Karnataka Times
Trending Stories, Viral News, Gossips & Everything in Kannada

Tata Nano EV: ಟಾಟಾ ನ್ಯಾನೋ ಎಲೆಕ್ಟ್ರಿಕ್ ಮಾದರಿ ಶೀಘ್ರದಲ್ಲೇ ಬಿಡುಗಡೆ, ಇಲ್ಲಿದೆ ಹೊಸ ಅಪ್ಡೇಟ್ ಬೆಲೆ ಹಾಗೂ ಫೀಚರ್

advertisement

ದ್ವಿಚಕ್ರ ವಾಹನಕ್ಕಿಂತ ಸ್ವಲ್ಪ ಹೆಚ್ಚಿನ ದೂರದಲ್ಲಿ ನಾಲ್ಕು ಚಕ್ರದ ವಾಹನವನ್ನು ಭಾರತೀಯರು ಡ್ರೈವ್ ಮಾಡುವಂತೆ ಇರಬೇಕು ಎನ್ನುವ ಕನಸಿನೊಂದಿಗೆ ರತನ್ ಟಾಟಾ 2009ರ ಮಾರ್ಚಿನಲ್ಲಿ ಟಾಟಾ ನ್ಯಾನೋ ಬಿಡುಗಡೆ ಮಾಡಿದ್ದರು. ಇದು ಬಿಡುಗಡೆಯಾದ ಕೂಡಲೇ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರಿವ್ಯೂಗಳನ್ನು ಹೊಂದಿದ್ದು ಇದರ ಜನಪ್ರಿಯತೆ ಕುಸಿಯುತ್ತಾ ಬಂದು 2019ರಲ್ಲಿ ಇದರ ಉತ್ಪಾದನೆ ನಿಂತು ಹೋಯ್ತು.
ಈಗ ಇದೇ ಕನಸಿನ ಮುಂದುವರಿದ ಭಾಗ ಆದ ಟಾಟಾ ನ್ಯಾನೋ ಇವಿ (Tata Nano EV) ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ ಈ ಕಾರಿನ ಹೆಸರು ಏನಾಗಲಿದೆ ಎಷ್ಟು ಪವರ್ ಫುಲ್ ಇಂಜಿನ್ ಇರಲಿದೆ ಹಾಗೂ ಫೀಚರ್ಸ್ ಗಳು ಏನು ಎಂಬುದನ್ನು ಮುಂದೆ ಓದಿ.

ವರದಿಗಳು ಹೇಳುವಂತೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ವೆಹಿಕಲ್ (Tata Nano EV) ಈ ಬಾರಿ “ಜಯಂ ನಿಯೋ” (Jayem Neo) ಎಂಬ ಹೆಸರಿನಲ್ಲಿ ಬಿಡುಗಡೆ ಆಗುತ್ತದೆ ಎನ್ನಲಾಗಿದೆ. ಉತ್ಪಾದನೆ ಈಗಾಗಲೇ ಆರಂಭವಾಗಿದ್ದು ಲಾಂಚ್ ಗೆ ಸಿದ್ಧತೆ ನಡೆಯುತ್ತಿದೆ. ಹೀಗಾಗಿ 2024ರ ಯಾವುದೇ ಸಂದರ್ಭದಲ್ಲಿ ಆದರೂ ಟಾಟಾ ಎಲೆಕ್ಟ್ರಿಕ್ ವೆಹಿಕಲ್ ನ್ಯಾನೋ ದ ಲಾಂಚ್ ನ ಬಗ್ಗೆ ವರದಿಗಳು ನಿಮ್ಮ ಕಿವಿಯ ಮೇಲೆ ಬಿದ್ದರೆ ಆಶ್ಚರ್ಯವೇನಿಲ್ಲ.

Tata Nano EV Features:

 

 

advertisement

ಈ ಕಾರು Android Auto ಮತ್ತು Apple Car Play, Bluetooth ಮತ್ತು ಇಂಟರ್ನೆಟ್ ಸಂಪರ್ಕದೊಂದಿಗೆ ಬರಲಿದೆ. 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 6 ಸ್ಪೀಕರ್ಸ್ ಸೌಂಡ್ ಸಿಸ್ಟಮ್, ಪವರ್ ಸ್ಟೇರಿಂಗ್, ಪವರ್ ವಿಂಡೋ ABS, EBD ಮುಂತಾದ ಫೀಚ್ಚರ್ಸ್ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

Tata Nano EV Power:

ಟಾಟಾ ನ್ಯಾನೋ ಇ ವಿ (Tata Nano EV) ಯಲ್ಲಿ 17 kwh ಬ್ಯಾಟರಿ ಪ್ಯಾಕನ್ನು ನಾವು ಕಾಣಬಹುದು. ಈ ಬ್ಯಾಟರಿಯನ್ನು ಒಮ್ಮೆ ಪೂರ್ಣವಾಗಿ ಜಾರ್ಜ್ ಮಾಡಿದಲ್ಲಿ 300 ಕಿಲೋಮೀಟರ್ಗಳ ದೂರವನ್ನು ಕ್ರಮಿಸಬಹುದು ಎನ್ನಲಾಗಿದೆ. ಕಾರಿನ ಗರಿಷ್ಠ ವೇಗ 80 ಕಿಲೋಮೀಟರ್ ಪ್ರತಿ ಗಂಟೆ ಆಗಲಿದೆ. ಇನ್ನು 40 kwh ನ ಎಲೆಕ್ಟ್ರಿಕ್ ಮೋಟರ್ ಕೂಡ ಇದೆ ಎನ್ನಲಾಗಿದ್ದು ಇದು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

Tata Nano EV Price:

ಟಾಟಾ ನ್ಯಾನೋ ಎಲೆಕ್ಟ್ರಿಕ್ ವೆಹಿಕಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡೂ ಗೇರ್ ಶಿಫ್ಟಿಂಗ್ ಆಯ್ಕೆಗಳೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇದರಿಂದ ನಗರದ ಒಳಗಿನ ಡ್ರೈವ್ ಬಹಳ ಸುಲಭವಾಗಿ ಪರಿಣಮಿಸಲಿದೆ. ಇಲ್ಲಿಯ ತನಕ ಅಧಿಕೃತವಾಗಿ ಬೆಲೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯ ಆಗಿಲ್ಲದೆ ಇದ್ದರೂ ಇದರಲ್ಲಿ ಬರುವ ವೇರಿಯಂಟ್ ಗಳ ಬೆಲೆಗಳು ಮೂರರಿಂದ ಐದು ಲಕ್ಷ ರೂಪಾಯಿಗಳ ತನಕ ಇರಲಿವೆ ಎಂದು ಹೇಳಲಾಗಿದೆ.

advertisement

Leave A Reply

Your email address will not be published.