ಮಾಡುವುದಾದರೆ ರೈಲು ಬರುವುದಕ್ಕಿಂತ ಎರಡು ಗಂಟೆ ಮೊದಲು ಪ್ಲಾಟ್ಫಾರ್ಮ್ ತಲುಪಬಹುದು. ರಾತ್ರಿ ವೇಳೆ ಆದರೆ 6:00 ಮೊದಲು ಪ್ಲ್ಯಾಟ್ ಫಾರ್ಮ್ (Platform) ತಲುಪಬಹುದು ಹಗಲಿನಲ್ಲಿ ರೈಲು ಬರುವುದಕ್ಕೂ ಎರಡು ಗಂಟೆ ಮುಂಚಿತವಾಗಿ ಮಾತ್ರ ಪ್ಲಾಟ್ಫಾರ್ಮ್ ಗೆ ಹೋಗಲು ಅವಕಾಶ ಇದೆ. ಒಂದು ವೇಳೆ ಈ ಅವಧಿಗಿಂತ ಹೆಚ್ಚಿನ ಸಮಯ ನೀವು ಪ್ಲ್ಯಾಟ್ ಫಾರ್ಮ್ ನಲ್ಲಿ ಇದ್ರೆ ಆಗ ನಿಮಗೆ ದಂಡ ವಿಧಿಸಲಾಗುತ್ತದೆ.

ಪ್ಲ್ಯಾಟ್ ಫಾರ್ಮ್ ಟಿಕೆಟ್ ಖರೀದಿಸಬೇಕು!

ಒಂದು ವೇಳೆ ನೀವು ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸಮಯ ಕಳೆಯುವ ಸಂದರ್ಭ ಇದ್ದರೆ ಆಗ ನೀವು ಪ್ಲಾಟ್ಫಾರ್ಮ್ ಟಿಕೇಟ್ ಖರೀದಿಸಬೇಕಾಗುತ್ತದೆ. ಈ ಟಿಕೆಟ್ ಇದ್ರೆ ನೀವು ಇಡೀ ದಿನ ಪ್ಲ್ಯಾಟ್ ಫಾರ್ಮ್ ನಲ್ಲಿ ಸಮಯ ಕಳೆಯಬಹುದು. ಒಂದು ವೇಳೆ ಪ್ಲ್ಯಾಟ್ ಫಾರ್ಮ್ ಟಿಕೆಟ್ ನಿಮ್ಮ ಬಳಿ ಇಲ್ಲದೆ ಕೇವಲ ರೈಲ್ವೆ ಟಿಕೆಟ್ ಮಾತ್ರ ಇದ್ದರೂ ಕೂಡ ಹೆಚ್ಚಿನ ಅವಧಿಯ ಕಾಯುವಿಕೆಗೆ ದಂಡ ವಿಧಿಸಲಾಗುತ್ತದೆ.

Image Source: Mid-day

ಇಷ್ಟಕ್ಕೂ ಈ ನಿಯಮ ಮಾಡಿದ್ಯಾಕೆ ಎನ್ನುವ ಕುತೂಹಲ ನಿಮ್ಮಲ್ಲಿ ಇರಬಹುದು. ಸಾಕಷ್ಟು ಜನ ಪ್ಲಾಟ್ಫಾರ್ಮ್ ನಲ್ಲಿ ತಮ್ಮ ಸಂಬಂಧಿಕರನ್ನ ಅಥವಾ ಸ್ನೇಹಿತರನ್ನ ರೈಲು ಹತ್ತಿಸುವ ನೆಪದಲ್ಲಿ ಬಂದು ಗುಂಪು ಕಟ್ಟಿಕೊಂಡು ಪ್ಲಾಟ್ಫಾರ್ಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಈ ರೀತಿ ತಪ್ಪುಗಳು ಆಗಬಾರದು ಎನ್ನುವ ಕಾರಣಕ್ಕೆ ಈ ಪ್ಲ್ಯಾಟ್ ಫಾರ್ಮ್ ನಿಯಮವನ್ನು ಮಾಡಲಾಗಿದೆ.

advertisement

Leave A Reply

Your email address will not be published.