Karnataka Times
Trending Stories, Viral News, Gossips & Everything in Kannada

Gruha Lakshmi Money: ಕೆಲವರಿಗೆ ಇನ್ನು ಬಂದಿಲ್ಲ ಗೃಹಲಕ್ಷ್ಮಿ ಹಣ! ಅದರ ಬೆನ್ನಲ್ಲೇ ಇನ್ನೊಂದು ಸಿಹಿವಿಚಾರ

advertisement

ಮಹಿಳೆಯರ ಒಳಿತಿಗಾಗಿ ರಾಜ್ಯ ಸರಕಾರವು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಜಾರಿಗೆ ತಂದಿದೆ.ಈಗಾಗಲೇ ಈ ಯೋಜನೆಗೆ ರಾಜ್ಯದ ಹಲವು ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದು ಹಣದ ಸದುಪಯೋಗ ಕೂಡ ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯದ ಹಿರಿಯ ಮಹಿಳೆಯರಿಗೆ 2000 ರೂಪಾಯಿ ಸಹಾಯಧನ ನೀಡುವ ಸಲುವಾಗಿ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆಗೆ ಧನಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ಸಿಕ್ಕಿದ್ದು ಕೆಲವೊಂದಿಷ್ಟು ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಯಿಂದ ಇನ್ನೂ ಕೂಡ ಹಣ ಜಮೆ ಯಾಗಿಲ್ಲ. ಕೆಲವು ಮಹಿಳೆಯರಿಗೆ ಏಳು ಕಂತಿನ ವರೆಗೆ ಹಣ ಬಿಡುಗಡೆ ಯಾಗಿದ್ದು ಕೆಲವರಿಗೆ 5,6 ಮತ್ತು ಏಳನೇ ಕಂತಿನ ಹಣವೂ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸರಕಾರವು ಹೊಸದಾದ ಆಪ್ಡೆಟ್ ನೀಡಿದೆ

ಹಣ ಬಿಡುಗಡೆ?

ಈಗಾಗಲೇ ಕೆಲವು ಮಹಿಳೆಯರಿಗೆ ಆರು ಕಂತಿನ ವರೆಗೆ ಹಣ (Gruha Lakshmi Money) ಬಿಡುಗಡೆಯಾಗಿದ್ದು ಏಳನೇ ಕಂತಿನ ಹಣ ಇನ್ನಷ್ಟೇ ಜಮೆ ಯಾಗಬೇಕು. ಆದರೆ ಇನ್ನೂ ಕೆಲವು ಜಿಲ್ಲೆಯ ಮಹಿಳೆಯರಿಗೆ ಏಳನೇ ಕಂತಿನ ಹಣ ಬಿಡುಗಡೆಯಾಗಿದ್ದು ಏಂಟನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಮೂರು ಕಂತಿನ ಹಣ ಒಟ್ಟಿಗೆ ಈ ಜಿಲ್ಲೆಗಳಿಗೆ ಬಿಡುಗಡೆಯಾಗರುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

ಯಾವ ಜಿಲ್ಲೆಗಳಿಗೆ?

 

advertisement

Image Source: Deccan Herald

 

ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಶಿವಮೊಗ್ಗ, ರಾಯಚೂರು, ಚಾಮರಾಜನಗರ,ಚಿಕ್ಕಬಳ್ಳಾಪುರ, ಚಿತ್ರ ದುರ್ಗ, ವಿಜಯಪುರ,ಮೈಸೂರು, ಕೊಪ್ಪಳ, ಮಂಡ್ಯ,ಕೋಲಾರ, ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ, ಬೆಳಗಾವಿ,ಬಾಗಲಕೋಟೆ, ಹಾವೇರಿ, ವಿಜಯಪುರ, ಬೀದರ್, ಈ ಜಿಲ್ಲೆಗಳಿಗೆ 5,6 ಮತ್ತು ಏಳನೇ ಕಂತಿನ ಬಿಡಿಗಡೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಎಂಟನೇ ಕಂತಿನ ಹಣ?

ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಅರ್ಜಿ ಪ್ರಕ್ರಿಯೆ ಸರಿ ಇದ್ದ ಮಹಿಳೆಯರಿಗೆ ಏಳು ಕಂತಿನ ವರೆಗೆ ಹಣ ಬಿಡುಗಡೆಯಾಗಿದ್ದು ಎಂಟನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ಹಣವನ್ನು ಬಿಡುಗಡೆ ಮಾಡಲು ಸರಕಾರ ಈಗಾಗಲೇ ಸಿದ್ದತೆ ಮಾಡಿದ್ದು ಯಾವ ಹೆಸರಿನ ಮಹಿಳೆಯರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಪಟ್ಟಿಯನ್ನು ಸಿದ್ದತೆ ಮಾಡಿಕೊಂಡಿದೆ. ಆದ್ದರಿಂದ ಏಂಟನೇ ಕಂತಿನ ಹಣವು ಎಪ್ರಿಲ್ 15 ರ ಒಳಗೆ ಮಹಿಳೆಯರ ಖಾತೆಗೆ ಜಮೆಯಾಗಬಹುದು ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

advertisement

Leave A Reply

Your email address will not be published.