Karnataka Times
Trending Stories, Viral News, Gossips & Everything in Kannada

Election 2024: ಚುನಾವಣಾ ನೀತಿಸಂಹಿತೆ ಜಾರಿ ಇರುವಾಗ ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು, ಹೊಸ ರೂಲ್ಸ್!

advertisement

ಇನ್ನೇನೂ ಲೋಕಸಭೆ ಚುನಾವಣೆ ನಡೆಯಲಿದ್ದು ಈಗಾಗಲೇ ರಾಜಕೀಯ ಮುಖಂಡರ ಪ್ರಚಾರ ಜೋರಾಗಿದೆ. ಈಗಾಗಲೇ ಜನ ಮತ ಪಡೆಯಲು ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಜನರ ಮುಂದೆ ಇಡುವ ಮೂಲಕ ಮತ ಪ್ರಚಾರ ಮಾಡಿದ್ದಾರೆ. ಈಗಾಗಲೇ ಚುನಾವಣಾ ಆಯೋಗ ಎಲೆಕ್ಷನ್ ಡೇಟ್ ಪ್ರಕಟ ಮಾಡಿದ್ದೇ ತಡ ಮಾದರಿ ನೀತಿ ಸಂಹಿತೆ ಕೂಡಾ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಕೆಲವು ನಿಯಮಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಇದರಲ್ಲಿ ಜನ ಸಾಮಾನ್ಯರಿಗೂ ಕೆಲವೊಂದು ನಿಯಮ ಅನ್ವಯ ವಾಗುತ್ತದೆ.

ಈ ಚುನಾವಣಾ (Election 2024)ಸಂದರ್ಭದಲ್ಲಿ ಮತ ಪಡೆಯುದಕ್ಕಾಗಿ ಮತದಾರರಿಗೆ ಲಂಚ, ಆಮಿಷ, ಉಡುಗೊರೆ ನೀಡುವ ಘಟನೆಗಳು ಕೂಡ ನಡೆಯುತ್ತದೆ. ಇದಕ್ಕಾಗಿ ಸರಕಾರ ಕೆಲವೊಂದು ಕಟ್ಟು ನಿಟ್ಟಿನ ನಿಯಮ ವನ್ನು ಕೂಡ ಜಾರಿಗೆ ತರುತ್ತದೆ.‌ ಆದ್ರೆ ಈ ಚುನಾವಣೆ ಸಂದರ್ಭದಲ್ಲಿ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು.‌ ಈ ಬಗ್ಗೆ ಮಾಹಿತಿ ಇಲ್ಲಿದೆ

ಎಷ್ಟು ಹಣ ಇಡಬಹುದು?

ಚುನಾವಣೆ (Election 2024) ಸಂದರ್ಭದಲ್ಲೂ ನೀವು ಗಳಿಸಿದ ಹಣವನ್ನು ನಿಮ್ಮ ಮನೆಯಲ್ಲಿ ನಗದು ರೂಪದಲ್ಲಿ ಇಡಬಹುದು.‌ ಇದಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸುವುದಿಲ್ಲ. ಆದರೆ ಆದಾಯ ತೆರಿಗೆ ಪ್ರಕಾರ ಇದಕ್ಕೆ ಕೆಲವೊಂದು ಷರತ್ತು ಇರುತ್ತದೆ.

Image Source: taxconcept

advertisement

ಏನು ನಿಯಮ ಇದೆ?

ನೀವು ಮನೆಯಲ್ಲಿ ಈ ಸಂದರ್ಭದಲ್ಲಿ ಎಷ್ಟೆ ಹಣ ಇಡಬಹುದು. ಆದರೆ ಆದಾಯ ತೆರಿಗೆ, ಅಧಿಕಾರಿಗಳು ತನಿಖೆ ನಡೆಸಿದಾಗ ಈ ಹಣ ಎಲ್ಲಿಂದ ಬಂತು, ಇದರ ಮೂಲವೇನು? ದಾಖಲೆ ಏನು ಎಂಬುದನ್ನು ನೀವು ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕು ಮತ್ತು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು.

ಐಟಿಆರ್ ಘೋಷಣೆ ಮಾಡಬೇಕು

ನೀವು ನಿಮ್ಮ ಆದಾಯದ ವಿವರಗಳನ್ನು ನಮೂದಿಸಿ ITR ಸಲ್ಲಿಕೆ ಮಾಡುವುದು ಕೂಡ ಈ ಚುನಾವಣೆ ಸಂದರ್ಭದಲ್ಲಿ ಕಡ್ಡಾಯವೇ ಆಗಿದೆ. ಒಂದು ವೇಳೆ ನೀವು ಸಲ್ಲಿಸದೇ ಇದ್ದಲ್ಲಿ ದಂಡವನ್ನೂ ಹಾಕಲಾಗುತ್ತದೆ.

Election 2024 ನಿಯಮ:

  • ನೀವು‌ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಉಡುಗೊರೆ, ಆಸ್ತಿ ವಹಿವಾಟುಗಳಿಗೆ ಸರ್ಕಾರಕ್ಕೆ ತೆರಿಗೆ ಕಟ್ಟಲೇಬೇಕಾಗುತ್ತದೆ.
  • ನೀವು 50,000 ರೂಪಾಯಿಗಿಂತ ಹೆಚ್ಚಿನ ನಗದು ಠೇವಣಿಗೆ ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಸಲ್ಲಿಕೆ ಕಡ್ಡಾಯ
  • ನೀವು ಯಾವುದೇ ಸಾಲ ಅಥವಾ ಠೇವಣಿಗಾಗಿ ಒಬ್ಬ ವ್ಯಕ್ತಿಯಲ್ಲಿ 20,000 ರೂಗಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಸ್ವೀಕಾರ ಮಾಡುವಂತಿಲ್ಲ.

advertisement

Leave A Reply

Your email address will not be published.