Karnataka Times
Trending Stories, Viral News, Gossips & Everything in Kannada

Railway Ticket: ತತ್ಕಾಲ್, WL, RAC, PQWL ಏನಿದರ ಅಸಲಿ ಅರ್ಥ! ರೇಲ್ವೆ ಟಿಕೆಟ್ ನ ಸೀಕ್ರೆಟ್ಸ್ ತಿಳಿದುಕೊಳ್ಳಿ

advertisement

ಇತ್ತೀಚಿನ ವರ್ಷದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದು. ಹಿಂದೆ ಸ್ಟೇಷನ್ ಗೆ ಹೋಗಿ ರೈಲ್ವೇ ಟಿಕೇಟ್ ಕಾದಿರಿಸಬೇಕಿತ್ತು, ಆದರೆ ಈಗ ಕಾಲ ಬದಲಾಗಿದೆ. ಆನ್ಲೈನ್ ಮೂಲಕ ನೀವು ಟಿಕೆಟ್ ಕಾದಿರಿಸಬಹುದಾಗಿದೆ. ಆನ್ಲೈನ್ ಮೂಲಕ ಟಿಕೆಟ್ ಪಡೆಯಲು ಬಹುತೇಕರಿಗೆ ಅಗತ್ಯವಾಗಿ ಕಂಡರೂ ಅದರ ವಿಧಾನ ಅರಿವಾಗದೆ ಸುಮ್ಮನಾಗುತ್ತಾರೆ. ಆನ್ಲೈನ್ ಮೂಲಕ ರೈಲ್ವೇ ಟಿಕೆಟ್ (Railway Ticket) ಬುಕ್ ಮಾಡಲು ಸರಳ ಕ್ರಮವನ್ನು ನೀವಿಲ್ಲಿ ಗಮನಿಸಬಹುದು.

ಪ್ರತ್ಯೇಕ ಆ್ಯಪ್ ವ್ಯವಸ್ಥೆ ಇದೆ

ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಲು ಭಾರತದಲ್ಲಿ ರೈಲ್ವೇ ಇಲಾಖೆಯು ಪ್ರತ್ಯೇಕ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಅದರ ಹೆಸರು IRCTC ಎಂದಿದ್ದು ಅಧಿಕೃತ ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಲಾಗಿನ್ ಆಗಬಹುದು. ಲಾಗಿನ್ ಆದ ಬಳಿಕ ನಿಮ್ಮ ಡೇಟಾ ಫಿಲ್ ಮಾಡಿ ಪಾಸ್ ವರ್ಡ್ ಸೆಟ್ ಮಾಡಿ ಸಬ್ ಮಿಟ್ ಮಾಡಬೇಕು, ಈ ಮೂಲಕ ಟ್ರೈನ್ ಟಿಕೆಟ್ ಅನ್ನು ಬುಕ್ ಮಾಡಬಹುದು. ರೈಲು ಟಿಕೆಟ್ ಬುಕ್ಕಿಂಗ್ ಗಾಗಿ IRCTC, Make My Trip, Phone pay, Google pay ಎಂಬ ಬೇರೆ ವೆಬ್ಸೈಟ್ ನಲ್ಲಿ ಕೂಡ ರೈಲ್ವೆ ಟಿಕೆಟ್ ಬುಕ್ ಮಾಡಬಹುದು.

Image Source: Business League

Railway Ticket ಹೇಗೆ ಬುಕ್ ಮಾಡುವುದು

advertisement

ಟ್ರೈನ್ ಟಿಕೆಟ್ ಅನ್ನು ಬುಕ್ ಮಾಡಲು ಮೊದಲು ಯಾವ ಟ್ರೈನ್ ಎಂದು ಸೆಲೆಕ್ಟ್ ಮಾಡಬೇಕು ಅದಕ್ಕಾಗಿ ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂಬುದನ್ನು IRCTC ವೆಬ್ಸೈಟ್ ನಲ್ಲಿ ತಿಳಿಸಿದರೆ ಲಭ್ಯ ಇರುವ ಟ್ರೈನ್ ವಿವರಣೆ ಬರಲಿದೆ. ಎಸಿ, ಸ್ಲೀಪರ್, ಟೈಂ ಎಲ್ಲವೂ ಬರಲಿದೆ. ಬಳಿಕ ನಿಮ್ಮ ಟೈಂ ಹೊಂದಿಕೊಂಡ ಅವಧಿ ಆಯ್ಕೆಯಾದ ಬಳಿಕ ಟಿಕೆಟ್ ದರ ಆನ್ಲೈನ್ ಮೂಲಕ ಪಾವತಿ ಮಾಡಿದರೆ ಟ್ರೈನ್ ಟಿಕೆಟ್ ಬುಕ್ ಆಗಲಿದೆ.

Railway Ticket ಬಗ್ಗೆ ಗಮನಿಸಿ

  • ನೀವು ರೈಲ್ವೆ ಟಿಕೆಟ್ ಬುಕ್ ಮಾಡುವಾಗ WLಎಂದು ಬಂದರೆ Waiting list Number ಎಂದು ಬರಲಿದೆ. WL ಇದ್ದರೆ ಟಿಕೆಟ್ ಕ್ಯಾನ್ಸಲ್ ಆಗುವ ಸಾಧ್ಯತೆ ಅಧಿಕ ಇರಲಿದೆ.
  • PQWL- Pooled Quota waiting list ಅಂದರೆ ಇದು ಆಯಾ ಕಂಪಾರ್ಟ್ ಮೆಂಟ್ ನಲ್ಲಿ ಇರುವ ವೈಟಿಂಗ್‌ ಲಿಸ್ಟ್ ಆಗಿರಲಿದೆ.
  • RAC- Reservation Against cancelation ಎಂದರೆ ನೀವು ಟ್ರಾವೆಲ್ ಮಾಡಬಹುದು. ಸೀಟ್ ಕನ್ಪರ್ಮ್ ಇರದು ಯಾರಾದರೂ ಹೋದ ಬಳಿಕ ಆ ಸೀಟ್ ನಲ್ಲಿ ಕೂರ ಬಹುದು.
  • ತತ್ಕಾಲ್ ನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಆಶ್ಚನ್ ಇರಲಿದ್ದು ತುರ್ತು ಅಗತ್ಯ ಸಂದರ್ಭದಲ್ಲಿ ಈ ವಿಧಾನ ಸಹಕಾರಿ ಆಗಿದೆ. ಒಂದು ಬಾರಿಗೆ 4 ಜನರಿಗೆ ಮಾತ್ರ ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಇಲ್ಲಿ ಟಿಕೆಟ್ ದರ ಸಾಮಾನ್ಯವಾಗಿ ಅಧಿಕ ಇರಲಿದೆ.

ಕ್ಯಾನ್ಸಲ್ ಮಾಡಿದ್ರೆ ಹಣ ಸಿಗುತ್ತಾ?

ಟ್ರೈನ್ ಟಿಕೆಟ್ ಬುಕ್ ಮಾಡಿದ ಬಳಿಕ ಅದನ್ನು ಕ್ಯಾನ್ಸಲ್ ಮಾಡಿದರೆ ಹಣ ರಿಫಂಡ್ ಆಗುತ್ತಾ ಎನ್ನೊ ಪ್ರಶ್ನೆ ನಿಮಗೂ ಇರಬಹುದು. ಟ್ರೈನ್ ಹೊರಡುವ 48 ಗಂಟೆ ಮುನ್ನವೇ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಸ್ವಲ್ಪ ಅಮೌಂಟ್ ಕಟ್ ಮಾಡಿ ರಿಫಂಡ್ ಮಾಡಲಾಗುತ್ತದೆ. ಎಸಿ , ಫಸ್ಟ್ ಕ್ಲಾಸ್ ಗೆ 240 ರೂಪಾಯಿ, AC 2nd class ಗೆ 200, AC 3rd ಗೆ 180ರೂಪಾಯಿ ಕಡಿತ ಮಾಡಲಾಗುವುದು. ಟ್ರೈನ್ ಹೊರಡಲು 12 ಗಂಟೆ ಮತ್ತು ಅದಕ್ಕಿಂತ ಕಡಿಮೆ ಇದ್ದರೆ 50% ನಷ್ಟು ಹಣ ಕಟ್ ಮಾಡಲಾಗುತ್ತದೆ.

advertisement

Leave A Reply

Your email address will not be published.