Karnataka Times
Trending Stories, Viral News, Gossips & Everything in Kannada

RCB 2024: ಸ್ಟಾರ್ ಆಟಗಾರರನ್ನು ಕೈಬಿಟ್ಟ RCB, ಉಳಿಸಿಕೊಂಡ ಆಟಗಾರರ ಲಿಸ್ಟ್ ಇಲ್ಲಿದೆ.

advertisement

ಈ ಬಾರಿ ವಿಶ್ವಕಪ್ ಇತ್ತೀಚೆಗಷ್ಟೇ ಮುಗಿದಿದ್ದು ಭಾರತೀಯರ ಪಾಲಿಗೆ ಇದೊಂದು ದೊಡ್ಡ ಶಾಕಿಂಗ್ ವಿಚಾರವಾಗಿತ್ತು. ವಿಶ್ವಕಪ್ ಕೊನೆ ಸೋಲಿನ ಬಳಿಕ ಜೋಶ್ ತುಂಬಲು ಈಗಾಗಲೇ ಟಿ20 ಆರಂಭ ಆಗಿದ್ದು ಬಳಿಕ ಮುಂದಿನ ವರ್ಷದ IPL ಗೆ ಕೂಡ ಸಿದ್ಧತೆ ನಡೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ IPLಹರಾಜಿಗೆ ಕೆಲ ದಿನ ಬಾಕಿಇದ್ದು ಈ ಬಾರಿ RCB ಯಲ್ಲಿ ಯಾರೆಲ್ಲ ಇರಬಹುದು ಎಂಬ ಕುತೂಹಲ ಮೂಡಿದೆ ಈ ಬಾರಿ ಆಟಗಾರರ ಪಟ್ಟಿಯ ಮಾಹಿತಿ ಇಲ್ಲಿದೆ.

ಹರಾಜು ಯಾವಾಗ?

ಈ ಬಾರಿ ಐಪಿಎಲ್ ಹರಾಜು ಸ್ವಲ್ಪ ವಿಶೇಷ ಎಂದು ಹೇಳಬಹುದು. BCCI ನ ಐಪಿಎಲ್ ಹರಾಜನ್ನು ಈ ಬಾರಿ ಬದಲಾಯಿಸಿದೆ. ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಐಪಿಎಲ್ 2024ರ ಹರಾಜನ್ನು ದುಬೈನಲ್ಲಿ ಡಿಸೆಂಬರ್ 19ರಂದು ನಡೆಸಲು ತೀರ್ಮಾನಿಸಲಾಗಿದೆ. ದುಬೈನ ಕೋಕ ಕೋಲಾ ಅರೇನಾದಲ್ಲಿ ನಡೆಯಲಿದೆ.

ಮೆಗಾ ಹರಾಜು

ಕಳೆದ ಬಾರಿ IPL ಹರಾಜನ್ನು ಇಸ್ತಂಬುಲ್ ನಲ್ಲಿ ನಡೆಸಲು ಆಯೋಜಿಸಲಾಗಿತ್ತು ಆದರೆ ಬಳಿಕ ಕೊಚ್ಚಿಯಲ್ಲಿ ನಡೆಸಿತು. ಆದರೇ ಈ ಬಾರಿ ವಿದೇಶದಲ್ಲಿ ಆಯೋಜನೆ ಮಾಡಿದೆ ಎಂದು ಹೇಳಬಹುದು. ಈ ಬಾರಿ ಪ್ರತೀ ಆಟಗಾರರಿಗೆ ಮೂರು ವರ್ಷದ ಒಪ್ಪಂದ ಮುಗಿಯುವ ಹಂತದಲ್ಲಿದೆ‌. ಹಾಗಾಗಿ ಮುಂದಿನ ವರ್ಷ ಮೆಗಾ ಹರಾಜು ಪ್ರಕ್ರಿಯೇ ಕೂಡ ಆರಂಭವಾಗಲಿದೆ.

advertisement

ಈ ಆಟಗಾರರು ಇರಲಿದ್ದಾರೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡ ಆಟಾಗಾರರ ಪಟ್ಟಿ ಈ ಕಳಗಿನಂತಿದೆ‌.
ಫಾಫ್ ಡುಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸೂಯೂಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ, ರಜನ್ ಕುಮಾರ್, ಕರಣ್ ಶರ್ಮಾ, ಮನೋಜ್ ಭಂಡಜೆ, ಮಯಾಂಕ್ ಡಗರ್, ವೈಶಾಕ್ ವಿಜಯ ಕುುಮಾರ್

ಅರ್ ಸಿ ಬಿ ತಂಡದಿಂದ ಹೊರ ಬಿದ್ದ ಆಟಗಾರರು

ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಸೋನು ಸಿಂಗ್, ಕೇದಾರ್ ಯಾದವ್,ಮಿಚೆಲ್ ಬ್ರಾಸ್‌ವೆಲ್, ಫಿನ್ ಅಲೆನ್, ವೇಯ್ನ್ ಪಾರ್ನೆಲ್, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಅವರು ಈಬಾರಿ RCB ತಂಡದಿಂದ ಹೊರ ಉಳಿಯಲಿದ್ದಾರೆ.

ಒಟ್ಟಾರೆಯಾಗಿ IPL ರೋಚಕತೆಗೂ ಮುನ್ನ ಪಂದ್ಯ ಆಡೋ ಲೀಸ್ಟ್ ಮಾತ್ರ ಬಹಳಷ್ಟು ಕುತೂಹಲಕ್ಕೆ ಕಾರಣ ಮಾಡಿದ್ದು ಯಾರೆಲ್ಲ ಫೈನಲ್ ಲೀಸ್ಟ್ ನಲ್ಲಿ ಬರ್ತಾರೆ ಎಂಬುದು ಹರಾಜಿನ ಬಳಿಕ ತಿಳಿದು ಬರಲಿದೆ. ನೀವು ಆರ್ ಸಿಬಿ ಫ್ಯಾನ್ ಆಗಿದ್ದಲ್ಲಿ ಈ ಬಾರಿ ಯಾರು ಐಪಿಎಲ್ ನಲ್ಲಿ ಆರ್ ಸಿಬಿ ಟೀಂ ನಲ್ಲಿ ಉಳಿಯಬೇಕು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ‌.

advertisement

Leave A Reply

Your email address will not be published.