Karnataka Times
Trending Stories, Viral News, Gossips & Everything in Kannada

RCB: 6 ರಲ್ಲಿ 5 ಪಂದ್ಯ ಸೋತ RCB ಪ್ಲೆ ಆಫ್ಸ್ ಗೆ ಬರುವ ಚಾನ್ಸ್ ಇದೆಯಾ? ಇಲ್ಲಿದೆ ಲೆಕ್ಕಾಚಾರ

advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವಿಶೇಷವಾಗಿ ಲಾಯಲ್ ಅಂದರೆ ನಿಷ್ಠೆಯ ವಿಚಾರಕ್ಕೆ ಬಂದರೆ ಆರ್ಸಿಬಿ ಅಭಿಮಾನಿಗಳನ್ನು ಮೀರಿಸುವಂತಹ ಮತ್ತೊಂದು ಐಪಿಎಲ್ ಕ್ರಿಕೆಟ್ ತಂಡದ ಅಭಿಮಾನಿಗಳು ಇಲ್ಲ ಅಂತ ಹೇಳಬಹುದು. ಇಷ್ಟೆಲ್ಲ ಇದ್ದರೂ ಕೂಡ 2008 ರಿಂದ ಪ್ರಾರಂಭವಾಗಿರುವಂತಹ ಐಪಿಎಲ್ ನಲ್ಲಿ ಇವತ್ತಿನವರೆಗೂ ಕೂಡ ಆರ್ಸಿಬಿ (RCB) ಒಮ್ಮೆಯೂ ಕಪ್ ಗೆದ್ದಿಲ್ಲ.

ಈ ಬಾರಿ ಹೆಸರು ಹಾಗೂ ಬಟ್ಟೆ ಚೇಂಜ್ ಮಾಡಿದ್ರೆ ಗೆಲ್ಲಬಹುದು ಅಂತ ಯಾರೋ ಹೇಳಿದ್ರು ಅಂತ ಅನ್ಸುತ್ತೆ ಅದನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿದ್ದಾಯ್ತು. ಆದರೆ ಅದು ಕೂಡ ಪರಿಣಾಮ ಬೀರೋ ಹಾಗೂ ಕಾಣುತ್ತಿಲ್ಲ.

ಯಾಕೆಂದರೆ ಚೆನ್ನೈ ವಿರುದ್ಧ ಆಡಿರುವಂತಹ ಮೊದಲ ಪಂದ್ಯದಿಂದ ಪ್ರಾರಂಭಿಸಿ ಇದುವರೆಗೆ ಹಾಡಿರುವಂತಹ ಆರು ಪಂದ್ಯಗಳಲ್ಲಿ ಅದಾಗಲೇ 5 ಪಂದ್ಯಗಳಲ್ಲಿ ಸೋತಿದ್ದಾಗಿದೆ. ಆರ್‌ಸಿಬಿ (RCB) ತಂಡದ ಟೀಮ್ ಮ್ಯಾನೇಜ್ಮೆಂಟ್ ಪ್ರಮುಖವಾಗಿ ಇಲ್ಲಿ ತಂಡದ ಆಟಗಾರರನ್ನು ಆಯ್ಕೆ ಮಾಡುವಾಗ ಮಾಡುತ್ತಿರುವಂತಹ ತಪ್ಪು ಪದೇಪದೇ ಎದ್ದು ಕಾಣುತ್ತಿದೆ. ಈ ಬಾರಿ ಕೂಡ ಯಾವುದೇ ಉತ್ತಮ ಬೌಲಿಂಗ್ ಪ್ರದರ್ಶನ ತಂಡದಿಂದ ಕಾಣುತ್ತಿಲ್ಲ.

ಇನ್ನಾದ್ರೂ ಈ ಬಾರಿ ಪ್ಲೇ ಆಫ್ ತಲುಪೋದಕ್ಕೆ ಚಾನ್ಸ್ ಇದೆಯಾ?

 

Image Source: Times Now

 

advertisement

ಈ ಪ್ರಶ್ನೆಗಳಿಗೆ ಅದಾಗಲೇ ನಿಜವಾದ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ ಎಂಬುದಾಗಿ ಭಾವಿಸುತ್ತೇವೆ. ಹೌದು ಆಡಿರುವಂತಹ ಆರರಲ್ಲಿ 5 ಪಂದ್ಯಗಳಲ್ಲಿ ಸೋಲುವ ಮೂಲಕ ಈಗಾಗಲೇ ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆ ಸ್ಥಾನದಲ್ಲಿದೆ. ಇನ್ನುಳಿದಿರುವಂತಹ ಎಂಟು ಪಂದ್ಯಗಳಲ್ಲಿ ಕನಿಷ್ಠಪಕ್ಷ ಏಳು ಪಂದ್ಯಗಳನ್ನು ಗೆಲ್ಲಲೇ ಬೇಕಾದಂತಹ ಒತ್ತಡದಲ್ಲಿ ಆರ್‌ಸಿಬಿ ತಂಡ ಇದೆ.

ಎಲ್ಲದಕ್ಕಿಂತ ಪ್ರಮುಖವಾಗಿ ಇಷ್ಟೊಂದು ಪಂದ್ಯಗಳನ್ನು ಗೆದ್ರು ಕೂಡ ಬೇರೆ ತಂಡಗಳ ಗೆಲುವಿನ ಲೆಕ್ಕಾಚಾರ ಈ ಸಂದರ್ಭದಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಕೈಯಲ್ಲಿ ಕ್ಯಾಲ್ಕುಲೇಟರ್ ಹಿಡಿದುಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊದಗಿಸಲಿದೆ.

 

Image Source: Business Standard

 

ಕೇವಲ ಇಷ್ಟು ಮಾತ್ರವಲ್ಲದೆ ಆರ್‌ಸಿಬಿ (RCB) ತಂಡದ ಮುಂದಿನ ಪಂದ್ಯಗಳು ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಗಳಂತಹ ಬಲಿಷ್ಠ ತಂಡಗಳು ಜೊತೆಗೆ ಇದೆ. ಇನ್ನು ಚೆನ್ನೈ (CSK) ತಂಡದ ಜೊತೆಗೆ ಕೊನೆಯ ಪಂದ್ಯ ಕೂಡ ಇದೆ. ಹೀಗಾಗಿ ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಇಂತಹ ಪಂದ್ಯಗಳು ಸಿಕ್ಕರೆ ಆರ್ಸಿಬಿ ತಂಡ ಗೆಲ್ಲುವ ಸಾಧ್ಯತೆ ಕ್ಷೀಣಿಸುತ್ತಿದೆ.

ಹೀಗಾಗಿ ಈ ಬಾರಿಯ ಪ್ಲೇ ಆಫ್ ಹಂತದ ಕನಸನ್ನು ಆರ್ಸಿಬಿ ತಂಡ ಬಹುತೇಕ ಈಗಾಗಲೇ ಬಿಟ್ಟುಬಿಟ್ಟಿದೆ ಎಂದು ಹೇಳಬಹುದು. ಹೇಳ್ತಿರೋದು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಆಗುತ್ತಿರಬಹುದು ಆದರೆ ಇದೇ ಕಹಿಯಾದ ಸತ್ಯ.

advertisement

Leave A Reply

Your email address will not be published.