Karnataka Times
Trending Stories, Viral News, Gossips & Everything in Kannada

Anna Bhagya Money: ನಿಮಗೂ ಅನ್ನಭಾಗ್ಯ ‌ಹಣ ಬಂದಿಲ್ವ! ಸರ್ಕಾರದಿಂದ ಈ ಹೊಸ ಮಾರ್ಗಸೂಚಿ

advertisement

ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳ (Guarantee Schemes) ಮೂಲಕ ಅನ್ನಭಾಗ್ಯ ಯೋಜನೆಯನ್ನು ಅರ್ಹರಿಗಾಗಿ ಜಾರಿಗೆ ತಂದಿದ್ದು ಪಡಿತರದಾರರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಪ್ರಣಾಳಿಕೆಯಂತೆ ಹತ್ತು ಕೆಜಿ ಅಕ್ಕಿಯ ಪರಿಣಾಮವಾಗಿ ಅಕ್ಕಿ ಕೊರತೆ ಕಾರಣದಿಂದ 5 ಕೆ.ಜಿ ಅಕ್ಕಿ ಬದಲು ಪ್ರತಿ ಕೆ.ಜಿಗೆ 34ರೂಪಾಯಿ ಯಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಕೂಡ ಮಾಡುತ್ತಿದೆ

ಈ ಸೌಲಭ್ಯದಿಂದ ಅನರ್ಹರು:

ಹೆಚ್ಚಿನ ಜನರಿಗೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ (Anna Bhagya Yojana) ಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ಕೂಡ ಜಮೆ ಮಾಡುತ್ತಿದೆ. ನೇರವಾಗಿ ಡಿಬಿಟಿ ಮೂಲಕ ಹಣ (Anna Bhagya Money) ವರ್ಗಾವಣೆ ಮಾಡುತ್ತಿದೆ. ಆದರೆ ಕೆಲವರಿಗೆ ಈ ಹಣ ಜಮೆಯಾಗಿಲ್ಲ. ಸುಮಾರು ‌ 8500 ಅರ್ಹ ಪಡಿತರ ಚೀಟಿದಾರ ಹೊಂದಿರುವ ಕುಟುಂಬಗಳು ಈ ಯೋಜನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸರಕಾರವು ಕೂಡ ಸೂಕ್ತ ಪರಿಶೀಲನೆ ಯನ್ನು ನಡೆಸುತ್ತಿದೆ.

ಯಾಕೆ ಹಣ ಜಮೆ ಯಾಗಿಲ್ಲ?

 

 

advertisement

ಅನ್ನಭಾಗ್ಯ ಯೋಜನೆಯ ಹಣ (Anna Bhagya Yojana) ಬಾರದಿರಲು ಮುಖ್ಯ ಕಾರಣ, ಬ್ಯಾಂಕ್‌ ಖಾತೆ (Bank Account) ಗೆ ಆಧಾರ್‌ ಲಿಂಕ್‌ ಮಾಡಿಸದೆ ಇರುವ ಕಾರಣ ಹಣ ಜಮೆ ಯಾಗಿಲ್ಲ. ಅದೇ ರೀತಿ ರೇಷನ್ ಕಾರ್ಡ್ ನಲ್ಲಿ ದಾಖಲೆ ಮಾಹಿತಿ ಗಳು ಸರಿ ಇರದೇ ಇರೋ ಕಾರಣವೂ ಈ ಅನ್ನಭಾಗ್ಯ ಹಣ (Anna Bhagya Money) ಜಮೆ ಯಾಗಿಲ್ಲ. ಈಗಾಗಲೇ ನ್ಯಾಯಬೆಲೆ ಅಂಗಡಿ ಮಾಲೀಕರು, ನ್ಯೂನತೆ, ಸಮಸ್ಯೆ ಕಂಡು ಬಂದಿದ್ದ ಪಡಿತರ ಚೀಟಿಗಳನ್ನು ಪರಿಶೀಲನೆ ಮಾಡಿ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರಕಾರವು ಮಾಹಿತಿ ನೀಡಿದೆ. ಮನೆಯ ಎರಡನೇ ಹಿರಿಯ ಅಥವಾ ಯಜಮಾನನ ಖಾತೆಗೆ ಹಣ ವರ್ಗಾಯಿಸುವ ಕುರಿತಾಗಿ ಪ್ರಸ್ತಾವನೆ ಕೂಡ ಮಾಡಲಾಗಿದೆ

ಮಾರ್ಚ್ ತಿಂಗಳ ಹಣ ಜಮೆ?

ಈಗಾಗಲೇ ಅರ್ಹ ಫಲಾನುಭವಿಗಳಿಗೆ ಅನ್ನಭಾಗ್ಯ ‌ಯೋಜನೆಯ ಸೌಲಭ್ಯ ದೊರೆಯುತ್ತಿದ್ದು ಕೆಲವರಿಗೆ ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಂದಿಲ್ಲ. ಹೀಗಾಗಿ ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ವು ಈ ತಿಂಗಳಿನಲ್ಲಿ ಖಾತೆಗೆ ಜಮೆ ಯಾಗಬಹುದು.‌ಮಾರ್ಚ್ ಇಪ್ಪತರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಹಣ ಖಾತೆಗೆ ಬರಬಹುದು.

ಹೀಗೆ ಮಾಹಿತಿ ಪಡೆದುಕೊಳ್ಳಿ:

ಮಾರ್ಚ್ ತಿಂಗಳ ಹಣ ಜಮೆಯಾಗಿದೆಯೇ ಎಂದು ತಿಳಿದು ಕೊಳ್ಳಲು ಮೊದಲಿಗೆ https://www.karnataka.gov.in ಆಹಾರ ಇಲಾಖೆಯ ಈ ವೆಬ್ ಗೆ ಭೇಟಿ ನೀಡುವ ಮೂಲಕ ನೀವು ಹಣ ಬಂದಿರುವ ಮಾಹಿತಿ ಬಗ್ಗೆ ತಿಳಿಯಬಹುದಾಗಿದೆ.

advertisement

Leave A Reply

Your email address will not be published.