Karnataka Times
Trending Stories, Viral News, Gossips & Everything in Kannada

KSRTC: ಸರಕಾರಿ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ, KSRTC ಯಿಂದ ಅಧಿಕೃತ ಇನ್ನೊಂದು ಘೋಷಣೆ

advertisement

ಐದು ಗ್ಯಾರಂಟಿಗಳ ಪೈಕಿ ಜನರನ್ನು ಹೆಚ್ಚು ತಲುಪುತ್ತಿರುವುದು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ (Free Bus Travel) ನೀಡುವ ಶಕ್ತಿ ಯೋಜನೆ ಎನ್ನಬಹುದು. ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಆರಂಭವಾದ ಬಳಿಕ ಸರಕಾರಿ ಬಸ್ ನಲ್ಲಿ ಪ್ರಯಾಣಿಕ ಸಂಖ್ಯೆ ದುಪ್ಪಟ್ಟು ಆಗಿದೆ. ಅದರಲ್ಲೂ ಮಹಿಳೆಯರ ಪ್ರಯಾಣದಿಂದಾಗಿ ಪುರುಷರಿಗೆ ಬಸ್ ನಲ್ಲಿ ಸೀಟು ಸಿಗದೇ ನಿಂತೇ ಪ್ರಯಾಣ ಮಾಡುವಂತಾಗಿದೆ. ಹೀಗಾಗಿ ಬಸ್ ಗಳ ಸಂಖ್ಯೆಯು ಕಡಿಮೆ ಇದ್ದು‌ ಹೊಸ ಬಸ್ ಗಳ ಖರೀದಿಯ ವಿಚಾರವಾಗಿ ಇದೀಗ ಗುಡ್ ನ್ಯೂಸ್ ಒಂದನ್ನು ಸಂಚಾರ ನಿಗಮವು ನೀಡಿದೆ.

ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ:

 

Image Source: Star of Mysore

 

ಪ್ರತಿನಿತ್ಯ ಕೆಲಸಕ್ಕೆ ತೆರಳುವ ಮಹಿಳಾ ಪ್ರಯಾಣಿಕರು ಹೆಚ್ಚಿದ್ದು, ಕೆಲವೊಂದು ಗ್ರಾಮಂತರ ಪ್ರದೇಶದಲ್ಲಿ ಸರಕಾರಿ ಬಸ್  (Govt Bus) ಗಳ ವ್ಯವಸ್ಥೆ ಇಲ‌್ಲ‌‌. ಇಂತಹ ಪ್ರದೇಶಗಳಿಗೆ ಸರಕಾರಿ ಬಸ್ ಗಳು ಅಲ್ಲಿಯು ಕಾರ್ಯ ನಿರ್ವ ಹಿಸುವಂತೆ ಸೂಚಿಸಲಾಗಿದೆ. ಇನ್ನೂ ಶಕ್ತಿ ಯೋಜನೆ ಯಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ 50ರಷ್ಟು ಹೆಚ್ಚಳವಾಗಿದ್ದು, 250 ಹೊಸ ಬಸ್ ಗಳನ್ನು ಖರೀದಿಸಲು ಸೂಚನೆ ಕೂಡ ನೀಡಲಾಗಿತ್ತು.

ಈ ಸಿಹಿಸುದ್ದಿಯು ನೀಡಲಿದೆ:

advertisement

ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಶೀಘ್ರದಲ್ಲೇ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಲಿದೆ. ಹೌದು ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ಹವಾನಿಯಂತ್ರಿತ ಸ್ಲೀಪರ್ (Sleeper Bus) ಹಾಗೂ ಮಲ್ಟಿ ಆಕ್ಸಲ್ ಸೆಮಿ ಇಂಟೆಗ್ರಲ್ ಸೀಟರ್ ಬಸ್‌ (Multi Axle Semi Integral Seater Bus) ಗಳನ್ನು ಜಾರಿಗೆ ತರಲು ಮುಂದಾಗಿದೆ‌. ಈ ಬಸ್ ನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತನ್ನು ಸಹ ನೀಡಲಾಗಿದೆ.

Image Source: Cablo.cab

ಆರಾಮದಾಯಕ ಪ್ರಯಾಣ:

ಈ ಬಸ್‌ಗಳ‌ ಮೂಲಕ ಪ್ರಯಾಣಿಕರು ದೂರದ ಊರುಗಳಿಗೆ ಆರಾಮದಾಯಕವಾಗಿ, ಪ್ರಯಾಣಿಸಲು ಅನುಕೂಲವಾಗಲಿದೆ. ಈ ಮೂಲಕ ಶೀಘ್ರದಲ್ಲಿಯೇ 20 ಸ್ಲೀಪರ್‌ ಮತ್ತು 20 ಸೀಟರ್ ಬಸ್‌ಗಳನ್ನು ಜಾರಿಗೆ ತರಲಿದೆ. ಹಾಗಾಗಿ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತಷ್ಟು ಪ್ರಯಾಣ ಸುಲಭ ವಾಗಲಿದೆ.

ಈ ವೈಶಿಷ್ಟ್ಯ ಇರಲಿದೆ:

  • ಈ ಬಸ್ ನಲ್ಲಿ 3 ಕ್ಯಾಮೆರಾಗಳು, ಎಮೆರ್ಜೆನ್ಸಿ ಪ್ಯಾನಿಕ್ ಬಟನ್, ಫೈರ್ ಡಿಟೆಕ್ಷನ್ ಸಿಸ್ಟಮ್ ಅನ್ನು ಈ ಬಸ್‌ಗಳು ಹೊಂದಿರಲಿದೆ.
  • ಪ್ರತಿಯೊಂದು ಬರ್ತ್‌ಗಳಿಗೂ ಬ್ಯಾಕ್‌ರೆಸ್ಟ್‌ನ್ನು ಕೂಡ ನೀಡಲಾಗಿದೆ.
  • ಬಸ್ ನಲ್ಲಿ‌ ಸುಖಕರವಾಗಿ ನಿದ್ರಿಸಲು ಉತ್ತಮ ಗುಣಮಟ್ಟದ ಕುಶನ್ ಬರ್ತ್‌ ಹಾಗೂ ದಿಂಬುಗಳು ಇರಲಿದೆ.
  • ಈ ಬಸ್‌ಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಇತ್ಯಾದಿ ಪ್ರದೇಶದಿಂದ ಮೊದಲಿಗೆ ಎಂಟ್ರಿ ನೀಡಲಿದೆ ಎನ್ನಲಾಗಿದೆ.

advertisement

Leave A Reply

Your email address will not be published.