Karnataka Times
Trending Stories, Viral News, Gossips & Everything in Kannada

Cash/Jewellery Limit: ವಿದೇಶಕ್ಕೆ ಪ್ರಯಾಣ ಮಾಡುವಾಗ ಎಷ್ಟು ಹಣ ಚಿನ್ನ ಕೊಂಡೊಂಯ್ಯಬಹುದು? ಇಲ್ಲಿದೆ ಹೊಸ ರೂಲ್ಸ್.

advertisement

ಇತ್ತೀಚಿನ ದಿನದಲ್ಲಿ ವಿದ್ಯಾಭ್ಯಾಸ, ಕೆಲಸ ಇನ್ನಿತರ ಕಾರಣಕ್ಕೆ ವಿದೇಶಕ್ಕೆ ತೆರುಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ UAE ಹೋಗುವವರ ಪ್ರಮಾಣ ಅಧಿಕವಾಗಿದೆ. ಅದೇ ರೀತಿ ಇನ್ನೊಂದು ದೇಶಕ್ಕೆ ಹೋಗುವಾಗ ಕೆಲ ನಿಯಮ ಅನ್ವಯವಾಗುವುದು. ವಿದೇಶಕ್ಕೆ ಪ್ರಯಾಣ ಮಾಡುವಾಗ ಮತ್ತು ವಿದೇಶದಿಂದ ತಾಯ್ನಾಡಿಗೆ ಬರುವಾಗ ಲಗೇಜ್ ಮಿತಿ ಹೇರಲಾಗಿದ್ದು ಅದನ್ನು ಪ್ರತಿ ಪ್ರಯಾಣಿಕರು ಪಾಲಿಸಲೇಬೇಕು.

ಅಪರಾಧ

ವಿದೇಶದಿಂದ ಚಿನ್ನ, ನಗದು, ವಜ್ರಾಭರಣ ಮತ್ತು ಮಾದಕ ವಸ್ತು ಕೊಂಡೊಂಯ್ಯುವುದು ನಿಷೇಧ ಎಂದು ತಿಳಿದಿದ್ದರೂ ಕೂಡ ಎಷ್ಟೋ ಜನ ವಿದೇಶದಿಂದ ಡ್ರಗ್ಸ್, ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುವ ಮೂಲಕ ಕಸ್ಟಂ ಇಲಾಖೆಯ ರೂಲ್ಸ್ ಅನ್ನು ಮುರಿಯುತ್ತಿದ್ದಾರೆ. ಅದೇ ರೀತಿ ವಿದೇಶದ ನಗದು , ಆಭರಣ ಕೊಂಡೊಂಯ್ಯುವುದು ಅಪರಾಧವಾಗಿದೆ. ಜೈಲು ಮತ್ತು ದಂಡ ಕಟ್ಟುವ ಅನೇಕ ಶಿಕ್ಷೆ ಕೂಡ ವಿಧಿಸಲಾಗುವುದು. ಹಾಗಾಗಿ ಈಗ ಕಸ್ಟಂ ಇಲಾಖೆ ಕೂಡ ತನ್ನ ನಿಯಮವನ್ನು ಬಿಗುವಾಗೇ ತಿಳಿಸುತ್ತಿದೆ.

ಈ ರೂಲ್ಸ್ ಕಡ್ಡಾಯ

ಕೆಲ ಸಂದರ್ಭದಲ್ಲಿ UAE ನಿವಾಸಿಗಳು ಅಥವಾ ಆ ದೇಶಕ್ಕೆ ಪ್ರಯಾಣ ಬೆಳಸಿದವರು ಅಲ್ಲಿನ ಕರೆನ್ಸಿ ಮೌಲ್ಯ DH 60,000 ಹೆಚ್ಚು ನಗದು ಕೊಂಡೊಯ್ಯುವಂತಿಲ್ಲ. ಅದೇ ರೀತಿ 60,000 ದಿರಮ್ ಗಿಂತ ಅಧಿಕ ಮೌಲ್ಯದ ಚಿನ್ನ, ವಜ್ರ ಅಥವಾ ಇತರ ವೈಭವಯುತ ಐಷರಾಮಿ ಮೌಲ್ಯದ ಹಣ ಕೊಂಡೊಯ್ಯುತಿಲ್ಲ. ಈ ಮೂಲಕ ಈ ರೂಲ್ಸ್ ಅನ್ನು ಫಾಲೋ ಮಾಡುವುದು ಕಡ್ಡಾಯವಾಗಿದೆ.

advertisement

ಮೊದಲೇ ತಿಳಿಸಬೇಕು

ಒಂದು ವೇಳೆ ಅಷ್ಟೇ ಮೌಲ್ಯದ ಅಂದರೆ 60,000 ದಿರಮ್ ಅಥವಾ ಅಷ್ಟೇ ಮೌಲ್ಯದ ಚಿನ್ನ , ವಜ್ರ ಕೊಂಡೊಯ್ಯಲೇ ಬೇಕೆಂದಿದ್ದರೆ ಮೊದಲೇ ಆ್ಯಪ್ ಮೂಲಕ ಕಸ್ಟಂ ಇಲಾಖೆಗೆ ಸೂಚನೆ ನೀಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ಅಪ್ಲಿಕೇಶನ್ ಅನ್ನು ಸಹ ಬಿಡಲಾಗಿದ್ದು ನಿಯಮ ಉಲ್ಲಂಘನೆ ಮಾಡದೇ ಪಾಲನೆ ಮಾಡಿದರೆ ಪ್ರಯಾಣಿಕರಿಗೆ ಒಳಿತು. ಅದರಲ್ಲಿ ಯಾಕಾಗಿ ಒಯ್ಯುತ್ತಿದ್ದಾರೆ ಮತ್ತು ಇತರ ಕಸ್ಟಂ ಸುಂಖ ಭರಿಸಿದ ಬಳಿಕ ಕೊಂಡೊಂಯ್ಯಲು ಸಹ ಅನುಮತಿ ಸಿಗಲಾಗುವುದು.

ಮಾಹಿತಿ ಒದಗಿಸುವುದು ಕಡ್ಡಾಯ

ಪ್ರಯಾಣಿಕರು ಭೂ ಗಡಿ, ವಿಮಾನ ಮತ್ತು ನೌಕಾ ನಡೆಯಲ್ಲಿ ಗಡಿ ದಾಟುವ ಮೊದಲು ತಮ್ಮ ಲಗೆಜ್ ಚೆಕ್ಕಿಂಗ್ ನೀಡುವುದು ಕಡ್ಡಾಯವಾಗಿದೆ. ಕೊಂಡೊಯ್ಯುವ ವಸ್ತುವಿನ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ಈ ಬಗ್ಗೆ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಕಸ್ಟಂಮ್ಸ್, ಸಿಟಿಜನ್ ಶಿಪ್, ಪೋರ್ಟ್ಸ್ ಸೆಕ್ಯುರಿಟಿ ಇಲಾಖೆಗಳು ಈ ಹಿಂದೆ ಆದೇಶ ಹೊರಡಿಸಿವೆ. ಈ ಮೂಲಕ ವಿಮಾನದಿಂದ ಪ್ರಯಾಣ ಮಾಡುವ ಮೊದಲು ತಮ್ಮ ಲಗೆಜ್ ನಲ್ಲಿ ಕ್ಯಾರಿ ಮಾಡುವ ವಸ್ತುಗಳ ನಿಖರ ಮಾಹಿತಿ ನೀಡಬೇಕು. ಒಂದು ವೇಳೆ ಕಸ್ಟಂ ರೂಲ್ಸ್ ವಿರುದ್ಧ ಹೋದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಬಹುದು.

advertisement

Leave A Reply

Your email address will not be published.