Karnataka Times
Trending Stories, Viral News, Gossips & Everything in Kannada

Gram One: ಗ್ರಾಮ ಒನ್ ಕೇಂದ್ರ ಸ್ಥಾಪನೆ ಮಾಡಲು ಈ ಜಿಲ್ಲೆಯವರಿಗೆ ಅತ್ಯುತ್ತಮ ಅವಕಾಶ, ಹೀಗೆ ಅರ್ಜಿ ಸಲ್ಲಿಸಿ!

advertisement

ಒಂದು ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಮಜಲುಗಳಿದ್ದು ಅವುಗಳನ್ನು ಹಂತ ಹಂತವಾಗಿ ಜನ ಸೇವೆಗಾಗಿಯೇ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತದೆ‌. ಸರಕಾರದ ಯೋಜನೆಗಳು, ಪ್ರತಿಫಲಗಳು ಜನರಿಗೆ ತಲುಪಿಸುವುದು ಹಾಗೂ ಜನರ ಅಗತ್ಯ ಗಳನ್ನು ಪ್ರತಿನಿಧಿಗಳಿಗೆ ಮನವರಿಕೆ ಮಾಡಲು ಸರಕಾರ ಅಧೀನದಲ್ಲಿರುವ ಅನೇಕ ಸೇವಾ ಸಂಸ್ಥೆಗಳು ಸಹಕಾರಿ ಆಗಿದ್ದು, Grama One Centres ಫ್ರ್ಯಾಂಚೈಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಈ ಒಂದು ಅವಕಾಶ ನೀಡಲಾಗುತ್ತಿದೆ. ಕೊಡಗು ಒಂದು ಭಾಗದಲ್ಲಿ ಹೊಸದಾಗಿ 14 ಭಾಗದ ಗ್ರಾಮ ಪಂಚಾಯತ್ ನಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ , ಗ್ರಾಮ ಒನ್ ಕೇಂದ್ರಕ್ಕೆ ಆಸಕ್ತರಿಗೆ ಅರ್ಜಿ ಆಹ್ವಾನಿಸಲಾಗಿದೆ.  ಗ್ರಾಮ ಒನ್ (Gram One) ಕೇಂದ್ರಗಳಿಗೆ ಆಸಕ್ತ ಫ್ರ್ಯಾಂಚೈಸ್ ಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಕೆಲ ಅಗತ್ಯ ಮಾಹಿತಿ ಇಲ್ಲಿದೆ.

ಯಾವೆಲ್ಲ ಭಾಗದಲ್ಲಿ ಸೇವೆ ಇದೆ:

 

 

advertisement

ಹಾಕತ್ತೂರು, ಕರಿಕೆ, ಪೊನ್ನಂಪೇಟೆಯ ನಿಟ್ಟೂರು, ಬಲ್ಯ ಮಂಡೂರು,  ಮಡಿಕೇರಿಯ ಹೊಸ್ಕೇರಿ, ಕೆ. ಬಾಡಗ, ಬಿ. ಶೆಟ್ಟಿಗಾರ್, ನಾಲ್ಕೇರಿ, ಕಿರುಗೂರು, ಸೋಮವಾರಪೇಟೆ ಬೆಟ್ಟದಳ್ಳಿ, ಗರ್ವಾಲೆ, ವಿರಾಜಪೇಟೆಯ ಕಾಕೋಟು ಪರಂಬು, ಬೆಟೋಳಿ, ಅಮ್ಮತ್ತಿ ಇತರ ಭಾಗದಲ್ಲಿ ಗ್ರಾಮ ಒನ್ (Gram One) ಕೇಂದ್ರ ಸ್ಥಾಪನೆಗೆ ಫ್ರ್ಯಾಂಚೈಸ್ ಕರೆಯಲಾಗುತ್ತದೆ.

ಫ್ರ್ಯಾಂಚೈಸ್ ನಲ್ಲಿ ಏನೆಲ್ಲ ಇರಬೇಕು?

ಗ್ರಾಮ ಒನ್ ಕೇಂದ್ರ ಬಿಂಬಿಸುವ 100 ಅಡಿ ಚದರ ಹೊಂದಿರುವ ಕಟ್ಟಡ ಇರಬೇಕು. ಅದರಲ್ಲಿ ಪ್ರತ್ಯೇಕ ವಿಭಾಗ ಇರಬೇಕು. ವಾಹನ ನಿಲುಗಡೆ ವ್ಯವಸ್ಥೆ, ಕೌಂಟರ್ ಟೇಬಲ್, ಆಪರೇಟರ್ , ಖುರ್ಚಿ, ಗ ಸಿಸ್ಟಂ, ಪ್ರಿಂಟರ್ ಟೇಬಲ್, ಲ್ಯಾಪ್ ಟಾಪ್, ಸಿಸಿಟಿವಿ, LCD TV ಇರಬೇಕು. ಒಟ್ಟಾರೆ ಒಂದು ಸಂಪೂರ್ಣ ಗ್ರಾಮ ಒನ್ ಪರಿಕಲ್ಪನೆಗೆ ನೆರವಾಗುವ ಅಷ್ಟು ವ್ಯವಸ್ಥೆ ಮಾಡಿ ಅದರ ನಿರ್ವಹಣೆ ಮಾಡಬೇಕು.

ಅರ್ಜಿ ಸಲ್ಲಿಸಲು ಏನು ಮಾಡಬೇಕು?

ಆಸಕ್ತರು ಗ್ರಾಮ ಒನ್ ಫ್ರ್ಯಾಂಚೈಸ್ ಗಳಾಗಬೇಕೆಂದಾದರೆ ಕೆಲ ಅಗತ್ಯ ಕ್ರಮ ಅನುಸರಿಸಲೇ ಬೇಕು. https:kal.mys.gramaone.Karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು.  ಅಥವಾ ಇ ಮೇಲ್ ಐಡಿ [email protected] ಗೂ ಹಾಕಬಹುದು. ಜಿಲ್ಲಾಧಿಕಾರಿಗಳ ಸಮಾಲೋಚಕರ ಕಚೇರಿ 9611657344 ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9148712473ಅನ್ನು ಸಂಪರ್ಕಿಸಿ.

advertisement

Leave A Reply

Your email address will not be published.