Karnataka Times
Trending Stories, Viral News, Gossips & Everything in Kannada

RTE Act: RTE ಯೋಜನೆಯಡಿ ಮಕ್ಕಳನ್ನು ಉಚಿತವಾಗಿ ಖಾಸಗಿ ಶಾಲೆಗೆ ಸೇರಿಸಿ! ಇಲ್ಲಿದೆ ಡೈರೆಕ್ಟ್ ಲಿಂಕ್

advertisement

ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿದೆ. ಈ ನೆಲೆಯಲ್ಲಿ ಸಮಾಜದಲ್ಲಿ ಎಲ್ಲ ವರ್ಗದವರಿಗೂ ಶಿಕ್ಷಣ ಸಿಗಬೇಕು ಎಲ್ಲರೂ ಶಿಕ್ಷಣವಂತರಾಗಬೇಕೆಂಬ ಹಿನ್ನೆಲೆ ಅನೇಕ ಯೋಜನೆ ಜಾರಿಗೆ ಬಂದಿರುವುದು ಕಾಣಬಹುದು. ರಾಜ್ಯದ ಜನತೆಯ ಮಕ್ಕಳಿಗೆ ಶಿಕ್ಷಣದ ಹಕ್ಕು ಕಾರ್ಯಕ್ರಮವನ್ನು ಈಗಾಗಲೇ ಪ್ರಚಾರ ಪಡಿಸಿದ್ದು ಖಾಸಗಿ ಶಾಲೆಯಲ್ಲಿ ಬಡವರ್ಗದ ಮಕ್ಕಳಿಗೆ ಶಿಕ್ಷಣ ಅವಕಾಶ ನೀಡುವ ನೆಲೆಯಲ್ಲಿ ಈ ಯೋಜನೆ ಬಹಳ ಅನುಕೂಲ ಆಗಲಿದೆ.

ಕರ್ನಾಟಕದಲ್ಲಿ RTE ಕಾಯ್ದೆ (RTE Act) ಯ ಅಡಿಯಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ನಿಗಧಿತ ಫ್ರೀ ಸೀಟ್ ನೀಡಲಾಗುತ್ತದೆ. ಇದರ ಪ್ರಕಾರ ಆರ್ಥಿಕವಾಗಿ ಹಿಂದುಳಿದ ಮತ್ತು ವಯಸ್ಸಿನ ಮಿತಿಯ ಆಧಾರದ ಮೇಲೆ ಖಾಸಗಿ, ಅನುಧಾನಿತ ಶಾಲೆಯಲ್ಲಿ ಫ್ರೀ ಸೀಟ್ ಪಡೆಯಬಹುದು. ಹಾಗಾದರೆ ಯಾರಿಗೆಲ್ಲ LKG, UKG ಶಿಕ್ಷಣ ಸಿಗಲಿದೆ ಯಾರೆಲ್ಲ ಈ ಸೇವೆ ಪಡೆಯಬಹುದು ಎಂದು ಪೂರ್ತಿ ಮಾಹಿತಿ ಇಲ್ಲಿದೆ.

ವಯಸ್ಸಿನ ಮಿತಿ ಅಗತ್ಯ

LKG ಶಿಕ್ಷಣಕ್ಕೆ ಮಗುವನ್ನು ಸೇರಿಸಲು ಮಗುವಿಗೆ ಕನಿಷ್ಠ 4ವರ್ಷ ವಯಸ್ಸಾಗಿರಬೇಕು. ಒಂದನೇ ತರಗತಿಯಿಂದ ಶಿಕ್ಷಣ ಆರಂಭ ಮಾಡುವುದಿದ್ದರೆ 5- 6 ವರ್ಷ ಕನಿಷ್ಠ ವಯಸ್ಸಿನ ಮಿತಿ ಇದೆ. ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗುವ ಕಾರಣ ಮಗುವಿನ ಕೆಲವು ಅಗತ್ಯ ದಾಖಲೆಗಳು ಅಗತ್ಯವಾಗಿದೆ. ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ (Birth Certificate), ರೇಷನ್ ಕಾರ್ಡ್ (Ration Card) ಪ್ರತಿ ಹಾಗೂ ಮಗುವಿನ ಭಾವಚಿತ್ರ ಅಗತ್ಯವಾಗಿದೆ. ಮಗುವಿನ ಜೊತೆಗೆ ತಂದೆ ತಾಯಿಯ ಆಧಾರ್ ಕಾರ್ಡ್ (Aadhaar Card) ಹಾಗೂ ಜಾತಿ ಆದಾಯ ದೃಢೀಕರಣ ಪತ್ರ ಅಗತ್ಯವಾಗಿದೆ.

advertisement

Image Source: LiveLaw

ಯಾವಾಗ ಕೊನೆ ದಿನಾಂಕ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 22 ಕೊನೆ ದಿನಾಂಕವಾಗಿದ್ದು ಎಪ್ರಿಲ್ 30ರಂದು ಸೀಟ್ ಹಂಚಿಕೆ ಮಾಡಲಾಗುತ್ತದೆ. ಮೊದಲ ಸುತ್ತಿನಲ್ಲಿ ಆಯ್ಕೆ ಆದವರು 2024ರ ಮೇ 31ರ ಒಳಗಾಗಿ ಪ್ರವೇಶ ಪಡೆಯಬೇಕು. ಎರಡನೇ ಸುತ್ತಿನಲ್ಲಿ ಸೀಟ್ ಹಂಚಿಕೆ ಆಗಿದ್ದರೆ ಮೇ 22ರ ಒಳಗೆ ಪ್ರವೇಶಾತಿಯನ್ನು ಆ ಮಗು ಪಡೆದಿರಬೇಕು. ದಾಖಲಾತಿ ಸಂಖ್ಯೆಯ ಆಧಾರದ ಮೇಲೆ 25% ನಷ್ಟು ಬಡವರ್ಗದವರಿಗಾಗಿ ಸೀಟು ಹಂಚಿಕೆ ಮಾಡಲಾಗುವುದು.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಒಮ್ಮೆ ಮಗು ಆಯ್ಕೆ ಆದರೆ 14 ವರ್ಷದ ವರೆಗೆ ಉಚಿತ ಶಿಕ್ಷಣ ಪಡೆಯಲಿದೆ. ಮಕ್ಕಳ ಅಪ್ಲಿಕೇಶನ್ ಅಧಿಕವಾಗಿ ಕಂಡು ಬಂದರೆ ದಾಖಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸುವವರು ಪೋಷಕರು ಅಥವಾ ಪಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜಿ ಜನಸ್ನೇಹಿ ಮೂಲಕ ಅರ್ಜಿ ಫಿಲಪ್ ಮಾಡಿ ಕಳುಹಿಸಬಹುದು. ಆನ್ಲೈನ್ ಮೂಲಕ ಅರ್ಜಿಗೆ http://www.schooleducation.kar.nic.in/ ಈ ವೆಬ್‌ಸೈಟ್‌ ಭೇಟಿ ನೀಡಿ ಅರ್ಜಿ ಹಾಕಬಹುದು.

advertisement

Leave A Reply

Your email address will not be published.