Karnataka Times
Trending Stories, Viral News, Gossips & Everything in Kannada

RBI: ಎಲೆಕ್ಷನ್ ಗೂ ಮುನ್ನವೇ 100 ರೂ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ ಹೊಸ ಸ್ಪಷ್ಟನೆ!

advertisement

ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಹಣ ಬಹಳ ಪ್ರಾಮುಖ್ಯತೆ ಪಡೆಯಲಿದೆ. ಕಾಲಕ್ಕೆ ತಕ್ಕಂತೆ ಹಣಕಾಸಿನ ವ್ಯವಸ್ಥೆ ಕೂಡ ಬದಲಾಗುತ್ತಿದ್ದು ಹಿಂದೆ ಚಾಲ್ತಿಯಲ್ಲಿ ಇದ್ದ ಅನೇಕ ನೋಟುಗಳು ಹಾಗೂ ನಾಣ್ಯಗಳು ಈಗ ಇಲ್ಲವಾಗಿದೆ. 19ನೇ ಶತಮಾನದ ಕಾಲಘಟದಲ್ಲಿ 1ಪೈಸೆಗೂ ಬೆಲೆ ಇತ್ತು ಆದರೆ ಇಂದು ನಾಲ್ಕಾಣೆಗೂ ಕೂಡ ಬೆಲೆ ಇಲ್ಲವಾಗಿದೆ. 50 ಪೈಸೆ ಕೂಡ ಲೆಕ್ಕಾಚಾರಕ್ಕೆ ಬಂದರೂ ನಾಣ್ಯಗಳು ಕಣ್ಮರೆಯಾಗಿವೆ. ಮುಂದಿನ ದಿನದಲ್ಲಿ ಕನಿಷ್ಠ ಹಣದ ಮೊತ್ತ 1 ರೂಪಾಯಿ ಆಗುವಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು.

ಮನುಷ್ಯನ ಕ್ರಿಯಾಶೀಲತೆ ಬುದ್ಧಿಮಟ್ಟಗಳು ಕಾಲಕ್ಕೆ ತಕ್ಕಂತೆ ಹೊಸ ವಿಧಾನ ಅನುಸರಿಸಲು ಮುಂದಾಗುತ್ತಿದ್ದು ಇದರ ಪ್ರಯೋಗಾರ್ಥವೆ ನಾಣ್ಯಗಳು ಹಾಗೂ ನೋಟುಗಳು ಕಾಲಕ್ಕೆ ತಕ್ಕಂತೆ ಹೊಸ ವಿಧಾನಗಳಾಗಿ ಬದಲಾಗುತ್ತಿವೆ. ಇದೀಗ ನೂರು ರೂಪಾಯಿ (100 Rupees) ಹಳೆ ಮುಖ ಬೆಲೆ ನೋಟು ರದ್ದಾಗುತ್ತದೆ ಎಂಬ ಮಾಹಿತಿ ಹರಡಿದ್ದು ಈ ಬಗ್ಗೆ ಸಂಪೂರ್ಣ ವಿವರಗಳು‌ ಇಲ್ಲಿದೆ

ವೈರಲ್ ಆಯ್ತು ಈ ಸುದ್ದಿ:

 

Image Source: Zee Business

 

advertisement

100 ರೂಪಾಯಿ ಮುಖ ಬೆಲೆಯ ಹಳೆ ನೋಟು (Old 100 Rupees Note) ಅಮಾನೀಕರಣ ಆಗುತ್ತದೆ. ಈ ಬಗ್ಗೆ RBI ನಿಂದಲೇ ಸೂಚನೆ ಬಂದಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿದ್ದು ಈ ಬಗ್ಗೆ ಇರುವ ಗೊಂದಲಕ್ಕೆ ಇದೀಗ ನಿಮಗೆ ಉತ್ತರ ಸಿಗಲಿದೆ. ನೂರು ರೂಪಾಯಿ ಮುಖ ಬೆಲೆಯ ಹಳೆನೋಟು ಅಮಾನ್ಯ ಎಂಬ ಸುದ್ದಿ ಹಬ್ಬುತ್ತಿದ್ದು ಈ ಬಗ್ಗೆ RBI ಸ್ಪಷ್ಟನೆ ನೀಡಿದೆ. ಹಾಗಾಗಿ ಜನರಿಗೂ ಕೂಡ ಈ ವಿಚಾರದ ಬಗ್ಗೆ ಗೊಂದಲಗೊಳ್ಳದಂತೆ ಸೂಚನೆ ಸಿಕ್ಕಿದೆ. ನೂರರ ಮುಖಬೆಲೆ ನೋಟು ಮಾರ್ಚ್ 31ರ ವರೆಗೆ ಮಾತ್ರ ಬಳಸಿ ಮತ್ತೆ ಬಳಸಬಾರದು ಎಪ್ರಿಲ್ ಒಂದರಿಂದ ಹೊಸ ನೋಟು ಮಾತ್ರವೇ ಬಳಕೆ ಆಗಲಿದೆ ಎಂದು ಸುದ್ದಿ ಹರಿದಾಡಿದೆ.

RBI ಸೂಚನೆ ಏನು?

 

Image Source: NDTV

 

RBIನ ಸೂಚನೆ ಪ್ರಕಾರ ಯಾವುದೇ ವಿಧವಾಗಿ 100 ರೂಪಾಯಿ ಹಳೆ ನೋಟು (Old 100 Rupees Note) ಅಮಾನೀಕರಣ ಮಾಡಲಿಲ್ಲ. ವಾಟ್ಸ್ ಆ್ಯಪ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದೆ. ಈ ಬಗ್ಗೆ RBI ಯಾವುದೆ ಘೋಷಣೆ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಹಾಗಾಗಿ ಜನರು ತಮ್ಮ ಹಳೆ ನೂರು ರೂಪಾಯಿ ನೋಟು ಹಿಂದಕ್ಕೆ ಹಿಂದಿರುಗಿಸಲು ಬ್ಯಾಂಕಿನ ಮೊರೆ ಹೋಗುವ ಅಗತ್ಯ ಇಲ್ಲ ಎಂದು ಸಹ ಹೇಳಿದೆ‌.

ಒಟ್ಟಾರೆಯಾಗಿ 2000 ಮುಖ ಬೆಲೆಯ ನೋಟು ವಾಪಾಸ್ಸು ನೀಡುವಂತೆ ಕೇಂದ್ರ ಬ್ಯಾಂಕ್ ಘೋಷಣೆ ಮಾಡಿದ್ದ ಬೆನ್ನಲ್ಲೆ ಕೋಟ್ಯಾಂತರ ರೂಪಾಯಿ ವಾಪಾಸ್ಸಾಗಿತ್ತು ಇನ್ನು ಬರಲು ಕೂಡ ಬಾಕಿ ಇದೆ. ಹೀಗಿರುವಾಗಲೇ ನೂರು ರೂಪಾಯಿ ಮುಖ ಬೆಲೆ ನೋಟಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ್ದು ಜನರಿಗೂ ಗೊಂದಲ ಉಂಟಾಗಿತ್ತು. ಈಗ RBI ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಎಲ್ಲ ಗೊಂದಲ ಪರಿಹಾರ ಕಂಡಂತಾಗಿದೆ.

advertisement

Leave A Reply

Your email address will not be published.