Karnataka Times
Trending Stories, Viral News, Gossips & Everything in Kannada

Smartphone: ಇಂತಹ ನೌಕರರಿಗೆ ಸರ್ಕಾರದಿಂದ ಸಿಗುತ್ತಿದೆ ಉಚಿತ ಸ್ಮಾರ್ಟ್ ಫೋನ್ ಭಾಗ್ಯ!

advertisement

ಮಗುವಿನ ಮೊದಲ ಕಲಿಕೆಯ ಹೆಜ್ಜೆ ಅಂಗವಾಡಿ ಕೇಂದ್ರಗಳಲ್ಲಿ, ಅಲ್ಲಿನ ಸಿಬ್ಬಂದಿ ಗಳು ಮಕ್ಕಳನ್ನು ಯಾವ ರೀತಿ ಪೋಷಣೆ ಮಾಡುತ್ತಾರೆ, ಅದರ ಮೇಲೆ ಮಕ್ಕಳ ಆಸಕ್ತಿಯು ಹೆಚ್ಚುತ್ತದೆ. ಇಂದು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಬರಮಾಡಿಕೊಳ್ಳಲು ಸರಕಾರ ಹಲವು ರೀತಿಯ ಹೊಸ ಹೊಸ ಸೌಲಭ್ಯವನ್ನು ನೀಡುತ್ತಲೆ ಬಂದಿದೆ. ‌ಆದೇ ರೀತಿ ಕಲಿಕೆ ಸಾಮಗ್ರಿ, ಮಧ್ಯಾಹ್ನ ದ ಊಟ, ವಿಶ್ರಾಂತಿ ಇದೆಲ್ಲವನ್ನೂ ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತದೆ. ಅಲ್ಲಿರುವ ಮೇಲ್ವಿಚಾರಕಿ, ಕಾರ್ಯಕರ್ತೆಯರನ್ನು ಕೂಡ ಸರಕಾರ ಬೆಂಬಲಿಸುತ್ತಲೆ ಬಂದಿದೆ.

ಸ್ಮಾರ್ಟ್‌ಫೋನ್‌ ವಿತರಣೆ:

 

 

ರಾಜ್ಯದಲ್ಲಿ ಸಚಿವ ಸಂಪುಟ ಸಭೆಯು ನಡೆದಿದ್ದು ಅಂಗನವಾಡಿ ಕಾರ್ಯಕರ್ತರಿಗೆ ಸಹಾಯಕವಾಗುವಂತೆ ಪೋಷಣೆ ಅಭಿಯಾನ ಯೋಜನೆಯಡಿ ಮೇಲ್ವಾಚಾರಕಿಯರಿಗೆ ಒಟ್ಟು 75,938 ಸ್ಮಾರ್ಟ್‌ ಫೋನ್‌ಗಳನ್ನು (Smartphones) ಸುಮಾರು 89.61 ಕೋಟಿ ರೂ.ಗಳ ವೆಚ್ಚದಲ್ಲಿ ನೀಡಲು ಸರಕಾರ ಮುಂದಾಗಿದೆ.

ಮಾಹಿತಿ ದಾಖಲಿಸಲು ಸ್ಮಾರ್ಟ್‌ಫೋನ್‌:

advertisement

ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಡ್ಯಾಕುಮೆಂಟ್ ಮಾಡಲು, ಮಕ್ಕಳ ವಿವರ, ನೀಡಿದ ಆಹಾರದ ವಿವರ ಮತ್ತು ಕೇಂದ್ರ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರ ವಿವರಗಳ ದಾಖಲಾತಿಗೆ Smartphone ಬಳಕೆ, ಅಷ್ಟೆ ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿಯೂ ಕೂಡ ಇದರಲ್ಲಿ ದಾಖಲಿಸಲು ಸಹಕಾರಿಯಾಗಲಿದೆ.

ಟೆಂಡರ್ ಕರೆಯಲಾಗಿದೆ:

ಎಲ್ಲಾ ಪೌಷ್ಠಿಕತೆಯ ಯೋಜನೆಗಳನ್ನು ಗರ್ಭಿಣಿ ಮಹೀಳೆಯರಿಗೆ, ಮಕ್ಕಳಿಗೆ ಒದಗಿಸುವ ನಿಟ್ಟಿನಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಠಿಕತೆಯ ಸೌಲಭ್ಯ ವನ್ನು ನಿರ್ದಿಷ್ಟ ಅವಧಿಗೆ ತಲುಪಿಸಲು ಈ ಕುರಿತಂತೆ ಮಾಹಿತಿಯನ್ನು ಪೋಷ್ ಟ್ರ್ಯಾಕ್‌ನಲ್ಲಿ ಅಳವಡಿಸಲು ಸ್ಮಾರ್ಟ್‌ ಫೋನ್‌ಗಳನ್ನು ಖರೀದಿಸಲು ಪ್ರಸ್ತಾಪಮಾಡಲಾಗಿದೆ.ಅದಕ್ಕಾಗಿ ಸುಮಾರು 75,938 ಸ್ಮಾರ್ಟ್‌ ಫೋನ್‌ಗಳನ್ನು 89.61 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಟೆಂಡರ್ ಕರೆಯಲಾಗಿದೆ.

ಆ್ಯಪ್ ಬಿಡುಗಡೆ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್‌ ಅಭಿಯಾನದ ಮೂಲಕ ಸ್ಮಾರ್ಟ್‌ ಫೋನ್‌ ಸಿಗಲಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತರ ಕೆಲಸದ ಒತ್ತದ ಕಡಿಮೆಯಾಗಲಿದ್ದು ಇದಕ್ಕಾಗಿ ಸ್ನೇಹ ಆ್ಯಪ್‌ ಅಭಿವೃದ್ಧಿಕೂಡ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರದ ವಿವರ, ದಾಖಲೆಗಳನ್ನು ಇಲ್ಲಿ ದಾಖಲು ಮಾಡಬೇಕಾಗುತ್ತದೆ.

advertisement

Leave A Reply

Your email address will not be published.