Karnataka Times
Trending Stories, Viral News, Gossips & Everything in Kannada

Arecanut: ಅಡಿಕೆ ತೋಟವನ್ನೇ ನಂಬಿಕೊಂಡು ಇದ್ದವರಿಗೆ ಬೆಳ್ಳಂಬೆಳಗ್ಗೆ ಹೊಸ ಸೂಚನೆ

advertisement

Arecanut Price In Market: ಅಡಿಕೆ ಮಲೆನಾಡಿಗರ ಚಿನ್ನ. ವಾಣಿಜ್ಯ ಬೆಳೆಯಾಗಿ ಒಂದು ಸಮಯಕ್ಕೆ ಬೆಳೆದವರಿಗೆಲ್ಲಾ ಭಾರೀ ಬೆಲೆಯನ್ನೇ ನೀಡುತ್ತಿದ್ದ ಅಡಿಕೆ ಇತ್ತೀಚಿನ ವರ್ಷದಲ್ಲಿ ನಿರಂತರ ಬೆಲೆ ಕುಸಿತಕ್ಕೂ ಸಿಲುಕಿದೆ. ಇದರಲ್ಲಿ ಅಡಿಕೆ ಬಳಕೆ ವಿಚಾರವಾಗಿ ಇರುವ ಅಪನಂಬಿಕೆಗಳು ಇದ್ದರೂ ಅಡಿಕೆ ಬಳಕೆಯಿಂದ ಆಗಬಹುದಾದ ತೊಂದರೆಗಳ ಕುರಿತು ಅದನ್ನು ಯಾರೂ ಅಧಿಕೃತವಾಗಿ ಹೇಳಿಲ್ಲ. ಈ ಗೊಂದಲ ಮುಂದುವರೆದು ಇದು ಮಾರುಕಟ್ಟೆಯ ಮೇಲೂ ನಿಧಾನವಾಗಿ ಪರಿಣಾಮ ಬೀರ ತೊಡಗಿದೆ.

ಅಡಿಕೆ (Arecanut) ಬೆಲೆಗೆ ಕೃಷಿಕರ ಅಭಿಪ್ರಾಯವೇನು?

ಅಡಿಕೆ (Arecanut) ಬೆಳೆಗಾರರು ವರ್ಷದ ಆರಂಭದಲ್ಲಿ ಖುಷಿಗೊಂಡಿದ್ದರು. ಕಳೆದ ವರ್ಷದ ಕೊನೆಯಲ್ಲಿ ಸ್ವಲ್ಪ ಆತಂಕ ಮನೆ ಮಾಡಿದ್ದರೂ ಈ ವರ್ಷ ಲಾಭದಾಯಕವಾಗುತ್ತದೆ, ಅಡಿಕೆ ಧಾರಣೆ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದರು. ಕ್ವಿಂಟಾಲ್ 52 ಸಾವಿರದಿಂದ 60 ಸಾವಿರ ರೂಪಾಯಿ ಆಗಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಇದಕ್ಕೆ ಪೂರಕ ಎಂಬಂತೆ ಆರಂಭದಲ್ಲಿ ಧಾರಣೆಯು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದರೆ ಇದೀಗ ಅದೇ ಆಡಿದ್ದೇ ಆಟ ಎಂಬಂತೆ ಕುಸಿಯುತ್ತಾ, ಕುಂಟುತ್ತಾ ಸಾಗುತ್ತಿದೆ.

Image Source: IndiaMart

 

advertisement

ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ 3000 ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆಗೆ ಕಡಿಮೆ ಆಗಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಹದಿನೈದು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ (Arecanut) ಧಾರಣೆ ನಿರಂತರವಾಗಿ ಕುಸಿಯುತ್ತಾ ಸಾಗುತ್ತಿದೆ. ವರ್ಷದ ಆರಂಭದಲ್ಲಿ 200, 300, 400 ರೂಪಾಯಿಯಷ್ಟು ಏರಿಕೆ ಕಂಡಿದ್ದ ಅಡಿಕೆ ದರ ಶುಕ್ರವಾರದ ಮಾರುಕಟ್ಟೆಯಲ್ಲಿ 3000 ರೂಪಾಯಿಗೂ ಅಧಿಕ ಕಡಿಮೆ ಆಗಿರುವುದರಿಂದ ಬೆಳೆಗಾರರು ಅಡಿಕೆಯನ್ನು ಮಾರುಕಟ್ಟೆಗೆ ಬಿಡಬೇಕೋ ಬೇಡವೋ ಎಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.

Image Source: Justdial

ಅಡಿಕೆ ವರ್ತಕ ಕಡಿದಾಳ್ ಗೋಪಾಲ್ ಅವರು ಹೇಳಿದ್ದೇನು?

ಅಡಿಕೆಗೆ ಈಗ ಏನಿದೆಯೋ ಅದು ಉತ್ತಮವಾದ ಬೆಲೆ. ಕಳೆದ 15 ದಿನಗಳ ಅಡಿಕೆ ದರದಲ್ಲಿ ಹಿಂದೆ 3000 ರೂಪಾಯಿ ಕುಸಿದಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಅಡಿಕೆ ಎಷ್ಟು ಬೆಲೆಬಾಳಬಲ್ಲದು ಎಂಬುದು ತಿಳಿದು ಹೋಗುತ್ತದೆ. ಸ್ವಲ್ಪ ಏರಿಳಿತ ಉಂಟಾಗುವುದು ಸಾಮಾನ್ಯ ಒಮ್ಮೆಲೆ ಬಹಳ ಹೆಚ್ಚುವುದೂ ಕೂಡ ಇಲ್ಲ. ಚುನಾವಣೆ ಬಂದಾಗ ಅಡಕೆಯ ಮೇಲೆ ನೇರಾನೇರ ಪರಿಣಾಮ ಬೀರದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಬಿದ್ದೇ ಬೀಳುತ್ತದೆ. ಹಣ ಟ್ರಾನ್ಸ್ಫರ್ ಮಾಡುವಾಗ ಬಹಳ ತೊಂದರೆ ಅನುಭವಿಸಬೇಕಾಗಿ ಬರುತ್ತದೆ. ಎಲ್ಲರೂ ಹಳ್ಳಿಯಿಂದ ಪಟ್ಟಣಕ್ಕೆ ಅಡಿಕೆ ಮಾರುಕಟ್ಟೆಗೆ ಒಯ್ಯುತ್ತಾರೆ ಆಗ ಬಿಲ್ ಕೇಳಿದರೆ ನೀಡುವುದು ಮಾಹಿತಿ ನೀಡುವುದು ರೈತರಿಗೆ ಕಷ್ಟವಾಗುತ್ತದೆ. ಈಗ ಸೊಸೈಟಿ ಸಾಲ ಕಟ್ಟಲು ಇಲ್ಲವೇ ಇನ್ಯಾವುದೋ ಖರ್ಚಿಗೆ ಹಣ ಅಗತ್ಯ ಇದ್ದರೆ ಈಗ ಮಾರುವುದು ಒಳ್ಳೆಯದು. ಇಡುವ ಮನಸ್ಸಿದ್ದರೆ 2ವರ್ಷಗಳ ಕಾಲ ಬೇಕಾದರೂ ಇಟ್ಟು ಅಡಿಕೆ ಧಾರಣೆ ಹೆಚ್ಚಿದಾಗ ಮಾರಾಟ ಮಾಡಬಹುದು.

advertisement

Leave A Reply

Your email address will not be published.