Karnataka Times
Trending Stories, Viral News, Gossips & Everything in Kannada

Electric Bike: ಸಿಂಗಲ್ ಚಾರ್ಜ್ ಗೆ 220Km ಮೈಲೇಜ್ ಕೊಡುತ್ತೆ ಈ ಬೈಕ್! ಭಾರತದಲ್ಲಿ ಕಡಿಮೆ ಬೆಲೆಗೆ

advertisement

ಒಂದು ವೇಳೆ ನೀವು ಕೂಡ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡುವಂತಹ ಯೋಜನೆಯನ್ನು ರೂಪಿಸಿಕೊಂಡಿದ್ದರೆ ಹಾಗೂ ಯಾವ ಎಲೆಕ್ಟ್ರಿಕ್ ಬೈಕ್ (Electric Bike) ಅನ್ನು ಖರೀದಿ ಮಾಡಬೇಕು ಎನ್ನುವಂತಹ ಗೊಂದಲದಲ್ಲಿ ಇದ್ದರೆ ಇವತ್ತಿನ ಲೇಖನ ನಿಮಗಾಗಿ ಸಾಕಷ್ಟು ಉಪಯುಕ್ತಕಾರಿಯಾಗಿ ಸಾಬೀತಾಗಲಿದೆ. ಹೌದು ನಾವ್ ಮಾತಾಡ್ತಿರೋದು ಲಾಂಗ್ ರೇಂಜ್ ಹಾಗೂ ಉತ್ತಮ ಅಡ್ವಾನ್ಸ್ ಫೀಚರ್ಗಳನ್ನು ನೀಡುವ MX Moto M16 ಎಲೆಕ್ಟ್ರಿಕ್ ಬೈಕ್ ಬಗ್ಗೆ. ಬನ್ನಿ ಈ ಎಲೆಕ್ಟ್ರಿಕ್ ಬೈಕಿನ ಬೆಲೆ ಸಹಿತ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ.

MX Moto M16 Electric Bike: 

 

Image Source: BikeDekho

 

ಕ್ರೂಜರ್ ಬೈಕ್ ಡಿಸೈನ್ ನಲ್ಲಿ ಕಾಣಿಸಿಕೊಳ್ಳುವಂತಹ ಎಲೆಕ್ಟ್ರಿಕ್ ಬೈಕ್ (Electric Bike) ಹಿಂದೆ ಕುಳಿತುಕೊಳ್ಳುವವರೆಗೂ ಕೂಡ ಆರಾಮದಾಯಕ ಆಸನದ ವ್ಯವಸ್ಥೆಯನ್ನು ಮಾಡಿದೆ. ಈ ಬೈಕಿಗೆ ಪವರ್ಫುಲ್ ಮೆಟಲ್ ಬಾಡಿಯನ್ನು ಅಳವಡಿಸಲಾಗಿದೆ. ಹೀಗಾಗಿ ಯಾವುದೇ ರೀತಿಯ ರಸ್ತೆಗಳ ಮೇಲೆ ಕೂಡ ಇದು ಆರಂಭದಾಯಕ ರೈಡಿಂಗ್ ಎಕ್ಸ್ಪಿರಿಯನ್ಸ್ ನೀಡುತ್ತದೆ. ಕೇವಲ ನೋಡುವುದಕ್ಕೆ ಸ್ಟೈಲಿಶ್ ಲುಕ್ ಮಾತ್ರವಲ್ಲದೆ MX Moto M16 ಎಲೆಕ್ಟ್ರಿಕ್ ಬೈಕ್ ಸಾಕಷ್ಟು ವಿಚಾರದಲ್ಲಿ ನಿಮಗೆ ಉತ್ತಮ ಸೌಲಭ್ಯಗಳನ್ನು ನೀಡಲಿದೆ.

advertisement

ಎಲ್ಇಡಿ ಹೆಡ್ ಲೈಟ್, ಟ್ರಿಪಲ್ ಡಿಸ್ಕ್ ಬ್ರೇಕ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಆಪ್ ಕನೆಕ್ಟಿವಿಟಿ, ಆಂಟಿ ಸ್ಕಿಡ್ ಅಸಿಸ್ಟೆಂಟ್, ಪಾರ್ಕಿಂಗ್ ಅಸಿಸ್ಟೆಂಟ್, ನ್ಯಾವಿಗೇಶನ್, ಕಾಲಿಂಗ್ ಹಾಗೂ ಬ್ಲೂಟೂತ್ ಸೌಲಭ್ಯ ಸೇರಿದಂತೆ ಸಾಕಷ್ಟು ವಿಶೇಷತೆಗಳು ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. MX Moto M16 ಎಲೆಕ್ಟ್ರಿಕ್ ಬೈಕ್ ನಿಜಕ್ಕೂ ಕೂಡ ಈ ಸೆಗ್ಮೆಂಟ್ ನಲ್ಲಿ ತನ್ನ ಕಾಂಪಿಟಿಷನ್ ನಲ್ಲಿ ಇರುವಂತಹ ಬೈಕುಗಳಿಗೆ ಟಕ್ಕರ್ ಕಾಂಪಿಟಿಷನ್ ನೀಡುತ್ತದೆ.

MX Moto M16 Range & Price: 

 

Image Source: Times Bull

 

4000 ವ್ಯಾಟ್ಗಳ ಬಿಎಲ್ ಡಿಸಿ ಮೋಟಾರ್ ಅನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ. ಸಿಂಗಲ್ ಚಾರ್ಜ್ ನಲ್ಲಿ ನಿಮಗೆ ಈ ಬೈಕ್ 160 ರಿಂದ 220 ಕಿಲೋ ಮೀಟರ್ ಗಳವರೆಗೆ ಮೈಲೇಜ್ ಕೊಡುತ್ತದೆ. ಫುಲ್ ಚಾರ್ಜ್ ಮಾಡೋದಕ್ಕೆ ಸರಿ ಸುಮಾರು 3 ಗಂಟೆಗಳ ಆಸುಪಾಸಿನ ಸಮಯವನ್ನು ಪಡೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಬೈಕಿನ (Electric Bike) ವಾರಂಟಿ ಬಗ್ಗೆ ಮಾತನಾಡುವುದಾದರೆ ಎಂಟು ವರ್ಷ ಅಥವಾ 80,000 ಕಿಲೋಮೀಟರ್ಗಳ ವಾರಂಟಿಯನ್ನು ನೀಡುತ್ತದೆ.

ಇನ್ನು ಈ ಎಲೆಕ್ಟ್ರಿಕ್ ಬೈಕಿನ (MX Moto M16 Electric Bike) ಬೆಲೆ 1.98 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಆಗಿದೆ. ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಹಾಗೂ ಪರಿಸರ ಮಾಲಿನ್ಯದ ಕಾರಣದಿಂದಾಗಿ ನೀವು ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ರೆ ಇದು ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಬೈಕ್ ಆಗಿದೆ.

advertisement

Leave A Reply

Your email address will not be published.