Karnataka Times
Trending Stories, Viral News, Gossips & Everything in Kannada

Hyundai Car: 20Km ವರೆಗೆ ಮೈಲೇಜ್ ಕೊಡುವ ಬಡವರ ಮರ್ಸಿಡಿಸ್ ಬೆಂಜ್! ಈ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

advertisement

ಇಂದು ಪ್ರತಿಯೊಂದು ಕುಟುಂಬಕ್ಕೂ ಕೂಡ ಕಾರು ಖರೀದಿಯ ಬಗ್ಗೆ ಕ್ರೇಜ್ ಇದ್ದೆ ಇರುತ್ತದೆ. ಯಾಕಂದ್ರೆ ಮನೆಯಲ್ಲೇ ಒಂದು ವಾಹನ ಇದ್ದರೆ ಪ್ರಯಾಣಕ್ಕೂ ಸುಲಭ, ಬಸ್ ಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ.‌ ಅದೇ ರೀತಿ ಇಂದು ಕಾರು ಖರೀದಿಗೂ ಹೆಚ್ಚಿನ ಜನರು ಆಸಕ್ತಿ ತೋರುತ್ತಾರೆ. ಕಾರು ಖರೀದಿ ಅಂದಾಗ ಅದರ ಪೀಚರ್ಸ್, ಬೆಲೆ, ಗುಣಮಟ್ಟ ಎಲ್ಲದರ ಬಗ್ಗೆಯು ಯೋಚಿಸಿ ಬೇರೆಯವರ ಜೊತೆ ತಿಳಿದುಕೊಂಡು ಖರೀದಿ ಮಾಡುತ್ತೇವೆ. ಇಂದು ಮಾರುಕಟ್ಟೆಗೂ ನನಾ ರೀತಿಯ ಮಾಡೆಲ್ ನ ಕಾರುಗಳು ಎಂಟ್ರಿ ನೀಡಿದ್ದು, ಇದೀಗ ನೂತನ ವೈಶಿಷ್ಟ್ಯ ದೊಂದಿಗೆ ರಿಯಾಯಿತಿ ದರದಲ್ಲಿ ಹೊಸ ಕಾರೊಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

ಯಾವುದು ಈ ಕಾರು?

ದೇಶದ ಪ್ರತಿಷ್ಠಿತ ಕಾರು ಕಂಪನಿಯಾದ ಹ್ಯುಂಡೈ ಹೊಸ ಕಾರ (Hyundai Car)ನ್ನು ಅನಾವರಣ ಮಾಡಲಿದ್ದು ಈ ಕಾರು ವಿವಿಧ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದೆ. ಹೌದು ಹ್ಯುಂಡೈ ವರ್ನಾ (Hyundai Verna) ಕಾರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು ವೈಶಿಷ್ಟ್ಯ ಕೂಡ ವಿಭಿನ್ನ ವಾಗಿದೆ.

Image Source: CarWale

advertisement

ವೈಶಿಷ್ಟ್ಯ ಹೇಗಿದೆ?

  • ಈ ಕಾರು 1482 ಸಿಸಿಯಿಂದ 1497 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು 157.57 ಬಿಎಚ್‌ಪಿ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಪಡೆದು ಕೊಂಡಿದೆ.
  • ಈ ಹ್ಯುಂಡೈ ವೆರ್ನಾ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಲಿದ್ದು ದೂರದ ಪ್ರಯಾಣಕ್ಕೂ ಅನುಕೂಲಕರ ಮತ್ತು ಪ್ರಯಾಣ ಮಾಡಲು ಕೂಡ ಆರಾಮದಾಯಕ ಅನುಭವ ನೀಡಲಿದೆ.
  • ಈ ಕಾರಿನಲ್ಲಿ ಟ್ರಂಕ್ ಓಪನಿಂಗ್, ಫೋನ್ ಹೋಲ್ಡರ್, ಮಲ್ಟಿ ಬಾಟಲ್ ಹೋಲ್ಡರ್, ಮಲ್ಟಿ-ಪರ್ಪಸ್ ಕನ್ಸೋಲ್ ಸ್ಟೋರೇಜ್ ಆಪ್ಟಿಮೈಸೇಶನ್ ಕೂಡ ಇರಲಿದ್ದು ವಿಶೇಷ ಪಿಚರ್ಸ್ ಅನ್ನು ಈ ಕಾರು ಒಳಗೊಂಡಿದೆ.
  • ಅದೇ ರೀತಿ ಈ ಕಾರು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಡಿಸಿಟಿ ಮತ್ತು ಸಿವಿಟಿ ಆಯ್ಕೆಗಳು ಕೂಡ ಇದರಲ್ಲಿ ಇರಲಿದೆ
  • ಅದೇ ರೀತಿ ಈ ಕಾರು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಮೂರು ಪಾಯಿಂಟ್ ಸೀಟ್‌ಬೆಲ್ಟ್‌ ನಂತಹ ವೈಶಿಷ್ಟ್ಯಗಳನ್ನೂ ಕೂಡ ಈ ಕಾರು ಹೊಂದಿದೆ.

Hyundai Car ಖರೀದಿಗೆ‌ ರಿಯಾಯಿತಿ ಇದೆ:

ಹುಂಡೈ ವೆರ್ನಾ (Hyndai Verna) ಕಾರಿನ ಬೆಲೆ 11 ಲಕ್ಷ. ಆಗಿದ್ದು ಈ ಕಾರಿನ ಖರೀದಿ ಮೇಲೆ 30,000 ನೇರ ರಿಯಾಯಿತಿ, 25,000 ವಿನಿಮಯ ಬೋನಸ್ ಕೂಡ ಇರಲಿದೆ. ಈ ರಿಯಾಯಿತಿ ಮೊತ್ತದಿಂದ ನಿಮಗೆ 55,000 ರೂ.ವರೆಗೆ ಉಳಿಕೆ ಯಾಗಬಹುದು. ಈ ರಿಯಾಯಿತಿಯ ಅವಕಾಶ ಮಾರ್ಚ್ 31, 2024 ರವರೆಗೆ ಲಭ್ಯವಿದ್ದು ನೀವು ಕಾರು ಖರೀದಿ ಮಾಡಲು ಪ್ಲಾನ್ ಮಾಡಿದ್ದರೆ ಇದು ಉತ್ತಮ ಅವಕಾಶ ಆಗಿದೆ.

advertisement

Leave A Reply

Your email address will not be published.