Karnataka Times
Trending Stories, Viral News, Gossips & Everything in Kannada

Best Medical Colleges: ಅತೀ ಕಡಿಮೆ ಖರ್ಚಿನಲ್ಲಿ MBBS ಮಾಡಬಹುದಾದಂತಹ ದೇಶದ ಬೆಸ್ಟ್ ಮೆಡಿಕಲ್ ಕಾಲೇಜುಗಳು ಇಲ್ಲಿವೆ!

advertisement

ಪ್ರಸ್ತುತ ಜಗತ್ತಿನಲ್ಲಿ (MBBS) ಪೂರ್ತಿಗೊಳಿಸಿ ಉತ್ತಮ ವೈದ್ಯರಾಗಬೇಕು ಎಂಬುದು ಎಲ್ಲಾ ಯುವ ಜನಾಂಗಕ್ಕೆ ಇರುವಂತಹ ಗುರಿಯಾಗಿದೆ. ಆದರೆ ಎಂಬಿಬಿಎಸ್ ಪದವಿ ಪೂರ್ತಿಗೊಳಿಸಲು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಅಧಿಕ ಮೊತ್ತದಲ್ಲಿ ಖರ್ಚು ಮಾಡಬೇಕಾಗುತ್ತದೆ‌. ಮತ್ತು ಈ ಕಾರಣಗಳಿಂದ ಹಲವರು ತಮಗಿರುವ ಗುರಿಯನ್ನು ಅರ್ಧದಲ್ಲೇ ಬಿಟ್ಟು ಬಿಡುತ್ತಾರೆ. ಮತ್ತು ಇನ್ನು ಕೆಲವರು ತಮಗಿರುವ ಗುರಿಯನ್ನು ಬದಲಾಯಿಸಿಕೊಳ್ಳುತ್ತಾರೆ.

ಇನ್ನು ಕೆಲವೊಬ್ಬರು ಎಂಬಿಬಿಎಸ್ (MBBS) ಪದವಿಯನ್ನು ಪೂರ್ತಿಗೊಳಿಸುವ ಇಚ್ಛೆಯಿಂದ ತಮ್ಮ ಗುರಿಯನ್ನು ತಲುಪುವ ಸಲುವಾಗಿ ತಿಳಿಯದೆ ಹೆಚ್ಚು ಹಣವನ್ನು ಖರ್ಚು ಮಾಡಿ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಳ್ಳುತ್ತಾರೆ. ಇನ್ನು ಎಂಬಿಬಿಎಸ್ ಪದವಿ ಪೂರ್ತಿಗೊಳಿಸಲು ಮೊದಲಿಗೆ ನೀಟ್ (NEET) ಪರಿಕ್ಷೆಯಲ್ಲಿ ಉತ್ತೀರ್ಣ ಅಥವಾ ಪಾಸ್ ಆಗಬೇಕಾಗುತ್ತದೆ. ಕೆಲವರು ನೀಟ್ ಪರೀಕ್ಷೆಯನ್ನು ಪೂರ್ಣಗೊಳಿಸಲು ತಯಾರಿಗಳನ್ನು ಕೂಡ ನಡೆಸುತ್ತಾ ಇರುತ್ತಾರೆ.

ಇನ್ನು ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಲು ಉತ್ತಮವಾದಂತಹ ಕಾಲೇಜು ಯಾವುದು ಎಂಬುದರ ಮಾಹಿತಿಯನ್ನು ಕೆಲವೊಬ್ಬರು ಸರಿಯಾಗಿ ತಿಳಿದುಕೊಳ್ಳದೇ ಇರುತ್ತಾರೆ. ಇನ್ನು ಕಡಿಮೆ ಬೆಲೆಯಲ್ಲಿ ಉತ್ತಮವಾದಂತಹ ಕಾಲೇಜು ಮತ್ತು ನೀಟ್ ತರಬೇತಿ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಭಾರತದಲ್ಲಿ ಎಂಬಿಬಿಎಸ್ ಪೂರ್ತಿಗೊಳಿಸಲು ಇರುವ ಕಡಿಮೆ ಶುಲ್ಕದ ಕಾಲೇಜುಗಳ ಸಂಖ್ಯೆ ಮೂರು (03) ಹಾಗಾದರೆ ಆ ಮೂರು ಕಾಲೇಜುಗಳು ಯಾವುವು ಎಂದು ನೋಡುವುದಾದರೆ.

RG Kar Medical College and Hospital:

 

Image Source: Shiksha

 

ಮೊದಲಿಗೆ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (RG Kar Medical College and Hospital) ಇದು ಕೊಲ್ಕತ್ತಾದಲ್ಲಿ ಉಪಸ್ಥಿತಿಯಲ್ಲಿದೆ ಮತ್ತು ಇದರ ಕಾಲೇಜ್ ನ ಎಂಬಿಬಿಎಸ್ ಪದವಿಯ ಫೀಸ್ ಒಂದು ವರ್ಷಕ್ಕೆ ರೂ 24000- ರೂ 40500 ವರೆಗೆ ಇದೆ.

advertisement

Bangalore Medical College and Research Institute:

 

 

ಎರಡನೆಯದಾಗಿ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ (Bangalore Medical College and Research Institute) ಇದು ಬೆಂಗಳೂರಿನಲ್ಲಿದೆ ಮತ್ತು ಈ ಕಾಲೇಜ್ ನ ಎಂಬಿಬಿಎಸ್ ಪದವಿಯ ಫೀಸ್ ಒಂದು ವರ್ಷಕ್ಕೆ ರೂ 70,200.

Christian Medical College:

 

Image Source: Collegedunia

 

ಇನ್ನು ಮೂರನೆಯದಾಗಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (Christian Medical College) ಇದು ತಮಿಳುನಾಡು ರಾಜ್ಯದ ವೆಲ್ಲೂರು ಎಂಬ ನಗರದಲ್ಲಿ ಉಪಸ್ಥಿತಿಯಲ್ಲಿದೆ ಮತ್ತು ಈ ಕಾಲೇಜ್ ನ ಎಂಬಿಬಿಎಸ್ ಪದವಿಯ ಫೀಸ್ ಒಂದು ವರ್ಷಕ್ಕೆ ರೂ 56,330 ಆಗಿದ್ದು… ಈ ಮೂರು ಕಾಲೇಜುಗಳನ್ನು ಭಾರತದಲ್ಲಿ ಅತಿ ಕಡಿಮೆ ಶುಲ್ಕದ ಎಂಬಿಬಿಎಸ್ ಪದವಿ ಕಾಲೇಜು ಎಂದು ತಿಳಿಯಬಹುದಾಗಿದೆ.

advertisement

Leave A Reply

Your email address will not be published.