Karnataka Times
Trending Stories, Viral News, Gossips & Everything in Kannada

Rishabh Pant: ಈ ಬಾರಿಯ ಐಪಿಎಲ್ ನಲ್ಲಿ ಶತಕ ಬಾರಿಸಿದ್ರೂ ಕೂಡ ರಿಷಬ್ ಪಂತ್ ಟೀಮ್ ಇಂಡಿಯಾಗೇ ಬರೋದು ಕಷ್ಟ! ಕಾರಣ ಇಷ್ಟೇ

advertisement

ಡಿಸೆಂಬರ್ 2022 ರಲ್ಲಿ ನಡೆದ ಕಾರು ಅಪಘಾತದ ನ ನಂತರ ರಿಷಬ್ ಪಂತ್ ಎಷ್ಟರಮಟ್ಟಿಗೆ ಮರಳಿ ಕ್ರಿಕೆಟ್ ಆಟ ಆಡಬಹುದು ಎಂಬ ಪ್ರಶ್ನೆಗಳು ಬಹಳಷ್ಟು ಮಂದಿಯ ಮನಸಲ್ಲಿ ಮೂಡಿತು. ಆಸ್ಟ್ರೇಲಿಯಾದಲ್ಲಿ ಪಂತ್ (Rishabh Pant) ನೀಡಿದ್ದ ಪ್ರದರ್ಶನ ಹಾಗೂ ಟೆಸ್ಟ್ ಮ್ಯಾಚ್ ನಲ್ಲಿ ಪಂತ್ ಭಾರತವನ್ನು ಗೆಲ್ಲಿಸಿದ್ದು ಇನ್ನೂ ಜನರ ಮನಸ್ಸಲ್ಲಿ ಉಳಿದಿದ್ದಾಗಲೇ ಈ ದುರ್ಘಟನೆ ನಡೆದು ಕ್ರಿಕೆಟ್ ಅಂಗಳದಿಂದ ಅವರು ದೂರ ಉಳಿಯಬೇಕಾಗಿ ಬಂದಿತ್ತು.

ಆದರೆ ನಿರಂತರ ಪರಿಶ್ರಮ ಹಾಗೂ ಕ್ರಿಕೆಟ್ ಆಡಬೇಕೆಂಬ ಛಲ ಪಂತ್ ಅವರನ್ನು ಮತ್ತೆ ಕ್ರಿಕೆಟ್ ಅಂಗಳಕ್ಕೆ ತಂದು ನಿಲ್ಲಿಸಿದೆ. ಈ ಬಾರಿಯ ಐಪಿಎಲ್ ನಲ್ಲಿ ದೆಹಲಿ ತಂಡವನ್ನು ಮುನ್ನಡೆಸುತ್ತಿರುವುದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅವರ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.

IPL ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಭಾರತದ ತಂಡದ ಪರ ಆಡುವುದು ಕಷ್ಟ ಸಾಧ್ಯ:

ಪಂತ್ ಅವರು ಐಪಿಎಲ್ (IPL) ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಕೂಡ ಅವರು ಭಾರತ ತಂಡದ ಪರ T20 ವಿಶ್ವಕಪ್ ಅನ್ನು ಆಡುವುದು ಕಷ್ಟ ಸಾಧ್ಯ ಎನ್ನಲಾಗಿದೆ. ಯಾವ ಕಾರಣಗಳಿಂದಾಗಿ ಐಪಿಎಲ್ ನ ಪ್ರದರ್ಶನ ಕೂಡ ಪಂತ್ ಅವರನ್ನು ಭಾರತೀಯ ತಂಡದ ಪರ ಆಡದಂತೆ ಮಾಡಲಿದೆ ಈಗ ನೋಡೋಣ.

ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಂತ್ ಸಾಧಾರಣ ಪ್ರದರ್ಶನ:

 

advertisement

Image Source: Jagran

 

ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ನೆನಪಿರುವಂತಹ ಪ್ರದರ್ಶನಗಳನ್ನು ಪಂತ್ (Rishabh Pant) ನೀಡಿದ್ದರೂ T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರು 22 ರ ಸರಾಸರಿ ಹಾಗೂ 120 ರ ಸ್ಟ್ರೈಕ್ ರೇಟ್ ನೊಂದಿಗೆ 987 ರನ್ ಗಳನ್ನಷ್ಟೇ ಕಲೆಹಾಕಿದ್ದಾರೆ. ಆಡಿರುವ 66 ಪಂದ್ಯಗಳಲ್ಲಿ ಕೇವಲ 3 ಅರ್ಧ ಶತಕಗಳನ್ನು ಅಷ್ಟೇ ಧರಿಸಿದ್ದಾರೆ.

ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಆಯ್ಕೆಗಳು ಹೆಚ್ಚಾಗಿವೆ:

ಈಗ ಭಾರತೀಯ ಆಯ್ಕೆದಾರರ ಮುಂದೆ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಗಳ ಆಯ್ಕೆಗಳು ಬಹಳ ಹೆಚ್ಚಾಗಿವೆ. ಜಿತೆಶ್ ಶರ್ಮ (Jitesh Sharma), ಸಂಜು ಸ್ಯಾಮ್ಸನ್ (Sanju Samson) ಅವರಂತಹ ಉತ್ತಮ ಪರ್ಫಾರ್ಮೆನ್ಸ್ ನೀಡುತ್ತಿರುವ ಟಿ 20 ಆಟಗಾರರು ಪಂತ್ ಅವರಿಗಿಂತ ಉತ್ತಮ ಆಯ್ಕೆ ಆಗಲಿದ್ದಾರೆ ಎಂದು ಆಯ್ಕೆದಾರರು ಪರಿಗಣಿಸಬಹುದು. ಅದರಲ್ಲೂ IPL Season ನಲ್ಲಿ ಜಿತೆಶ್ ಶರ್ಮ ಹಾಗೂ ಸಂಜು ಸ್ಯಾಮ್ಸನ್ ಸಾಧಾರಣವಾಗಿ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಅಂತಹ ಪ್ರದರ್ಶನ ಬಂದಲ್ಲಿ ಆಯ್ಕೆದಾರರು ಪಂತ್ ಅವರಿಗಿಂತ ಸ್ಯಾಮ್ಸನ್ ಅಥವಾ ಜಿತೆಶ್ ಶರ್ಮ ಅವರನ್ನು ಪರಿಗಣಿಸುವುದು ಸಾಧ್ಯವಿದೆ.

ಕೆಳ ಕ್ರಮದಲ್ಲಿ ಆಡುವ ವಿಕೆಟ್ ಕೀಪರ್ ನ ಹುಡುಕಾಟ:

ಭಾರತೀಯ ಆಯ್ಕೆದಾರರು ಕೆಳ ಕ್ರಮಾಂಕದಲ್ಲಿ ಆಡಲು ಸಾಮರ್ಥ್ಯವಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನ ಹುಡುಕಾಟದಲ್ಲಿ ಇದ್ದಾರೆ ಎನ್ನಲಾಗಿದೆ. ಮೇಲಿನ ಕ್ರಮದಲ್ಲಿ ಭಾರತದಲ್ಲಿ ಶುಭಮನ್ ಗಿಲ್ (Shubman Gill), ರೋಹಿತ್ ಶರ್ಮ (Rohit Sharma), ವಿರಾಟ್ ಕೊಹ್ಲಿ (Virat Kohli), ಸೂರ್ಯಕುಮಾರ್ ಯಾದವ್ (Suryakumar Yadav), ಹಾರ್ದಿಕ ಪಾಂಡ್ಯ (Hardik Pandya), ಶ್ರೇಯಸ್ ಐಯರ್, ಕೆ ಎಲ್ ರಾಹುಲ್ ಮುಂತಾದ ಘಟಾನುಘಟಿ ಆಟಗಾರರು ಇರುವುದರಿಂದ ಕೆಳ ಕ್ರಮಾಂಕದಲ್ಲಿ ಸ್ಥಿರತೆ ಒದಗಿಸಬಹುದಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನ್ನು ಹುಡುಕುತ್ತಿದ್ದಾರೆ. ಐ ಪಿ ಎಲ್ ನಲ್ಲಿ ಪಂತ್ ಅವರು ಮೇಲಿನ ಕ್ರಮಾಂಕದಲ್ಲಿ ಆಟ ಆಡುವುದರಿಂದ ಅವರ ಕೆಳ ಕ್ರಮಾಂಕದ ಕ್ಷಮತೆಯ ಬಗ್ಗೆ ಆಯ್ಕೆದಾರರಿಗೆ ಯಾವುದೇ ಭರವಸೆ ಬರುವುದು ಅನುಮಾನವೇ ಆಗಿದೆ.

advertisement

Leave A Reply

Your email address will not be published.