Karnataka Times
Trending Stories, Viral News, Gossips & Everything in Kannada

Toll: ಇಂತಹ ಸಮಯದಲ್ಲಿ ಟೋಲ್ ಕಟ್ಟಲೇಬೇಡಿ! ಬಂತು ಹೊಸ ರೂಲ್ಸ್, ಟೋಲ್ ಸಿಬ್ಬಂದಿಗೂ ಕ್ಯಾರೇ ಎನ್ನಬೇಡಿ

advertisement

ನಮ್ಮ ಭಾರತ ದೇಶದಲ್ಲಿ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ಚೀನಾ ದೇಶವನ್ನು ಕೂಡ ಹಿಂದೆ ಹಾಕಿ ಭಾರತ ದೇಶ 140 ಕೋಟಿಗೂ ಅಧಿಕ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕು ಅಂದರೆ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಕೂಡ ಚೆನ್ನಾಗಿರಬೇಕು. ಇದೇ ನಿಟ್ಟಿನಲ್ಲಿ ಭಾರತ ಸರ್ಕಾರ ಹೆಚ್ಚು ಹೆಚ್ಚು ಬಸ್ಸುಗಳನ್ನು ಹಾಗೂ ವಾಹನಗಳನ್ನು ಕೂಡ ಟ್ರಾನ್ಸ್ಪೋರ್ಟ್ ವ್ಯವಸ್ಥೆಯನ್ನು ನೋಡಿಕೊಂಡು ಬಿಡುಗಡೆ ಮಾಡುತ್ತಿದೆ.

ಅದೇ ದಿಕ್ಕಿನಲ್ಲಿ ಇನ್ನೊಂದು ಕಡೆಯಲ್ಲಿ ಭಾರತ ಸರ್ಕಾರ ಆ ವಾಹನಗಳು ಓಡಾಡುವುದಕ್ಕೆ ಚೆನ್ನಾಗಿರುವಂತಹ ರಸ್ತೆಗಳನ್ನು ಕೂಡ ನಿರ್ಮಾಣ ಮಾಡುವುದಕ್ಕೆ ಹಣವನ್ನು ಖರ್ಚು ಮಾಡ್ತಾ ಇದೆ. ಇನ್ನು ಈ ಹಣವನ್ನು ಭಾರತ ಸರ್ಕಾರ ಬೇರೆ ಬೇರೆ ಯೋಜನೆಗಳ ಮೂಲಕ ಹಣವನ್ನು ಪಡೆದು ಹೂಡಿಕೆ ಮಾಡ್ತಾ ಇದೆ.

 

Image Source: Mint

 

ಈ ರೋಡುಗಳು ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳ ಜೊತೆಗೆ ಅತ್ಯಂತ ಉತ್ತಮ ಕ್ವಾಲಿಟಿಯ ರೋಡುಗಳಾಗಿರುತ್ತವೆ. ಹೀಗಾಗಿ ಈ ರೋಡುಗಳಲ್ಲಿ ಹೋಗುವುದಕ್ಕೆ ವಾಹನಗಳು ಟೋಲ್ ಪ್ಲಾಜಗಳಲ್ಲಿ (Toll Plaza) ಶುಲ್ಕವನ್ನು ಕಟ್ಟಬೇಕಾಗಿರುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಶುಲ್ಕವನ್ನ ಕಟ್ಟುವ ವಿಚಾರಕ್ಕೆ ಬಂದರೆ ನೀವು ನೋಡಿರುವ ಹಾಗೆ ಹೆದ್ದಾರಿಗಳಲ್ಲಿ ಈ ರೀತಿಯ ಶುಲ್ಕವನ್ನು ಒಟ್ಟುಗೂಡಿಸುವುದಕ್ಕಾಗಿ ಟೋಲ್ ಪ್ಲಾಜ (Toll Plaza) ಗಳನ್ನು ನಿರ್ಮಾಣ ಮಾಡಲಾಗಿದೆ.

ಉತ್ತಮವಾದ ರೋಡ್ ಗಳನ್ನು ನೀಡಿದ ಮೇಲೆ ಸರ್ಕಾರ ಈ ಟೋಲ್ ಪ್ಲಾಜಗಳ (Toll Plaza) ಮೂಲಕ ಹಣವನ್ನು ಒಟ್ಟುಗೂಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಆದರೆ ಟೋಲ್ ಪ್ಲಾಜಗಳಲ್ಲಿ ಈ ರೀತಿ ಮಾಡಿದರೆ ನೀವು ಹಣ ಕೊಡದೆ ಇದ್ರೂ ಕೂಡ ಯಾವುದೇ ಸಮಸ್ಯೆ ಆಗೋದಿಲ್ಲ. ಈ ವಿಚಾರ ಸಾಕಷ್ಟು ಜನರಿಗೆ ತಿಳಿಯದೆ ಇರಬಹುದು ಹಾಗಾಗಿ ಇವತ್ತಿನ ಈ ಲೇಖನದಲ್ಲಿ ಅದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

advertisement

ಈ ರೀತಿ ಮಾಡಿದ್ರೆ ಟೋಲ್ ಪ್ಲಾಜಗಳಲ್ಲಿ ಹಣ ನೀಡಬೇಕಾಗಿಲ್ಲ:

 

Image Source: Autocar India

 

ಅತ್ಯುತ್ತಮ ಕ್ವಾಲಿಟಿಯ ರೋಡುಗಳನ್ನು ನಿರ್ಮಾಣ ಮಾಡಿದ ನಂತರ ಅವುಗಳ ಟೋಲ್ ಪ್ಲಾಜ ಗಳ ಶುಲ್ಕದ ಮೂಲಕ ವಸೂಲು ಮಾಡಲಾಗುತ್ತದೆ. ಸಾರಿಗೆ ಇಲಾಖೆ ನಡೆಯುವುದೇ ಈ ರೀತಿಯಲ್ಲಿ. ಹೀಗಾಗಿ ಟೋಲ್ ಪ್ಲಾಜಗಳಲ್ಲಿ ಶುಲ್ಕವನ್ನು ಕಟ್ಟೋದಕ್ಕೆ ತುಂಬಾ ಸಮಯ ಕಾಯಬಾರದು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ FASTag ಅನ್ನು ತಮ್ಮ ವಾಹನದ ಮೇಲೆ ಅಂಟಿಸಿಕೊಂಡು ಬಿಡುತ್ತಾರೆ.

ಈ ಮೂಲಕ ಟೋಲ್ ಪ್ಲಾಜಗಳಲ್ಲಿ ಅಲ್ಲಿನ ಸಿಬ್ಬಂದಿಯ ಸ್ಕ್ಯಾನರ್ಗಳು ಸ್ಕ್ಯಾನ್ ಮಾಡಿಕೊಳ್ಳುತ್ತವೆ ಹಾಗೂ ನಿಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿರುವಂತಹ ಹಣ ನಿರ್ದಿಷ್ಟವಾಗಿ ಕಡಿತಗೊಳ್ಳುತ್ತದೆ. ಆದರೆ ಇಲ್ಲಿ ಒಂದು ಪರಿಸ್ಥಿತಿ ನಿರ್ಮಾಣವಾದಾಗ ನೀವು ಹಣವನ್ನು ಕಟ್ಟಬೇಕಾದ ಅಗತ್ಯ ಇರುವುದಿಲ್ಲ.

ಅದೇನೆಂದರೆ ಒಂದು ವೇಳೆ ನೀವು ಟೋಲ್ ಪ್ಲಾಜಾ ಗಳಿಗೆ ಹೋಗೋದಕ್ಕಿಂತ ಸ್ವಲ್ಪ ಮುಂಚೆ ಅವರ ಸ್ಕ್ಯಾನರ್ ಹಾಳಾಗಿದ್ದು ಅದು ನಿಮ್ಮ FASTag ನ ಕೋಡ್ ಅನ್ನು ರೀಡ್ ಮಾಡೋದಕ್ಕೆ ಸಾಧ್ಯವಾಗಿಲ್ಲ ಅಂದ್ರೆ ಆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಕ್ಯಾಶ್ ಕೇಳಬಹುದು. ಆಗ ನೀವು ಹಣವನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ ಯಾಕೆಂದರೆ ತಪ್ಪು ಅವರಿಂದ ಆಗಿರೋದು. ಹೀಗಾಗಿ ಯಾವುದೇ ಹಣ ನೀಡಿದೆ ನೀವು ಅಲ್ಲಿಂದ ಹೋಗಬಹುದಾಗಿದೆ.

ಅಷ್ಟಾಗಿಯೂ ಕೂಡ ಅವರು ನಿಮ್ಮ ಬಳಿ ಹಣವನ್ನು ನೀಡಲೇಬೇಕು ಅನ್ನೋದಾಗಿ ಕೇಳಿದರೆ ಅವರ ವಿರುದ್ಧ ನೀವು 1033 ನಂಬರ್ ಗೆ ಕರೆ ಮಾಡುವ ಮೂಲಕ ದೂರವನ್ನು ಕೂಡ ಸಲ್ಲಿಸಬಹುದಾಗಿದೆ. ಸಾಕಷ್ಟು ಜನರಿಗೆ ಈ ನಿಯಮದ ಬಗ್ಗೆ ಮಾಹಿತಿ ತಿಳಿದಿರುವಂತಹ ಸಾಧ್ಯತೆ ಕಡಿಮೆ. ಹೀಗಾಗಿ ನೀವು ಕೂಡ ನಿಮ್ಮ ಸ್ನೇಹಿತರ ಜೊತೆಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬಹುದಾಗಿದೆ ಹಾಗೂ ಅವರಿಗೂ ಕೂಡ ಈ ಸಮಸ್ಯೆಯಿಂದ ಪಾರಾಗುವಂತೆ ಸಹಾಯ ಮಾಡಬಹುದು.

advertisement

Leave A Reply

Your email address will not be published.