Karnataka Times
Trending Stories, Viral News, Gossips & Everything in Kannada

RTC: ನಿಮ್ಮ RTC ಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಹೀಗೆ ಚೆಕ್ ಮಾಡಿ

advertisement

ಇತ್ತೀಚಿನ ದಿನಗಳಲ್ಲಿ ಸರ್ಕಾರವು ಎಲ್ಲಾ ರೀತಿಯಾದಂತಹ ದಾಖಲೆಗಳಿಗೂ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವಂತೆ ಸೂಚನೆ ನೀಡುತ್ತಿದೆ. ಅದರಂತೆ ಇದೀಗ ಜಮೀನು ಮತ್ತು ಇತರ ಆಸ್ತಿಯ ಪಹಣಿ (Pahani) ಯೊಂದಿಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವಂತೆ ಆದೇಶ ನೀಡಿದೆ. ಕಾರಣ ಸರ್ಕಾರವು ಭೂಮಿಗೆ ಸಂಬಂದಿಸಿದ ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತಂದರೆ ಅದರಿಂದ ನೇರವಾಗಿ ಲಾಭವನ್ನು ಪಡೆಯಲು ಹಾಗೂ ಸರ್ಕಾರಕ್ಕೆ ದಾಖಲೆಗಳನ್ನು ನೀಡಲು ಈ ಆಧಾರ್ ಲಿಂಕ್ ಸಹಾಯಕವಾಗಲಿದೆ.

ಮೊಬೈಲ್ ನ ಮೂಲಕವೇ ಪಹಣಿ RTC ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬಹುದು:

 

Image Source: The New Indian Express

 

advertisement

ಇನ್ನು ಸರ್ಕಾರದ ಆದೇಶದಂತೆ RTC ಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಲು ಸುಲಭವಾದ ದಾರಿಯನ್ನು ಸರ್ಕಾರವೇ ಸೂಚಿಸಿದೆ. ಇನ್ನು ಸರ್ಕಾರವು ಈ ಆಧಾರ್ ಲಿಂಕ್ (Aadhaar Card) ಗೆ ಸಂಬಂದಿಸಿದಂತೆ ಆನ್ ಲೈನ್ ವೆಬ್ ಸೈಟ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಪಹಣಿ (Pahani) ಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಲು ಸರ್ಕಾರದ ಭೂಮಿ ನಾಗರಿಕ ಸೇವೆಗಳ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ಲಿಂಕ್ ನಾ ಮೂಲಕ ಅರ್ಜಿ ಸಲ್ಲಿಸಬಹುದು.

ಇನ್ನು ಅರ್ಜಿ ಸಲ್ಲಿಸಲು ನಿಮ್ಮ ಮೊಬೈಲ್ ನಂಬರ್, ಪಹಣಿಯ ಪತ್ರ, ಇವುಗಳ ಜೊತೆಗೆ ನಿಮ್ಮ ಮೊಬೈಲ್ ನಲ್ಲಿ ನೀಡಲಾಗುವ Captcha ಇವುಗಳನ್ನು ಸರಿಯಾಗಿ ದಾಖಲಿಸಬೇಕು. ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬರುವಂತಹ e-KYC ಸರ್ವೀಸ್ ನಾ OTP ಅನ್ನು ನೀಡಿ ರಿಜಿಸ್ಟರ್ ಮಾಡಬೇಕು. ಅದರ ಜೊತೆಗೆ ಲಿಂಕ್ ಮಾಡಲು ಬಯಸಿರುವ ಸರ್ವೇ ನಂಬರ್ ದಾಖಲಿಸಿ, ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ OTP ಬರುತ್ತದೆ ಅದನ್ನು ದಾಖಲಿಸಿ ಲಿಂಕ್ ಮಾಡಿಕೊಳ್ಳಬಹುದಾಗಿದೆ, ಒಂದುವೇಳೆ ಈಗಾಗಲೇ ಆಧಾರ್ ಕಾರ್ಡ್ ಲಿಂಕ್ ಆಗಿದ್ದಲ್ಲಿ ಲಿಂಕ್ ಆಗಿದೆ ಎಂದು ತೋರಿಸಲಾಗುತ್ತದೆ.

ಈ ರೀತಿಯಾಗಿ ಸರಿಯಾಗಿ ದಾಖಲೆಗಳನ್ನು ನೀಡುವ ಮೂಲಕ ನಾವು ಪಹಣಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬಹುದು. ಇದರಿಂದ ಮುಂದೆ ಬರುವಂತಹ ಎಲ್ಲಾ ಸೌಲಭ್ಯಗಳು ಸುಲಭವಾಗಿ ಮತ್ತು ನೇರವಾಗಿ ಸಿಗಲಿದ್ದು, ಇನ್ನು ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಂಡವರಿಗೆ ಅಥವಾ ಸರ್ಕಾರದ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳುವವರಿಗೆ ಮತ್ತು ಅಕ್ರಮವಾಗಿ ಭೂಮಿಯ ಆಸ್ತಿಯನ್ನು ಪಡೆದವರಿಗೆ ಈ ಆದೇಶವು ಉರುಲಾಗಲಿದೆ.

advertisement

Leave A Reply

Your email address will not be published.