Karnataka Times
Trending Stories, Viral News, Gossips & Everything in Kannada

Ration Card: ಸಮಯೋಚಿತ ನಿರ್ಧಾರ ಮಾಡಿದ ಸರ್ಕಾರ! ಇಂತಹವರಿಗೆ ಮಾತ್ರ ರೇಷನ್ ಕಾರ್ಡ್ ಸಿಗುತ್ತೆ!

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗಬೇಕಾದ್ರೆ ರೇಷನ್ ಕಾರ್ಡ್ (Ration Card) ಎಂಬುದು ಬಹಳ ಅಗತ್ಯ. ಸರಕಾರದ ಯಾವುದೇ ಸೌಲಭ್ಯ ಪಡೆಯುದಾದ್ರೂ ಈ ರೇಷನ್ ಕಾರ್ಡ್ ಬೇಕು. ಅದರಲ್ಲೂ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಹೊಸ ಪಡಿತರ ಕಾರ್ಡ್ ಪಡೆಯಲು ಹೆಚ್ಚಿನ ಜನರು ಕಾತುರರಾಗಿದ್ದಾರೆ. ಇದೀಗ ಹೊಸ ಪಡಿತರ ಪಡೆಯುದರ ಬಗ್ಗೆ ಸರಕಾರದಿಂದ ಹೊಸ ಆಪ್ಡೆಟ್ ಮಾಹಿತಿ ಯೊಂದು ಬಂದಿದ್ದು ಈ ಬಗ್ಗೆ ನೀವು ತಿಳಿಯಲೇ ಬೇಕು.

ಹಳೆ ಅರ್ಜಿ ಪರಿಶೀಲನೆ:

ಹಿಂದೆ ರೇಷನ್ ಕಾರ್ಡ್ (Ration Card) ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಅರ್ಜಿಗಳನ್ನು ಪರಿಶೀಲನೆ ಮಾಡಲು ಬಾಕಿ ಇದ್ದು, ಇದೀಗ ಮಾರ್ಚ್ 31 ರೊಳಗಳೇ ಎಲ್ಲ ಅರ್ಜಿಯನ್ನು ಪರಿಶೀಲಿಸಿ ರೇಷನ್ ಕಾರ್ಡ್ ವಿತರಣೆ ಮಾಡುವಂತೆ ಸೂಚನೆ ನೀಡಲಾಗಿದೆ.‌ ಅದೇ ರೀತಿ ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿ ಹಾಕಬಹುದಾಗಿದೆ.

Image Source: DNA India

advertisement

ಇವರು ಮಾತ್ರ ಅರ್ಹರು:

  • ಹೊಸದಾಗಿ ಈ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ಆ ವ್ಯಕ್ತಿ‌, ಕರ್ನಾಟಕದಲ್ಲಿ ವಾಸ ಮಾಡಿರಬೇಕು. ಇಲ್ಲಿನ‌ ಖಾಯಂ ನಿವಾಸಿ ಆಗಿರಬೇಕು.
  • ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.
  • ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ.
  • ಇನ್ನೂ ನೀವು ಬಿಪಿಎಲ್ ಕಾರ್ಡ್ (BPL Card) ಪಡೆದುಕೊಳ್ಳುವುದಿದ್ದರೆ ಬಡತನ ರೇಖೆಗಿಂತ ಕೆಳಗಿನವರು ಆಗಿರಬೇಕು.ಸುಳ್ಳು ದಾಖಲೆ ನೀಡಿ ಈ ಕಾರ್ಡ್ ಮಾಡಿಸಿಕೊಳ್ಳುವಂತಿಲ್ಲ.
  • ಈಗಿರುವ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುವವರು ಹಳೆಯ ಕಾರ್ಡ್ ನಿಂದ ಹೆಸರನ್ನು ಡಿಲೀಟ್ ಮಾಡಿ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು.
  • ಹೊಸ ರೇಷನ್ ಕಾರ್ಡಿಗೆ ಬಯೋಮೆಟ್ರಿಕ್ ಅವಶ್ಯಕತೆ ಇರುತ್ತದೆ. ಹಾಗಾಗಿ ಬಯೋಮೆಟ್ರಿಕ್ ನೀಡಲು ಮನೆಯ ಎಲ್ಲ ಸದಸ್ಯರು ಎಲ್ಲರೂ ಸರ್ಕಾರಿ ಕೇಂದ್ರಗಳಿಗೆ ತೆರಳಬೇಕಾಗುತ್ತದೆ.

ಈ ದಾಖಲೆ ಬೇಕು:

  • ಆಧಾರ್ ಕಾರ್ಡ್
  • ವಿಳಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಸ್ವಯಂಘೋಷಿತ ಪ್ರಮಾಣ ಪತ್ರ
  • ಡ್ರೈವಿಂಗ್ ಲೈಸನ್ಸ್
  • ಮೊಬೈಲ್ ಸಂಖ್ಯೆ ಇತ್ಯಾದಿ..

Ration Card ಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ಗ್ರಾಮ ಒನ್ (Gram One), ಬೆಂಗಳೂರು ಒನ್ (Bangalore One) ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.