Karnataka Times
Trending Stories, Viral News, Gossips & Everything in Kannada

Royal Enfield: ಮಾರ್ಕೆಟ್ ನ ಕಬ್ಜಾ ಮಾಡಲಿದೆ ರಾಯಲ್ ಎನ್ಫೀಲ್ಡ್ ನ ಹೊಚ್ಚ ಹೊಸ ಬೈಕ್! ಅತ್ಯಂತ ಕಡಿಮೆ ಬೆಲೆ

advertisement

ರಾಯಲ್ ಲುಕ್ಕಿನ ಬೈಕ್ ಗಳನ್ನು ತಯಾರು ಮಾಡುತ್ತಾ ಮಾರುಕಟ್ಟೆಯಲ್ಲಿ ಬಹು ದೊಡ್ಡ ಮಟ್ಟದ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ರಾಯಲ್ ಎನ್ಫೀಲ್ಡ್ ಬೈಕ್ ತಯಾರಿಕಾ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸ ರಾಯಲ್ ಎನ್ಫೀಲ್ಡ್ 350 ಬಾಬರ್ (Royal Enfield 350 Bobber) ಅನ್ನು ಪರಿಚಯಿಸಿದ್ದು, ಇದರ ವಿಶೇಷ ಲುಕ್ ಮತ್ತು ಬಿರುಗಾಳಿಯಂತಹ ಲಕ್ಷಣಗಳಿಗೆ ಗ್ರಾಹಕರು ಮನಸ್ಸೋತು ಹೋಗಿದ್ದಾರೆ. ಹೀಗೆ ಇಂತಹ ಅದ್ಭುತವಾದಂತಹ ಬೈಕಿನ ಒಟ್ಟು ಬೆಲೆ ಎಷ್ಟು? ಇಂಧನ ಕೆಪ್ಯಾಸಿಟಿ ಎಷ್ಟಿದೆ? ಹಾಗೂ ವಿಶೇಷಣಗಳೇನು? ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ರಾಯಲ್ ಎನ್ಫೀಲ್ಡ್ 350 ಬಾಬರ್:

 

Image Source: MIMS IT

 

ಸ್ನೇಹಿತರೆ, ಆನ್ಲೈನ್ ವೆಬ್ಸೈಟ್ಗಳಲ್ಲಿ ರಾಯಲ್ ಎನ್ಫೀಲ್ಡ್ 350 ಬಾಬರ್ (Royal Enfield 350 Bobber) ಕುರಿತಾದಂತಹ ಸಾಕಷ್ಟು ಮಾಹಿತಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದರ ಆಕರ್ಷಕ ನೋಟ (Attractive Look) ಹಾಗೂ ಲಕ್ಷಣಗಳ ಕುರಿತು ಮಾಹಿತಿ ತಿಳಿದಂತಹ ಜನರು ಖರೀದಿ ಮಾಡಲು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಆದರೆ ರಾಯಲ್ ಎನ್ಫೀಲ್ಡ್ ಕಂಪನಿ ವತಿಯಿಂದ ಈ ಹೊಸ ಮಾಡೆಲ್ನ ಬೈಕ್ ಯಾವಾಗ ಮಾರುಕಟ್ಟೆಗೆ ಲಾಂಚ್ ಆಗಲಿದೆ? ಎಂಬುದರ ಮಾಹಿತಿ ರಿವಿಲ್ ಮಾಡಿಲ್ಲ. ಬದಲಿಗೆ ಬೈಕಿನ ಸಾಕಷ್ಟು ವೈಶಿಷ್ಟ್ಯತೆಗಳು ಹಾಗೂ ವಿಶೇಷಣಗಳ (Features and Specifications) ಕುರಿತಾದ ಸಾಕಷ್ಟು ಮಾಹಿತಿಯನ್ನು ಕಂಪನಿಯ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹಂಚಿಕೊಂಡಿದೆ.

ಹೆಸರಿನಂತೆ ಬೈಕ್ನಲ್ಲಿದೆ ರಾಯಲ್- ವೈಶಿಷ್ಟ್ಯತೆಗಳು:

 

advertisement

Image Source: RushLane

 

ರಾಯಲ್ ಎನ್ಫೀಲ್ಡ್ ಹೊಸ ಮಾಡೆಲ್ ನಲ್ಲಿ ನೂತನ ಫೀಚರ್ಸ್ (Advanced Features) ಗಳನ್ನು ಅಳವಡಿಸಲಾಗಿದ್ದು ಫಿಯಲ್ ಇಂಡಿಕೇಟರ್, ಸ್ಪೀಡೋಮೀಟರ್, ಓಡೋಮೀಟರ್ (Odometer), ಸ್ಟ್ಯಾಂಡ್ ಅಲರಂ, ಲೋ ಫಿಯಲ್ ಇಂಡಿಕೇಟರ್, ಸೆಮಿ ಡಿಜಿಟಲ್ ಕ್ಲಸ್ಟರ್ (Semi Digital Cluster) ನಂತಹ 10 ಹಲವಾರು ನೂತನ ಅಳವಡಿಕೆಗಳನ್ನು ಕಾಣಬಹುದು.

ಶಕ್ತಿಯುತ ಎಂಜಿನ್ ಕೆಪ್ಯಾಸಿಟಿ:

ಈ ಹಿಂದಿನ ರಾಯಲ್ ಎನ್ಫೀಲ್ಡ್ ಮಾಡೆಲ್ (Old Royal Enfield) ಗಳಿಗಿಂತ ಅತಿ ಅದ್ಭುತ ಇಂಜಿನ್ ಕೆಪ್ಯಾಸಿಟಿಯಲ್ಲಿ ತಯಾರಾಗಿರುವ ರಾಯಲ್ ಎನ್ಫೀಲ್ಡ್ 350 ಬಾಬರ್ 349cc BS6 ಇಂಜಿನ್ ನಲ್ಲಿ ತಯಾರು ಮಾಡಲಾಗಿದ್ದು, ಬರೋಬ್ಬರಿ 20.2 bhp ಶಕ್ತಿ ಹಾಗೂ 27 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ರಾಯಲ್ ಎನ್ಫೀಲ್ಡ್ 350 ಲಭ್ಯ:

ಇನ್ಯಾವ ಬೈಕ್ನಲ್ಲಿಯೂ ಕಾಣದಂತಹ ಅತ್ಯಾಕರ್ಷಕ ವೈಶಿಷ್ಟ್ಯತೆಗಳು ಹಾಗೂ ರಾಯಲ್ ಲುಕ್ ನಲ್ಲಿ ತಯಾರು ಮಾಡಲಾಗಿರುವಂತಹ ಈ ಹೊಚ್ಚಹೊಸ ರಾಯಲ್ ಎನ್ಫೀಲ್ಡ್ 350 ಬಾಬರನ್ನು ಕೇವಲ 2,00,000 ದಿಂದ 2,20,000 ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ (Indian Market) ಮಾರಾಟ ಮಾಡುವ ಅಧಿಕೃತ ಮಾಹಿತಿಯನ್ನು ಕಂಪನಿ ಹಂಚಿಕೊಂಡಿದ್ದು, ನೀವೇನಾದರೂ EMI ರೂಪದಲ್ಲಿ ಬೈಕ್ ಖರೀದಿಸಲು ಇಚ್ಚಿಸಿದರೆ ಅದಕ್ಕೂ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಅತಿ ಕಡಿಮೆ ಹಣವನ್ನು ಡೌನ್ ಪೇಮೆಂಟ್ (Down Payment) ಮಾಡಿ ಬೈಕನ್ನು ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.