Karnataka Times
Trending Stories, Viral News, Gossips & Everything in Kannada

Drought Relief: ಬರಪರಿಹಾರ ಮೊತ್ತಕ್ಕೆ ಕಾಯುತ್ತಿದ್ದವರಿಗೆ ಹೊಸ ಅಪ್ಡೇಟ್! ಕೂಡಲೇ ಈ ಕೆಲಸ ಮಾಡಿ

advertisement

ಈ ಬಾರಿ ಸರಿಯಾಗಿ ಮಳೆ ಬಾರದೇ ರೈತರಿಗೆ ಬೆಳೆ ಬೆಳೆಯಲು ತುಂಬಾನೆ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಅಕಾಲಿಕ ಹವಾಮಾನ ಬೆಳೆ ನಷ್ಟಕ್ಕೆ ಮೂಲ ಕಾರಣವಾಗುತ್ತಿದ್ದು ಬರಪರಿಹಾರ ಕಾಣುವ ಮೂಲಕವಾದರೂ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಲ್ಲಿ ಇದ್ದ ಕೆಲವು ರೈತರಿಗೆ ಅತ್ತ ಬರ ಪರಿಹಾರವು ಬಂದಿಲ್ಲ ಇತ್ತ ಬೆಳೆಯ ಫಲವು ಸಿಕ್ಕಿಲ್ಲ. ಇನ್ನು ಬರ ಪರಿಹಾರಕ್ಕೆ (Drought Relief) ಅರ್ಜಿ ಹಾಕಿದ್ದ ರೈತರ ತಮ್ಮ ಅರ್ಜಿ ಸ್ಥಿತಿ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದಿಂದ ಅನೇಕ ಸಲ ಮನವಿ

ರಾಜ್ಯದ ಬಹುತೇಕ ಕಡೆಯಲ್ಲಿ ಬರಗಾಲ ಪರಿಸ್ಥಿತಿ ಇದ್ದು ಬರ ಪರಿಹಾರ ನಿರೀಕ್ಷೆ ಮಾಡಿದ್ದ ಜನರಿಗೆ ಇನ್ನೂ ಕೂಡ ಭರವಸೆ ಈಡೇರಲಿಲ್ಲ. ರಾಜ್ಯದ 223 ತಾಲೂಕಿನಲ್ಲಿ ಬರ ಪರಿಹಾರವನ್ನು ಘೋಷಣೆ ಮಾಡಿದ್ದರು ಮೊತ್ತ ಮಾತ್ರ ಇನ್ನೂ ಕೂಡ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರಕ್ಕೆ ಬರಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಅನೇಕ ಸಲ ಮನವಿ ಮಾಡಿದ್ದರೂ ಕೇಂದ್ರ ಸರಕಾರ ಯಾವುದೇ ವಿಧವಾಗಿ ಈ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಕಂದಾಯ ಸಚಿವರು ಇತ್ತೀಚೆಗಷ್ಟೇ ಹೇಳಿದ್ದರು.

Image Source: Tribune India

ಕಂದಾಯ ಸಚಿವರಿಂದ ಸ್ಪಷ್ಟನೆ

advertisement

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ಬರಪರಿಹಾರದ (Drought Relief) ವಿಚಾರದ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ಸುದ್ದಿಗೋಷ್ಠಿ ಕರೆದು ಮಾಧ್ಯಮದವರ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಸರಕಾರ ಕೇಂದ್ರ ಸರಕಾರಕ್ಕೆ ಅನೇಕ ಸಲ ಮನವಿ ಮಾಡಿದೆ ಆದರೆ ಯಾವುದೇ ರೀತಿ ಸಹಕಾರ ಸಿಕ್ಕಿಲ್ಲ ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲದಿಂದಲೇ ಮೊದಲ ಹಂತದ ಪರಿಹಾರ ನೀಡಲು ಮುಂದಾಗಿದೆ. ಇನ್ನು 4 ದಿನದ ಒಳಗೆ ರೈತರಿಗೆ 2000 ರೂಪಾಯಿ ರಾಜ್ಯದಿಂದ ಬರಗಾಲ ಪರಿಹಾರ ಮೊತ್ತವಾಗಿ ಸಿಗಲಿದೆ ಎಂದರು.

ಎಷ್ಟು ಪರಿಹಾರ ಸಿಗಲಿದೆ?

ರಾಜ್ಯದ 223 ತಾಲೂಕಿನಲ್ಲಿ ಬರಗಾಲ ಪರಿಹಾರವನ್ನು ಘೋಷಣೆ ಮಾಡಲಾಗಿದ್ದು, ಮಳೆಯ ಕೊರತೆ ಕಾರಣ ರಾಜ್ಯದಲ್ಲಿ 48 ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆ ನಾಶ ವಾಗಿವೆ. ಕೇಂದ್ರ ಸರಕಾರದಿಂದ 4,663 ಕೋಟಿ ರೂಪಾಯಿ ಅನ್ನು ಬರಗಾಲ ಪರಿಹಾರವಾಗಿ ಕೇಳಿದ್ದು ಎರಡು ಹೆಕ್ಟೇರ್ ಭೂ ಪ್ರದೇಶಕ್ಕೆ ಮಾತ್ರವೇ ಬರಗಾಲ ಬೆಳೆ ಪರಿಹಾರ ಧನ ಬರಲಿದೆ. ಕೇಂದ್ರದ ಮೊತ್ತ ಇನ್ನಷ್ಟೇ ಬರಬೇಕಿದ್ದು ಜನರ ಸಂಕಷ್ಟ ಪರಿಹಾರಕ್ಕಾಗಿ ರಾಜ್ಯ ಸರಕಾರದಿಂದ ಅಷ್ಟೆ ಹಣ ಬಿಡುಗಡೆ ಗೊಂಡಿದೆ.

Image Source: Visual Stock

ಹೀಗೆ ಮಾಡಿ

ನೀವು ಕೂಡ ಬರಗಾಲ ಪರಿಹಾರಕ್ಕಾಗಿ ಅರ್ಜಿ ಹಾಕಿದ್ದರೆ ನಿಮ್ಮ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಿರಿ. ಸರಕಾರದ ಅಧಿಕೃತ ವೆಬ್‌ಸೈಟ್‌ ಆದ https://parihara.Karnataka.gov.in ಇದಕ್ಕೆ ಭೇಟಿ ನೀಡಿ ಬಳಿಕ ಯಾವ ವರ್ಷ ಎಂದು ನಮೂದಿಸಿ, 2023-24ನ್ನು ಆಯ್ಕೆ ಮಾಡಿ. ಇದರಲ್ಲಿ ಮುಂಗಾರು ಆಯ್ಕೆ ಇರಲಿದ್ದು ಬಳಿಕ ಬರ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಅದರಲ್ಲಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿ ನಂತರದಲ್ಲಿ ಆಧಾರ್ ಕಾರ್ಡ್ ನಂಬರ್, ಐಡಿನಂಬರ್ ಹಾಗೂ ಫೋನ್ ನಂಬರ್, ಸರ್ವೆ ನಂಬರ್ ಇತ್ಯಾದಿ ಮಾಹಿತಿ ಸಲ್ಲಿಸಬೇಕು. ಹೀಗೆ ನಿಮ್ಮ ಅರ್ಜಿ ಪ್ರಕ್ರಿಯೆ ಸರಿಯಿದ್ದರೆ ಪ್ರೊಸೆಸ್ ಎಂದು ಬರಲಿದೆ.

advertisement

Leave A Reply

Your email address will not be published.