Karnataka Times
Trending Stories, Viral News, Gossips & Everything in Kannada

Dinesh Karthik: ಯಾವುದೇ ಕಾರಣಕ್ಕೂ ದಿನೇಶ್ ಕಾರ್ತಿಕ್ ಅವರನ್ನು T20 ವಿಶ್ವಕಪ್ ಗೆ ಸೆಲೆಕ್ಟ್ ಮಾಡಬೇಡಿ ಎಂದ ಭಾರತದ ಈ ಕ್ರಿಕೆಟಿಗ!

advertisement

ಐಪಿಎಲ್ 2024ರಲ್ಲಿ ಆರ್ಸಿಬಿ ತಂಡದ (RCB Team) ಆಪತ್ಬಾಂಧವರಾಗಿ ಮೂಡಿ ಬಂದಿರುವಂತಹ ದಿನೇಶ್ ಕಾರ್ತಿಕ್ ಈ ಸೀಸನ್ ನಲ್ಲಿ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕೆಳ ಕ್ರಮಾಂಕದಲ್ಲಿ (Lower Order) ಬಂದರೂ ಕೂಡ ಯಾವುದೇ ಪ್ರೆಷರ್ ಇಲ್ಲದೆ ಮನಸ್ಪೂರ್ವಕವಾಗಿ ಬ್ಯಾಟಿಂಗ್ ಆಡುತ್ತಾ, ಅತಿ ಹೆಚ್ಚು ರನ್ ಗಳಿಸಿ ಐಪಿಎಲ್ನ ಅದ್ಬುತ ಫಿನಿಶಿಯಲ್ (Amazing Finisher) ಎಂಬ ಪಟ್ಟವನ್ನು ಪಡೆದುಕೊಂಡಿರುವಂತಹ ದಿನೇಶ್ ಕಾರ್ತಿಕ್ (Dinesh Karthik) ಅವರು t20 ವರ್ಲ್ಡ್ ಕಪ್ (T20 World Cup) ನಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹಲವೆಡೆ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಗೊಳಗಾಗುತಿತ್ತು.

ಈ ಕುರಿತು ಮಾಜಿ ಕ್ರಿಕೆಟಿಗ ಸುಬ್ರಮಣ್ಯo ಬದರಿನಾಥ್ (Subramaniam Badrinath) ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಆಗಿರುವಂತಹ ಡಿಕೆ (Dinesh Karthik) T20 ವರ್ಲ್ಡ್ ಕಪ್ನಲ್ಲಿ ಟೀಮ್ ಇಂಡಿಯಾಗೆ ಸೇರ್ಪಡೆಯಾಗಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೌದು ಸ್ನೇಹಿತರೆ ಹನ್ನೊಂದನೇ ಪ್ರಮಾಣದಲ್ಲಿ ಫಿನಿಶಿಯಲ್ ಆಗಿ ಸ್ಥಾನ ಪಡೆದುಕೊಳ್ಳುವ ಡಿಕೆ ಅವರಿಗೆ ಈಗಾಗಲೇ 38 ವರ್ಷ ವಯಸ್ಸಾಗಿದ್ದು, ಅವರಿಗಿಂತ ಕಿರಿಯ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಲಹೆಯನ್ನು ಮಾಜಿ ಕ್ರಿಕೆಟಿಗ ನೀಡಿದ್ದಾರೆ.

ಡಿಕೆ ಗಿಂತ ಕಿರಿಯ ಆಟಗಾರರಿಗೆ ಅವಕಾಶ ಕೊಡಿ ಎಂದ ಬದರಿನಾಥ್:

 

Image Source: dtnext

 

“ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿದರೆ ಅವರು ಬೆಂಚ್ ಮೇಲೆ ಕುಳಿತುಕೊಳ್ಳದೆ ಎಲ್ಲ ಪಂದ್ಯಗಳನ್ನು ಆಡಬೇಕು ಆದರೆ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡರೆ, ಭಾರತದ ಕಿರಿಯ ಆಟಗಾರರಿಗೆ 11ನೇ ಸ್ಥಾನದಲ್ಲಿ ಅವಕಾಶವಿದೆ, ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಇರಿಸಿದರೆ ಅವರ ಉಪಯುಕ್ತತೆಯಲ್ಲಿ ಕೊರತೆ ಉಂಟಾಗಬಹುದು.

ನಾನು ಉದ್ಯೋನ್ಮುಖ ಫಿನಿಷರನ್ನು ಉತ್ತೇಜಿಸಲು ಬಯಸುತ್ತೇನೆ ತಂಡವು ಕಾರ್ತಿಕ್ ಅವರನ್ನು ಹನ್ನೊಂದರಲ್ಲಿ ಫಿನಿಷರ್ (Finisher) ಎಂದು ನೋಡಿದರೆ ಅವರ ಆಯ್ಕೆಯು ಸಮರ್ಥನೆ ಆಗಿರುತ್ತದೆ. ಅವರ ಪಾತ್ರವನ್ನು ಮತ್ತಷ್ಟು ಅಚ್ಚುಕಟ್ಟಾಗಿ ನಿರ್ವಹಿಸಲು ಎಷ್ಟೊಂದು ಆಯ್ಕೆಗಳಿವೆ” ಎಂದು ಸುಬ್ರಹ್ಮಣ್ಯ ಬದರಿನಾಥ್ ತಮ್ಮ ಸಲಹೆಯನ್ನು ನೀಡಿದ್ದಾರೆ.

 

advertisement

Image Source: The Quint

 

ಹೀಗೆ ತಮ್ಮ ಮಾತನ್ನು ಮುಂದುವರಿಸಿದ ಅವರು “ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡರ್ ಸಾಮರ್ಥ್ಯಗಳು ಅವರನ್ನು ಭಾರತೀಯ ಕ್ರಿಕೆಟ್ ನಲ್ಲಿ ಬಹಳ ಅಪರೂಪವಾಗಿಸುತ್ತದೆ. ಆದ್ದರಿಂದ ಹಾರ್ದಿಕ್ ಪಾಂಡ್ಯ ಅವರು ಕೂಡ 11ರಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಇನ್ನು ಸಿ ಎಸ್ ಕೆ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಜಡೇಜಾ (Jadeja) ಕೂಡ ಇತ್ತೀಚಿಗೆ ಫಿನಿಷಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಕೆಕೆಆರ್ ತಂಡದಲ್ಲಿ ಬಲಶಾಲಿ ಬ್ಯಾಟ್ಸ್ಮನ್ ಆಗಿ ಮಾರ್ಪಟ್ಟಿರುವ ರಿಂಕು ಸಿಂಗ್ (Rinku Singh) ಕೂಡ ಅತ್ಯುತ್ತಮ ಆಯ್ಕೆ.

ಈ ಎಲ್ಲಾ ಆಟಗಾರರ ನಡುವೆ ಡಿಕೆ ಆಯ್ಕೆಯಾಗುವುದು ಕಠಿಣವಾಗಿದೆ. ಯಥಾಪ್ರಕಾರ ಕೀಪರ್ ಆಗಿ ರಿಷಬ್ ಪಂತ್(Rishabh Pant) ಇರುವುದರಿಂದ, ದಿನೇಶ್ ಕಾರ್ತಿಕ್ (Dinesh Karthik) ಅವರಿಗೆ ಕೀಪಿಂಗ್ ಮಾಡುವ ಕೆಲಸ ಇರುವುದಿಲ್ಲ, ಆಯ್ಕೆದಾರರು ಯಾವ ಸ್ಥಾನವನ್ನು ತುಂಬಲು ಬಯಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ” ಎಂದರು.

ವೈಯಕ್ತಿಕವಾಗಿ ಟಿ20 ಯಲ್ಲಿ ಡಿಕೆ ಬೇಡ ಎಂದು ಆಸ್ಟ್ರೇಲಿಯಾದ ಆಟಗಾರ:

ಇದರೊಂದಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಆರನ್ (Aaron Finch) ಕೂಡ ದಿನೇಶ್ ಕಾರ್ತಿಕ್ (Dinesh Karthik) ಅವರ ಕುರಿತು ಮಾತನಾಡಿದ್ದು, ಐಪಿಎಲ್ ನಲ್ಲಿ ಡಿಕೆ ಆರ್ಸಿಬಿ ತಂಡದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ ಆದರೆ ಶುಭ್ಮನ್ ಗಿಲ್, ರಿಷಬ್ ಪಂತ್, ರಿಂಕು ಸಿಂಗ್ ಅವರಂತಹ ಪ್ರತಿಭಾವಂತ ಯುವಕರು ಭಾರತೀಯ ಕ್ರಿಕೆಟ್ನ ಭವಿಷ್ಯ ಎಂದು ನಾನು ನಂಬುತ್ತೇನೆ.

ನಾನು ವೈಯಕ್ತಿಕವಾಗಿ ವಿಶ್ವಕಪ್ ನಲ್ಲಿ ಡಿಕೆಯನ್ನು ತಂಡಕ್ಕೆ ಆಯ್ಕೆ ಮಾಡುವುದಿಲ್ಲ, ಏಕೆಂದರೆ ಈ ಯುವ ಆಟಗಾರರು (Young Players) ಮುಂಬರುವ ವರ್ಷಗಳಲ್ಲಿ ಭಾರತದ ತಂಡವನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

advertisement

Leave A Reply

Your email address will not be published.